ಹೊಸದಿಲ್ಲಿ: ಟಿಬೆಟಿಯನ್ ಧರ್ಮಗುರು ದಲೈಲಾಮಾ ಬಾಲಕನೊಬ್ಬನಿಗೆ ಮುತ್ತಿಟ್ಟು ತಮ್ಮ ನಾಲಿಗೆ ಚೀಪುವಂತೆ ಕೇಳಿರುವ ವಿಡಿಯೋವೊಂದು ವೈರಲ್ ಆಗಿದ ಬೆನ್ನಲ್ಲೇ ದಲೈಲಾಮಾ ಅವರು ಕ್ಷಮೆ ಕೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಬಂದಿದ್ದ ಭಾರತೀಯ ಮಗುವಿಗೆ ಮುತ್ತಿಟ್ಟು ನಂತರ, “ನೀನು ನನ್ನ ನಾಲಿಗೆ ಚೀಪುವೆಯಾ’ ಎಂದು ದಲೈಲಾಮಾ ಕೇಳಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರ ವರ್ತನೆಗೆ ತೀವ್ರ ಆಕ್ಷೇಪ, ಟೀಕೆಗಳು ವ್ಯಕ್ತವಾಗಿವೆ.
ಅಧಿಕೃತ ಹೇಳಿಕೆಯಲ್ಲಿ ತನ್ನ ಮಾತುಗಳಿಂದ ಅಪ್ರಾಪ್ತ ವಯಸ್ಕ ಬಾಲಕ ಮತ್ತು ಅವನ ಕುಟುಂಬಕ್ಕೆ ಉಂಟಾದ ನೋವಿಗೆ ವಿಷಾದಿಸುತ್ತೇನೆ ಎಂದು ಹೇಳಿದರು. ಕ್ಷಮೆಯಾಚಿಸಿದ ಅವರ ಕಚೇರಿಯು ಹೇಳಿಕೆಯಲ್ಲಿ, “ದಲೈಲಾಮಾ ಅವರು ಮುಗ್ಧ ಮತ್ತು ತಮಾಷೆಯ ರೀತಿಯಲ್ಲಿ ಭೇಟಿಯಾಗುವ ಜನರನ್ನು ಆಗಾಗ್ಗೆ ಕೀಟಲೆ ಮಾಡುತ್ತಾರೆ” ಎಂದು ಹೇಳಿದೆ.
ಈ ವಿಡಿಯೋವನ್ನು ಜೂಸ್ಟ್ ಬ್ರೋಕರ್ ಎಂಬ ಟ್ವಿಟರ್ ಬಳಕೆದಾರ ಹಂಚಿಕೊಂಡಿದ್ದು, ದಲೈಲಾಮಾರ ಈ ವರ್ತನೆಯ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದ್ದರು.