Advertisement
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಉತ್ತಮ ಸಾಧನೆಗೈದ ದೇಶದ ಒಟ್ಟು 75 ಜಿಲ್ಲಾ ಪಂಚಾಯತ್‌ಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೂಡ ಸ್ಥಾನ ಪಡೆದಿದೆ. ದಾವಣಗೆರೆ, ಕೊಡಗು ಮತ್ತು ಮಂಡ್ಯ ಆಯ್ಕೆಯಾಗಿರುವ ರಾಜ್ಯದ ಇತರ ಮೂರು ಜಿ.ಪಂ.ಗಳು.
ಸಮಗ್ರ ಅಭಿವೃದ್ಧಿಯನ್ನು ಪರಿಗಣಿಸಿ ಜಿ.ಪಂ.ಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಸ್ವತ್ಛತೆ, ಅನುದಾನದ ಸದ್ಬಳಕೆ ಮೊದಲಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ದ.ಕ. ಈಗಾಗಲೇ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಲ್ಪಟ್ಟಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿಯೂ ಗುರುತಿಸಲ್ಪಟ್ಟಿದೆ. ಮಹಾತ್ಮಾಗಾಂಧಿ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಕೂಡ ಉತ್ತಮ ಸಾಧನೆ ದಾಖಲಿಸಿದೆ. ನರೇಗಾ ಯೋಜನೆಯಡಿ ಅಂಗನವಾಡಿ ಪರಿಸರದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವುದು, ಶಾಲಾ ಆವರಣ ಗೋಡೆಗಳನ್ನು ನಿರ್ಮಿಸುವುದು, ಬಚ್ಚಲು ಗುಂಡಿಗಳ ನಿರ್ಮಾಣ ಮೊದಲಾದವುಗಳನ್ನು ಯಶಸ್ವಿಯಾಗಿ ನಡೆಸಿ ಮಾದರಿಯಾಗಿದೆ. ಅಲ್ಲದೆ ಘನ ದ್ರವ ತ್ಯಾಜ್ಯ ಘಟಕಗಳ ನಿರ್ಮಾಣದಲ್ಲಿಯೂ ಮುಂಚೂಣಿಯಲ್ಲಿದೆ. 14ನೇ (ಪ್ರಸ್ತುತ 15ನೇ) ಹಣಕಾಸು ಅನುದಾನವನ್ನು ಬಳಕೆ ಮಾಡುವಲ್ಲಿಯೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉತ್ತಮ ಸಾಧನೆ ತೋರಿದೆ.
ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ)ದಲ್ಲಿಯೂ ಗಮನಾರ್ಹ ಸಾಧನೆ ದಾಖಲಾಗಿದೆ.
Related Articles
ನಿರ್ದಿಷ್ಟವಾಗಿ ಪರಿಗಣಿಸಿಲ್ಲ. ಸ್ವತ್ಛತೆ, ಅನುದಾನಗಳ ಬಳಕೆ ಸೇರಿದಂತೆ ಸಮಗ್ರ ಅಭಿವೃದ್ಧಿಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.
Advertisement
-ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದ.ಕ. ಜಿ.ಪಂ.
ಉತ್ತಮ ಸಾಧನೆದ.ಕ. ಜಿಲ್ಲೆ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಮುಂದುವರಿದಿದೆ. ನರೇಗಾದಲ್ಲಿಯೂ ಉತ್ತಮ ಸಾಧನೆಯಾಗುತ್ತಿದೆ. ಸ್ವತ್ಛತೆಯ ವಿಭಾಗದಲ್ಲಿಯೂ ಕೆಲಸಗಳು ನಡೆಯುತ್ತಿವೆ. ಪಂಚಾಯತ್ ರಾಜ್ ವ್ಯವಸ್ಥೆಯ ಒಟ್ಟಾರೆ ಅನುಷ್ಠಾನ ಕೂಡ ಉತ್ತಮವಾಗಿದೆ. -ಶೀನ ಶೆಟ್ಟಿ, ಮಾಜಿ ಓಂಬುಡ್ಸ್‌ಮನ್, ಜಿಲ್ಲಾ ಸ್ವತ್ಛತಾ ರಾಯಭಾರಿ, ದ.ಕ ಜಿ.ಪಂ.