Advertisement
ಜೂ. 15ರೊಳಗೆ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕೆಳಗಿಳಿದರೆ ಮಾತ್ರ ಅನ್‌ಲಾಕ್ ಜಿಲ್ಲೆಗಳ ಪಟ್ಟಿಗೆ ಸೇರಬಹುದು. ಸೋಂಕು ಸರಪಳಿ ಕಡಿಯಲು ಜಿಲ್ಲಾಡಳಿತ ಲಾಕ್‌ಡೌನನ್ನು ಉಳಿದೆಡೆಗಿಂತ ಮೊದಲೇ ಜಾರಿಗೊಳಿಸಿದರೂ ಬಹಳ ಲಾಭವಾಗಿಲ್ಲ. ಈಗಲೂ ಜನ ಸಹಕರಿಸದಿದ್ದರೆ, ಜಿಲ್ಲಾಡಳಿತ ನಿಯಮ ಪಾಲನೆಗೆ ಮುಂದಾಗದಿದ್ದರೆ ಮತ್ತಷ್ಟು ದಿನ ಲಾಕ್‌ಡೌನ್ ಮುಂದುವರಿಯಲಿದೆ.
ರಾಜ್ಯಾದ್ಯಂತ ಎ. 27ರಿಂದ ಲಾಕ್‌ಡೌನ್ ಜಾರಿಗೊಂಡರೂ ದಕ್ಷಿಣ ಕನ್ನಡದಲ್ಲಿ ಎ. 22ರಿಂದಲೇ ಭಾಗಶಃ ಲಾಕ್‌ಡೌನ್ ಜಾರಿಯಾಗಿತ್ತು. ಯಾವೆಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಎಷ್ಟು ಸೋಂಕು ಇದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಹೆಚ್ಚು ಕೊರೊನಾ ಪ್ರಕರಣ ಇರುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ವಾರದ ಬಳಿಕ ಲಾಕ್‌ಡೌನ್ ಸಡಿಲಿಕೆ ಮಾಡಿದರೂ ಹೆಚ್ಚು ಪಾಸಿಟಿವ್ ಪ್ರಕರಣ ಇರುವಲ್ಲಿ ಸಭೆ, ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುತ್ತೇವೆ.
– ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ
Related Articles
1. ಅನಗತ್ಯ ಸಂಚಾರಕ್ಕೆ ಕಡಿವಾಣ ಸಾಧ್ಯವಾಗಿಲ್ಲ, ಬಿಡುವಿನ ಸಮಯದಲ್ಲಿ ಜನಸಂದಣಿ ಕಡಿಮೆ ಮಾಡುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಅದು ಸಾಧ್ಯವಾಗಬೇಕು.
2. ಮೈಕ್ರೊ ಕಂಟೈನ್‌ಮೆಂಟ್ ಜಾರಿಗೆ ಇನ್ನಷ್ಟು ಗಮನ ಕೊಡಬೇಕು ಮತ್ತು ಕಟ್ಟುನಿಟ್ಟಿನ ನಿಯಮ ಪಾಲನೆ ಆಗಬೇಕು.
3. ಚೆಕ್ ಪೋಸ್ಟ್‌ಗಳಲ್ಲಿ ಸೂಕ್ತ ತಪಾಸಣೆ ನಡೆ ಯುತ್ತಿಲ್ಲ ಎಂಬ ಟೀಕೆ ಇದೆ. ಜಿಲ್ಲಾಡಳಿತ ಮತ್ತು ಪೊಲೀಸರು ಗಮನ ಹರಿಸಬೇಕು.
4. ಗ್ರಾಮೀಣ ಭಾಗದಲ್ಲಿ ಸೋಂಕು ಕಡಿಮೆ ಮಾಡಲು ಅನಿವಾರ್ಯವೆನಿಸಿದಲ್ಲಿ ಉಡುಪಿ ಜಿಲ್ಲೆಯಂತೆ ಸೋಂಕು ಹೆಚ್ಚಿರುವಲ್ಲಿ ಗ್ರಾ.ಪಂ. ಲಾಕ್‌ಡೌನ್ ನಿಯಮ ಪಾಲಿಸಬಹುದು.
5. “ಟ್ರೇಸ್, ಟೆಸ್ಟ್, ಟ್ರೀಟ್’-3 ಟಿ ಸೂತ್ರ ವ್ಯಾಪಕ ಅನುಸರಣೆಯಾಗಬೇಕು.
6. ಜನರು ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಿ ಜಿಲ್ಲಾಡಳಿತಕ್ಕೆ ಸಹಕರಿಸಬೇಕು.
Advertisement