Advertisement

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

04:40 PM Dec 24, 2024 | Team Udayavani |

ಉತ್ತರಪ್ರದೇಶ: ಬಾಲಕನೊಬ್ಬನನ್ನು ಆತನ ಸ್ನೇಹಿತರೆ ಬರ್ತ್ ಡೇ ಪಾರ್ಟಿಗೆ ಕರೆದು ಆತನ ಬಟ್ಟೆ ಬಿಚ್ಚಿಸಿ, ಮೈಮೇಲೆ ಮೂತ್ರ ವಿಸರ್ಜಿಸಿ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮನನೊಂದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ.

Advertisement

ಈ ಘಟನೆ ಕಳೆದ ಶುಕ್ರವಾರ(ಡಿ.20) ನಡೆದಿದ್ದು. ಆದಿತ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.

ಏನಿದು ಪ್ರಕರಣ:
ಕಳೆದ ಶುಕ್ರವಾರ(ಡಿ.20) ರಂದು ಬರ್ತ್ ಡೇ ಪಾರ್ಟಿಗೆ ಬರುವಂತೆ ಆದಿತ್ಯನಿಗೆ ಆತನ ಗೆಳೆಯರು ಹೇಳಿದ್ದಾರೆ ಅದರಂತೆ ಆದಿತ್ಯ ತನ್ನ ಮನೆಯಲ್ಲಿ ಸ್ನೇಹಿತನ ಮನೆಗೆ ಪಾರ್ಟಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಾನೆ, ಖುಷಿ ಖುಷಿಯಲ್ಲಿ ಪಾರ್ಟಿಗೆ ಹೋದ ಆದಿತ್ಯನಿಗೆ ಆತನ ಗೆಳೆಯರು ಮೋಸ ಮಾಡಿದ್ದಾರೆ ಅಂದರೆ ಪಾರ್ಟಿಯಲ್ಲಿ ಸೇರಿದ್ದ ಹಲವಾರು ಮಂದಿಯ ಎದುರು ಆದಿತ್ಯನ ಬಟ್ಟೆ ಬಿಚ್ಚಿಸಿ ಆತನ ಮೇಲೆ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದಾರೆ ಅಲ್ಲದೆ ಘಟನೆಯ ವಿಡಿಯೋ ಕೂಡ ಮಾಡಿದ್ದಾರೆ, ಒಂದು ವೇಳೆ ವಿಚಾರ ಯಾರಲ್ಲಾದರೂ ಹೇಳಿದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದಾದ ಬಳಿಕ ತಡರಾತ್ರಿ ಮನೆಗೆ ಬಂದ ಆದಿತ್ಯ ಮರುದಿನ ಬೆಳಿಗ್ಗೆ ತನ್ನ ಮನೆಯವರಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾನೆ ಬಳಿಕ ಪೋಷಕರ ಜೊತೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಘಟನೆ ಬಗ್ಗೆ ದೂರು ನೀಡಿದ್ದಾರೆ ಆದರೆ ಆದಿತ್ಯನ ಮನೆಯವರು ನೀಡಿದ ದೂರನ್ನು ಪೊಲೀಸರು ಸ್ವೀಕರಿಸಲಿಲ್ಲ ಬದಲಾಗಿ ಅಲ್ಲಿಯೂ ಈತನನ್ನು ಅವಮಾನಿಸಿದ್ದಾರೆ, ಇದಾದ ಬಳಿಕ ಎರಡನೇ ಬಾರಿ ಠಾಣೆಗೆ ಹೋಗಿ ದೂರು ನೀಡಿದರೂ ದೂರು ದಾಖಲಿಸಿಕೊಳ್ಳದೇ ವಾಪಸು ಕಳುಹಿಸಿಕೊಟ್ಟಿದ್ದಾರೆ, ಇದರಿಂದ ಮನನೊಂದ ಆದಿತ್ಯ ಮನೆಯ ಬಳಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆಯಿಂದ ರೊಚ್ಚಿಗೆದ್ದ ಆದಿತ್ಯನ ಕುಟುಂಬಸ್ಥರು ಮೃತದೇಹವನ್ನು ಪೊಲೀಸ್ ಠಾಣೆಯ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ದೊಡ್ಡ ಮಟ್ಟಕ್ಕೆ ತಿರುಗುತ್ತಿದ್ದಂತೆ ಉನ್ನತ ಅಧಿಕಾರಿಗಳು ದೌಡಾಯಿಸಿದ್ದಾರೆ ಈ ವೇಳೆ ಠಾಣೆಯ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲು ನಿರಾಕರಿಸಿರುವ ವಿಚಾರ ಗೊತ್ತಾಗಿದೆ ಈ ಘಟನೆಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Advertisement

ವಿಡಿಯೋ ವೈರಲ್ ಆಗುವ ಭಯದಿಂದ ಆತ್ಮಹತ್ಯೆ:
ಇನ್ನು ಪಾರ್ಟಿ ದಿನ ಸ್ನೇಹಿತರು ಆದಿತ್ಯನ ಬಟ್ಟೆ ಬಿಚ್ಚಿ, ಮೈ ಮೇಲೆ ಮೂತ್ರ ವಿಸರ್ಜಿಸಿ ಹಿಂಸೆ ನೀಡಿದ ವಿಡಿಯೋ ಕೂಡ ಸ್ನೇಹಿತರು ಮಾಡಿದ್ದು ಎಲ್ಲಿ ವಿಡಿಯೋ ವೈರಲ್ ಆಗಿ ತನ್ನ ಮರ್ಯಾದೆ ಹೋಗುತ್ತದೆ ಎಂದು ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆದಿತ್ಯನ ಚಿಕ್ಕಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಾಲ್ವರು ಆರೋಪಿಗಳ ಬಂಧನ:
ಘಟನೆಗೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Tollywood: ಸಂಧ್ಯಾ ಥಿಯೇಟರ್‌ ಕಾಲ್ತುಳಿತ ಪ್ರಕರಣ; ಅಲ್ಲು ಅರ್ಜುನ್‌ ಬೌನ್ಸರ್‌ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next