Advertisement
ಇನ್ನು ನಿಫ್ಟಿ ಸೂಚ್ಯಂಕ 302.45 ಪಾಯಿಂಟ್ಸ್ ಕುಸಿತ ಅನುಭವಿಸಿದೆ. ಇದರಿಂದಾಗಿ ದಿನಾಂತ್ಯಕ್ಕೆ 17,327.45 ಪಾಯಿಂಟ್ಸ್‌ಗೆ ಸೂಚ್ಯಂಕ ಇಳಿಕೆ ಯಾಗಿದೆ. ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿ ದರದಲ್ಲಿ ಸತತವಾಗಿ ಏರಿಕೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನ ಷೇರುಪೇಟೆಯಲ್ಲಿ ಏರಿಳಿತ ಉಂಟಾಗುತ್ತಿದೆ.
ಅಮೆರಿಕದ ಡಾಲರ್ ಎದುರು ರೂಪಾಯಿ 19 ಪೈಸೆ ಕುಸಿತ ಕಂಡಿದೆ. ಹೀಗಾಗಿ, ದಿನಾಂತ್ಯಕ್ಕೆ 80.98 ರೂ.ಗಳಿಗೆ ಮುಕ್ತಾಯವಾಗಿದೆ. ಸತತ ಮೂರನೇ ಬಾರಿಗೆ ಇಳಿಕೆಯ ಹಂತವನ್ನು ರೂಪಾಯಿ ಅನುಭವಿಸುತ್ತಿದೆ. ಒಟ್ಟಾರೆಯಾಗಿ ಮೂರು ದಿನಗಳ ಅವಧಿಯಲ್ಲಿ 124 ಪೈಸೆ ಇಳಿಕೆಯಾಗಿದೆ. ಗುರುವಾರ 90 ಪೈಸೆ ಕುಸಿತವನ್ನು ರೂಪಾಯಿ ಕಂಡಿತ್ತು.