Advertisement

Christmas ದಕ್ಷಿಣ ಕನ್ನಡ, ಉಡುಪಿ: ಕ್ರಿಸ್ಮಸ್‌ ಸಂಭ್ರಮಕ್ಕೆ ಸಜ್ಜು

11:19 PM Dec 23, 2023 | Team Udayavani |

ಮಂಗಳೂರು/ಉಡುಪಿ: ಕ್ರಿಸ್ಮಸ್‌ ಹಬ್ಬದ ಹಿನ್ನೆಲೆಯಲ್ಲಿ ದ.ಕ., ಉಡುಪಿ ಜಿಲ್ಲಾದ್ಯಂತ ಕೊನೆಯ ಹಂತದ ಸಿದ್ಧತೆ ನಡೆಯುತ್ತಿದೆ. ಯೇಸು ಕ್ರಿಸ್ತರು ಮಧ್ಯರಾತ್ರಿ ಜನಿಸಿದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಂಭ್ರಮಾಚರಣೆ ನಡೆಸಲಾಗುತ್ತದೆ. ಚರ್ಚ್‌ ಗಳಲ್ಲಿ ವಿಶೇಷ ಬಲಿಪೂಜೆ, ಕ್ಯಾರಲ್‌ ಗಾಯನದೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

Advertisement

ಕೇಕ್‌ ಕುಸ್ವಾರ್‌ಗಳ ಬೇಡಿಕೆ ಹೆಚ್ಚಾಗಿದೆ. ಮನೆಗಳಲ್ಲಿ ತಯಾರಿಸಿ ಕ್ರಿಸ್ಮಸ್‌ ತಿಂಡಿಗಳಿಗೆ ಬೇಡಿಕೆ ಹೆಚ್ಚಿದ್ದು, ಚರ್ಚ್‌ ವ್ಯಾಪ್ತಿಯಲ್ಲೇ ವಿವಿಧ ಸಂಘ ಸಂಸ್ಥೆಗಳು ಜತೆಯಾಗಿ ಕುಸ್ವಾರ್‌ ತಯಾರಿಸಿ ಅಗತ್ಯ ಇದ್ದವರಿಗೆ ನೀಡುವ ಕಾರ್ಯವನ್ನು ಕೈಗೊಂಡಿದ್ದಾರೆ. ಮನೆಗಳ ಮುಂಭಾಗದಲ್ಲಿ ಗೋದಲಿಗಳು ಕಾಣ ಸಿಗುತ್ತಿದ್ದು, ಮನೆಯಂಗಳದಲ್ಲಿ ನಕ್ಷತ್ರಗಳು ಮಿನುಗುತ್ತಿವೆ.

ಗೋದಲಿ (ಕ್ರಿಬ್‌ ಸೆಟ್‌), ಮನೆ, ಮನೆಯ ಆವರಣ, ಚರ್ಚ್‌ಗಳನ್ನು ಅಲಂಕರಿಸುವ ನಕ್ಷತ್ರಗಳು, ಘಂಟೆ (ಬೆಲ್‌)ಗಳ ಸಾಲು, ಕ್ರಿಸ್ಮಸ್‌ ಟ್ರೀ, ಸಾಂತಕ್ಲಾಸ್‌ ವೇಷಭೂಷಣ ಮಾರಾಟ ಜೋರಾಗಿದೆ. ಕ್ರಿಸ್ಮಸ್‌ ಹಬ್ಬದ ಮುಂಚಿತವಾಗಿ ವಿವಿಧ ಚರ್ಚ್‌ಗಳನ್ನು ವಿದ್ಯುದ್ಧೀಪಾಲಂಕಾರ ಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next