Advertisement

ದ.ಕ.- ಉಡುಪಿ ಜಿಲ್ಲಾಮಟ್ಟದ ಉದಯವಾಣಿ ಮಕ್ಕಳ ಚಿತ್ರಕಲಾ ಸ್ಪರ್ಧೆ

11:42 AM Nov 05, 2018 | |

ಮಂಗಳೂರು: ಉದಯವಾಣಿ ಹಾಗೂ ಉಡುಪಿ ಆರ್ಟಿಸ್ಟ್‌ ಫೋರಂ ವತಿಯಿಂದ ಆಯೋಜಿಸಲಾದ ಚಿಣ್ಣರ ಬಣ್ಣ- 2018ರ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಉದ್ಘಾಟನ ಸಮಾರಂಭ ನಗರದ ಡೊಂಗರಕೇರಿ ಕೆನರಾ ಗರ್ಲ್ಸ್‌ ಹೈಸ್ಕೂಲ್‌ನಲ್ಲಿ ರವಿವಾರ ಬೆಳಗ್ಗೆ ನಡೆಯಿತು. 8 ತಾಲೂಕುಗಳಲ್ಲಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ 72 ಮಂದಿ ವಿದ್ಯಾರ್ಥಿಗಳಿಗೆ ಜೂನಿಯರ್‌, ಸಬ್‌ ಜೂನಿಯರ್‌, ಸೀನಿಯರ್‌ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಯಿತು. ಒಂದೊಂದು ವಿಭಾಗದಲ್ಲಿ 24 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವಿದ್ಯಾರ್ಥಿಗಳು ಚೀಟಿ ಎತ್ತುವ ಮೂಲಕ ಸ್ಪರ್ಧೆಯ ವಿಷಯಗಳನ್ನು ಆರಿಸಿದರು. ಜೂನಿ ಯರ್‌, ಸಬ್‌ ಜೂನಿಯರ್‌ ವಿಭಾಗದ ಸ್ಪರ್ಧಿಗಳಿಗೆ ವಿಷಯ ಇರಲಿಲ್ಲ. ಸೀನಿಯರ್‌ ವಿಭಾಗದ ಸ್ಪರ್ಧಿಗಳಿಗೆ ಮೆಹಂದಿ ಸಂಭ್ರಮ, ಬೊಂಡ ವ್ಯಾಪಾರಿ, ಮಕ್ಕಳ ಚಿತ್ರಕಲಾ ಸ್ಪರ್ಧೆ, ಸೈಕಲ್‌ ರಿಪೇರಿ ಅಂಗಡಿ, ಪರಿಸರ ರಕ್ಷಣೆ ಎಂಬ ವಿಷಯಗಳ ಕುರಿತಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಆರ್ಟಿಸ್ಟ್‌ ಫೋರಂ ನ ಅಧ್ಯಕ್ಷ ಯು. ರಮೇಶ್‌ ರಾವ್‌, ಕಾರ್ಯದರ್ಶಿ ಸಕು ಪಾಂಗಾಳ, ಉದಯವಾಣಿ ಮ್ಯಾಗಜೀನ್‌ ವಿಭಾಗ ಮತ್ತು ಸ್ಪೆಷಲ್‌ ಇನಿಶಿಯೇಟಿವ್ಸ್‌ ರಾಷ್ಟ್ರೀಯ ಮುಖ್ಯಸ್ಥ ಆನಂದ್‌ ಕೆ., ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್‌, ಉದಯವಾಣಿ ಬ್ಯುಸಿನೆಸ್‌ ಆ್ಯಂಡ್‌ ಡೆವಲಪ್‌ ಮೆಂಟ್‌ ಡಿಜಿಎಂ ಸತೀಶ್‌ ಶೆಣೈ, ಆರ್ಟಿಸ್ಟ್‌ ಫೋರಂ ನ ಸದಸ್ಯರಾದ ಎಚ್‌.ಕೆ. ರಾಮಚಂದ್ರ ಹಾಗೂ ಹರಿಪ್ರಸಾದ್‌ ಉಪಸ್ಥಿತರಿದ್ದರು.

ಉದಯವಾಣಿ ಚಿಣ್ಣರ ಬಣ್ಣ- 2018 ಚಿತ್ರಕಲಾ ಸ್ಪರ್ಧೆಯ ತಾಲೂಕು ಮಟ್ಟ ಸ್ಪರ್ಧೆಯಲ್ಲಿ ಸಬ್‌ ಜೂನಿಯರ್‌, ಜೂನಿಯರ್‌ ಹಾಗೂ ಸೀನಿಯರ್‌ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದ ವಿದ್ಯಾರ್ಥಿಗಳೊಂದಿಗೆ ಮುಖ್ಯ ಅತಿಥಿಗಳಾದ ಕೆಎಂಎಫ್‌ನ ವ್ಯವಸ್ಥಾಪನ ನಿರ್ದೇಶಕ ಡಾ| ಸತ್ಯನಾರಾಯಣ, ಕೆನರಾ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಅಣ್ಣಪ್ಪ ಪೈ, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿನೋದ್‌ ಕುಮಾರ್‌, ಆರ್ಟಿಸ್ಟ್‌ ಫಾರಂನ ಅಧ್ಯಕ್ಷ ಯು. ರಮೇಶ್‌ ರಾವ್‌, ಕಾರ್ಯದರ್ಶಿ ಸಕು ಪಾಂಗಾಳ್‌.

Advertisement

Udayavani is now on Telegram. Click here to join our channel and stay updated with the latest news.

Next