Advertisement

ಸೆ. 21ಕ್ಕೆ ದಳಪತಿ ಆಡಿಯೋ

04:31 PM Sep 04, 2017 | Sharanya Alva |

ಪ್ರೇಮ್‌ ನಾಯಕರಾಗಿರುವ “ದಳಪತಿ’ ಚಿತ್ರ ಮತ್ತೆ ಸದ್ದು ಮಾಡುತ್ತಿದೆ. ಬಾಕಿ ಇದ್ದ ಚಿತ್ರೀಕರಣ ಮುಗಿಸಿಕೊಂಡು ಈಗ ಬಿಡುಗಡೆಗೆ ರೆಡಿಯಾಗಿದೆ. ಅದರ ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಚಿತ್ರದ ಆಡಿಯೋ ಬಿಡುಗಡೆ ಸೆಪ್ಟೆಂಬರ್‌ 21 ರಂದು ನಡೆಯಲಿದ್ದು, ವಿಶೇಷವಾಗಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಮಾಡಲು ಚಿತ್ರತಂಡ ತಯಾರಿ
ನಡೆಸಿದೆ. ಪ್ರಶಾಂತ್‌ ರಾಜ್‌ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕೃತಿ ಕರಬಂದ ನಾಯಕಿಯಾಗಿ
ನಟಿಸಿದ್ದಾರೆ. 

Advertisement

ಚಿತ್ರದಲ್ಲಿ ಪ್ರೇಮ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಟೈಟಲ್‌ಗೆ ತಕ್ಕಂತೆ ಆ್ಯಕ್ಷನ್‌ ಕಂ ಲವ್‌ಸ್ಟೋರಿಯಾಗಿದೆ. ಆಡಿಯೋ ಬಿಡುಗಡೆಯ ಬೆನ್ನಲ್ಲೇ ಚಿತ್ರ ಬಿಡುಗಡೆಯಾಗಲಿದ್ದು, ಆ ನಿಟ್ಟಿನಲ್ಲಿ ಚಿತ್ರತಂಡ ತಯಾರಿ ನಡೆಸುತ್ತಿದೆ. “ದಳಪತಿ’ ಮುಗಿಯುತ್ತಿದ್ದಂತೆ ಗಣೇಶ್‌ ಅವರ “ಆರೆಂಜ್‌’ ಚಿತ್ರ ಆರಂಭಿಸಲಿದ್ದಾರೆ ಪ್ರಶಾಂತ್‌ ರಾಜ್‌.

Advertisement

Udayavani is now on Telegram. Click here to join our channel and stay updated with the latest news.

Next