Advertisement

ಟೆಸ್ಟ್‌  ತಂಡಕ್ಕೆ ಡೇಲ್‌ ಸ್ಟೇನ್‌ ವಾಪಸ್‌

06:00 AM Jun 12, 2018 | Team Udayavani |

ಜೊಹಾನ್ಸ್‌ಬರ್ಗ್‌: ಕಳಪೆ ಫಾರ್ಮ್ ಹಾಗೂ ಫಿಟ್‌ನೆಸ್‌ ಸಮಸ್ಯೆಯಿಂದ ಹೊರಗುಳಿದಿದ್ದ ದಕ್ಷಿಣ ಆಫ್ರಿಕಾ ವೇಗಿ ಡೇಲ್‌ ಸ್ಟೇನ್‌ ಮರಳಿ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ. ಶ್ರೀಲಂಕಾ ಎದುರಿನ ಟೆಸ್ಟ್‌ ಸರಣಿಗಾಗಿ ಪ್ರಕಟಿಸಲಾದ ಆಫ್ರಿಕಾ ತಂಡದಲ್ಲಿ ಸ್ಟೇನ್‌ ಅವರದು ಅಚ್ಚರಿಯ ಹೆಸರಾಗಿದೆ.

Advertisement

ಪ್ರವಾಸಿ ಭಾರತ ವಿರುದ್ಧ ನೂಲ್ಯಾಂಡ್ಸ್‌ನಲ್ಲಿ ನಡೆದ ವರ್ಷಾರಂಭದ ಟೆಸ್ಟ್‌ನಲ್ಲಿ ಡೇಲ್‌ ಸ್ಟೇನ್‌ ಕೊನೆಯ ಸಲ ದಕ್ಷಿಣ ಆಫ್ರಿಕಾ ತಂಡದಲ್ಲಿ ಕಾಣಿಸಿಕೊಂಡಿದ್ದರು. ದ್ವಿತೀಯ ಇನ್ನಿಂಗ್ಸ್‌ ವೇಳೆ ಹಿಮ್ಮಡಿ ನೋವಿಗೆ ಸಿಲುಕಿ ಅರ್ಧದಲ್ಲೇ ಹೊರಬಿದ್ದಿದ್ದರು. ಅವರ ಚೇತರಿಕೆಗೆ 6 ವಾರ ಸಾಕು ಎಂದು ವೈದ್ಯರು ಹೇಳಿದ್ದರು. ಆದರೆ ಇದಕ್ಕೆ 5 ತಿಂಗಳೇ ಹಿಡಿದಿದೆ. 

ಸದ್ಯ ಇಂಗ್ಲಿಷ್‌ ಕೌಂಟಿಯಲ್ಲಿ ಹ್ಯಾಂಪಶೈರ್‌ ಪರ ಆಡುತ್ತಿರುವ ಡೇಲ್‌ ಸ್ಟೇನ್‌ ಸರ್ರೆ ವಿರುದ್ಧದ ರೋಸ್‌ಬೌಲ್‌ ಪಂದ್ಯದಲ್ಲಿ 26 ಓವರ್‌ ಎಸೆದು ತಮ್ಮ ಫಿಟ್‌ನೆಸ್‌ ಸಾಬೀತುಪಡಿಸಿದ್ದರು. ಹೀಗಾಗಿ ಆಫ್ರಿಕಾ ಆಯ್ಕೆಗಾರರು ಸ್ಟೇನ್‌ ಮೇಲೆ ಒಲವು ತೋರಿದರು. ಮಾರ್ನೆ ಮಾರ್ಕೆಲ್‌ ವಿದಾಯ ಹೇಳಿದ್ದರಿಂದ ಸ್ಟೇನ್‌ ಅವರ ಒಡಂಬಡಿಕೆಯನ್ನು ಮತ್ತೂಂದು ವರ್ಷಕ್ಕೆ ವಿಸ್ತರಿಸಲಾಗಿತ್ತು. ಜುಲೈ 12ರಿಂದ ಶ್ರೀಲಂಕಾದಲ್ಲಿ ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. 

ದಕ್ಷಿಣ ಆಫ್ರಿಕಾ ತಂಡ: ಫಾ ಡು ಪ್ಲೆಸಿಸ್‌ (ನಾಯಕ), ಹಾಶಿಮ್‌ ಆಮ್ಲ, ಟೆಂಬ ಬವುಮ, ಕ್ವಿಂಟನ್‌ ಡಿನ ಕಾಕ್‌, ಥಿಯುನಿಸ್‌ ಡಿ ಬ್ರುಯಿನ್‌, ಡೀನ್‌ ಎಲ್ಗರ್‌, ಹೆನ್ರಿಚ್‌ ಕ್ಲಾಸೆನ್‌, ಕೇಶವ್‌ ಮಹಾರಾಜ್‌, ಐಡನ್‌ ಮಾರ್ಕ್‌ರಮ್‌, ಲುಂಗಿಸಾನಿ ಎನ್‌ಗಿಡಿ, ವೆರ್ನನ್‌ ಫಿಲಾಂಡರ್‌, ಕಾಗಿಸೊ ರಬಾಡ, ತಬ್ರೈಜ್‌ ಶಂಸಿ, ಡೇಲ್‌ ಸ್ಟೇನ್‌, ಶಾನ್‌ ವೋನ್‌ ಬರ್ಗ್‌.

Advertisement

Udayavani is now on Telegram. Click here to join our channel and stay updated with the latest news.

Next