Advertisement

D.K.,Udupi; ಆ. 21ರಂದು ಎಲ್ಲೋ ಅಲರ್ಟ್‌ ಘೋಷಣೆ

11:30 PM Aug 20, 2024 | Team Udayavani |

ಮಂಗಳೂರು/ಉಡುಪಿ: ಕರಾವಳಿಯಲ್ಲಿ ಮಳೆ ಬಿರುಸು ಪಡೆಯುವ ಸಾಧ್ಯತೆ ಇದ್ದು ಭಾರತೀಯ ಹವಾಮಾನ ಇಲಾಖೆಯು ಆ. 21ರಂದು ಎಲ್ಲೋ ಅಲರ್ಟ್‌ ಘೋಷಿಸಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮಳೆಯ ತೀವ್ರತೆ ಕಡಿಮೆ ಇತ್ತು. ಕೆಲವು ಕಡೆ ಸಾಧಾರಣ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಮಳೆ ಪ್ರಮಾಣ ಕಡಿಮೆಯಾಗಿತ್ತು. ಬಿಸಿಲು-ಮೋಡ ಕವಿದ ವಾತಾವರಣದ ನಡುವೆ ಕೆಲವು ಕಡೆಗಳಲ್ಲಿ ಸಣ್ಣದಾಗಿ ಮಳೆ ಸುರಿದಿದೆ.

ಸೋಮವಾರ ತಡರಾತ್ರಿ ಕುಂದಾಪುರ, ಬೈಂದೂರು, ಬ್ರಹ್ಮಾವರ, ಉಡುಪಿ, ಕಾರ್ಕಳ ಹೆಬ್ರಿ ಭಾಗದಲ್ಲಿ ಕೆಲಕಾಲ ಹನಿ ಹನಿ ಮಳೆಯಾಗಿದೆ.

ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಮಂಗಳೂರಿನಲ್ಲಿ 30.9 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.8 ಡಿ.ಸೆ. ಗರಿಷ್ಠ ಮತ್ತು 24.7 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.6 ಡಿ.ಸೆ. ಏರಿಕೆ ಕಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next