Advertisement

ಖ್ಯಾತ ಪಂಜಾಬಿ ಗಾಯಕ ದಲೆರ್‌ ಮಹೆಂದಿಗೆ 2 ವರ್ಷ ಜೈಲು

09:03 PM Jul 14, 2022 | Team Udayavani |

ಪಾಟಿಯಾಲ: ಖ್ಯಾತ ಪಂಜಾಬಿ ಗಾಯಕ ದಲೆರ್‌ ಮೆಹೆಂದಿ ಅವರಿಗೆ 2 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ.

Advertisement

2003ರಲ್ಲಿ ಬೆಳಕಿಗೆ ಬಂದಿದ್ದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಅವರ ವಿರುದ್ಧ ಕೇಸು ದಾಖಲಿಸಲಾಗಿತ್ತು.

2018ರಲ್ಲಿ ಇದೇ ಪ್ರಕರಣದ ವಿರುದ್ಧ ಕೆಳಹಂತದ ಕೋರ್ಟ್‌ ನೀಡಿದ್ದ 2 ವರ್ಷ ಜೈಲು ಶಿಕ್ಷೆ ವಿರುದ್ಧ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಕೋರ್ಟ್‌ ಶಿಕ್ಷೆಯನ್ನು  ಎತ್ತಿಹಿಡಿದಿದೆ.

ಇದರ ಜತೆಗೆ ತಮ್ಮನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಬೇಕು ಎಂದು ಸಲ್ಲಿಸಿದ್ದ ಕೋರಿಕೆಯನ್ನೂ ಕೋರ್ಟ್‌ ತಿರಸ್ಕರಿಸಿದೆ. ಇದಾದ ಬಳಿಕ ಪೊಲೀಸರು ಅವರನ್ನು ಬಂಧಿಸಿ,  ಪಾಟಿಯಾಲಾ ಜೈಲಿಗೆ ಕರೆದೊಯ್ಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next