Advertisement
ಆದರೆ ಮದುವೆಯ ಕಾರ್ಯಕ್ರಮಗಳು ನಡೆಯುತ್ತಿದ್ದಂತೆಯೇ ಸೌಂದರ್ಯಾ ಅವರ ತಂದೆಯು ಶಾಸಕನ ನಿವಾಸದ ಎದುರು ಪೆಟ್ರೋಲ್ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬೆಳವಣಿಗೆಯೂ ನಡೆದಿದೆ.
ಜಾತಿ ವಿಚಾರವೇ ಇಲ್ಲಿ ತಡೆಗೋಡೆಯಾಗಿದೆ. ಅರ್ಚಕರ ಕುಟುಂಬದ ಸದಸ್ಯರು, ಪುತ್ರಿಯನ್ನು ಶಾಸಕನ ಕಡೆಯವರು ಅಪಹರಿಸಿದ್ದಾರೆ ಎಂದು ದೂರಿದ್ದಾರೆ.
Related Articles
Advertisement
ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ “ಶಾಸಕ ಮತ್ತು ಸೌಂದರ್ಯಾ ನಡುವೆ 4 ವರ್ಷಗಳಿಂದ ಪ್ರೇಮವಿತ್ತು. ಅವರು ಪ್ರಾಪ್ತ ವಯಸ್ಕರಾಗುವ ಮೊದಲೇ ಇಬ್ಬರೂ ಪ್ರೇಮಪಾಶದಲ್ಲಿ ಸಿಲುಕಿದ್ದರು’ ಎಂದು ಹೇಳಿದ್ದಾರೆ.
ಆದರೆ ಶಾಸಕ ಪ್ರಭು ಅವರು, ನಾಲ್ಕು ತಿಂಗಳುಗಳಿಂದ ಇಬ್ಬರ ನಡುವೆ ಪರಿಚಯವಾಗಿತ್ತು ಎಂದಿದ್ದಾರೆ.