Advertisement

ಜುಲೈ 16 ರಿಂದ ದಕ್ಷಿಣ ಕನ್ನಡ ಸಂಪೂರ್ಣ ಲಾಕ್ ಡೌನ್ : ಮಾರ್ಗಸೂಚಿ ಹೀಗಿದೆ

10:26 PM Sep 28, 2020 | sudhir |

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋವಿಡ್ 19 ಸೋಂಕಿನ ಹಬ್ಬುವಿಕೆ ಏರುಗತಿಯಲ್ಲಿದೆ.

Advertisement

ಸೋಂಕು ಹರಡುವಿಕೆಯ ಸರಪಣಿಯನ್ನು ತುಂಡರಿಸಲು ದ.ಕ. ಜಿಲ್ಲಾಡಳಿತ ಮತ್ತೆ ಲಾಕ್ ಡೌನ್ ಮೊರೆ ಹೋಗಿದೆ.

ಇದರನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 16 ರಾತ್ರಿ 8ರಿಂದ ಜುಲೈ 23ರ ಬೆಳಿಗ್ಗೆ 5 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಹಾಗಾದರೆ ಜಿಲ್ಲೆಯ ಮಾರ್ಗಸೂಚಿಯಂತೆ ಲಾಕ್ ಡೌನ್ ಸಮಯದಲ್ಲಿ ಏನಿರುತ್ತೆ, ಏನಿರಲ್ಲ ಎಂಬುದನ್ನು ನೋಡೋಣ:

Advertisement

ಜಿಲ್ಲೆಯಲ್ಲಿ ಏನಿರುತ್ತೆ :
– ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ.

– ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ.

– ದಿನಸಿ, ಹಣ್ಣು, ತರಕಾರಿ ಮಾಂಸದ ಅಂಗಡಿಗಳು ಓಪನ್ ಇರುತ್ತವೆ.

– ಹೆದ್ದಾರಿಗಳಲ್ಲಿ ಸರಕುಸಾಗಾಟ ವಾಹನಗಳಿಗೆ ಮಾತ್ರ ಅವಕಾಶ

– ಆರೋಗ್ಯ ಸೇರಿದಂತೆ ತುರ್ತು ಸೇವೆಗಳು ಲಭ್ಯ

– ಅಗತ್ಯ ಸರ್ಕಾರಿ ಕಚೇರಿಗಳು ಓಪನ್

ಇದನ್ನೂ ಓದಿ: ರಾಜ್ಯದಲ್ಲಿಂದು 2496 ಕೋವಿಡ್ ಪ್ರಕರಣ: 1142 ಸೋಂಕಿತರು ಚೇತರಿಕೆ ; 87 ಸಾವು

ಜಿಲ್ಲೆಯಲ್ಲಿ ಏನಿರಲ್ಲ :

– ಬಾರ್, ಮಾಲ್, ವೈನ್ ಶಾಪ್ ಗಳು ಸಂಪೂರ್ಣ ಬಂದ್

– ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳೂ ಸಂಪೂರ್ಣ ಬಂದ್

– ಕಂಟೈನ್ಮೆಂಟ್ ಝೋನ್ ಸಂಪೂರ್ಣ ಬಂದ್

– ಸಾರ್ವಜನಿಕ, ಖಾಸಗಿ ಸಾರಿಗೆ ಸಂಚಾರ ಬಂದ್

Advertisement

Udayavani is now on Telegram. Click here to join our channel and stay updated with the latest news.

Next