Advertisement
ಬಿಸಿ-ಬಿಸಿಯಾದ ಬಟರ್ ನಾನ್ ಜೊತೆಗೆ ದಾಲ್ ತಡ್ಕಾ ಸವಿಯಲು ಬಹಳ ರುಚಿಕರವಾಗಿರುತ್ತದೆ. ಬಟರ್ ನಾನ್ -ದಾಲ್ ತಡ್ಕಾವನ್ನು ಸವಿಯಲು ಹೋಟೆಲ್‌ಗಳಿಗೆ ಹೋಗುವ ಅಗತ್ಯವಿಲ್ಲ ಬದಲಿಗೆ ಮನೆಯಲ್ಲಿಯೇ ಸರಳವಾಗಿ ಮಾಡಿ ಕುಟುಂಬದವರೊಂದಿಗೆ ಬಟರ್ ನಾನ್-ದಾಲ್ ತಡ್ಕಾವನ್ನು ಸವಿಯಿರಿ. ಈ ರೆಸಿಪಿಯನ್ನು ಹೇಗೆ ಮಾಡುವುದೆಂದು ತಿಳಿದುಕೊಳ್ಳೋಣ…
ತೊಗರಿಬೇಳೆ 2 ಕಪ್, ಅರಶಿನ ಪುಡಿ ಸ್ವಲ್ಪ, ಜೀರಿಗೆ 1 ಚಮಚ, ಹಸಿಮೆಣಸು 5, ಬೆಳ್ಳುಳ್ಳಿ 4 ರಿಂದ 5 ಎಸಳು, ಒಣಮೆಣಸು 5, ಈರುಳ್ಳಿ 2, ತೆಂಗಿನೆಣ್ಣೆ 4 ಚಮಚ, ಕರಿಬೇವು-ಸ್ವಲ್ಪ, ಶುಂಠಿ 1 ಇಂಚು, ಧನಿಯಾ ಪುಡಿ 2 ಚಮಚ, ಗರಂ ಮಸಾಲ 1 ಚಮಚ, ಟೊಮೆಟೋ 2, ಕೊತ್ತಂಬರಿ ಸೊಪ್ಪು-ಸ್ವಲ್ಪ, ತುಪ್ಪ 1 ಚಮಚ, ಅಚ್ಚಖಾರದ ಪುಡಿ 1 ಚಮಚ, ಸಾಸಿವೆ 1 ಚಮಚ, ಉಪ್ಪು-ರುಚಿಗೆ. ಮಾಡುವ ವಿಧಾನ
ತೊಗರಿಬೇಳೆಯನ್ನು ಸುಮಾರು 1ಗಂಟೆಗಳ ಕಾಲ ನೆನೆಸಿರಿ. ನಂತರ ಬೇಳೆಯನ್ನು ಚೆನ್ನಾಗಿ ತೊಳೆದು 4 ಕಪ್ ನೀರು,1 ಚಮಚ ಅರಿಶಿನ ಮತ್ತು 1 ಚಮಚ ಎಣ್ಣೆಯನ್ನು ಸೇರಿಸಿ ಕುಕ್ಕರ್ ನಲ್ಲಿ 3 ರಿಂದ 4 ವಿಸಿಲ್ ಹಾಕಿಸಿ.ತದನಂತರ ಬೇಳೆಯನ್ನು ಒಂದು ಬೌಲ್ ಗೆ ವರ್ಗಾಯಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಶುಂಠಿ,ಬೆಳ್ಳುಳ್ಳಿ, ಈರುಳ್ಳಿ, ಟೊಮೆಟೋ ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ.
Related Articles
Advertisement
ಒಗ್ಗರಣೆ:ಒಗ್ಗರಣೆ ಪಾತ್ರೆಗೆ 2 ರಿಂದ 3 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ನಂತರ ಸಾಸಿವೆ,ಜೀರಿಗೆ, ಕರಿಬೇವು, ಒಣಮೆಣಸು, ಅಚ್ಚಖಾರದ ಪುಡಿಯನ್ನು ಸೇರಿಸಿ ಒಗ್ಗರಣೆಯನ್ನು ಮಾಡಿ ದಾಲ್ ಗೆ ಹಾಕಿದರೆ ದಾಲ್ ತಡಾR ರೆಡಿ. ರುಚಿಯಾದ ದಾಲ್ ತಡ್ಕಾ ಅನ್ನು ನೀವೂ ಒಮ್ಮೆ ಮಾಡಿ ಸವಿಯಿರಿ. ಇದು ಅನ್ನ ಹಾಗೂ ತಂದೂರಿ ರೋಟಿ, ಬಟರ್ ನಾನ್ ಜೊತೆಗೆ ಸವಿಯಲು ಬಹಳ ರುಚಿಕರ. ಬಟರ್ ನಾನ್ ಬೇಕಾಗುವ ಸಾಮಗ್ರಿಗಳು
ಮೈದಾ 1/2 ಕೆ.ಜಿ., ಹಾಲಿನ ಪುಡಿ 2 ಚಮಚ, ಅಡುಗೆ ಸೋಡಾ ಸ್ವಲ್ಪ, ಮೊಸರು 1 ಕಪ್, ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ
ಮೈದಾ ಹಿಟ್ಟನ್ನು ಚೆನ್ನಾಗಿ ಜರಡಿ ಇಟ್ಟುಕೊಳ್ಳಿ. ನಂತರ ಒಂದು ಅಗಲವಾದ ಪಾತ್ರೆಯಲ್ಲಿ ಮೈದಾ ಹಿಟ್ಟು, ಹಾಲಿನ ಪುಡಿ, ಅಡುಗೆ ಸೋಡಾ, ಮೊಸರು, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಬೇಕಿದ್ದರೆ ಸ್ವಲ್ಪ ನೀರನ್ನು ಹಾಕಿಕೊಳ್ಳಬಹುದು. ಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲಸಿ ಸುಮಾರು 2ರಿಂದ 3ಗಂಟೆಗಳ ಕಾಲ ಹಾಗೇ ಇಡಿ. ಆಮೇಲೆ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿಕೊಂಡು ಚಪಾತಿಯಂತೆ ಲಟ್ಟಿಸಿ ಬೆಣ್ಣೆಯಿಂದ ಕಾಯಿಸಿದರೆ ಬಿಸಿಬಿಸಿಯಾದ ಬಟರ್ ನಾನ್ ಸವಿಯಿರಿ ಇದು ದಾಲ್ ತಡ್ಕಾ ಜೊತೆಗೆ ತಿನ್ನಲು ಬಹಳ ರುಚಿಕರವಾಗುವುದು.