Advertisement

ದ.ಕ., ಉಡುಪಿ: ಗುರುವಾರ ಕೋವಿಡ್ ನಿಂದ 7 ಸಾವು; 533 ಮಂದಿಗೆ ಪಾಸಿಟಿವ್‌

10:27 PM Oct 08, 2020 | mahesh |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಗುರುವಾರ 296 ಮಂದಿಗೆ ಕೋವಿಡ್ ದೃಢಪಟ್ಟಿದೆ. 6 ಮಂದಿ ಮೃತಪಟ್ಟಿದ್ದಾರೆ. 596 ಮಂದಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 25,572 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಪೈಕಿ 594 ಮಂದಿ ಸಾವನ್ನಪ್ಪಿದ್ದಾರೆ. 20,586 ಮಂದಿ ಇಲ್ಲಿವರೆಗೆ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 4,392 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಕಾಸರಗೋಡು: 236 ಮಂದಿಗೆ ಸೋಂಕು
ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 236 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅದೇ ಸಂದರ್ಭದಲ್ಲಿ 106 ಮಂದಿ ಗುಣಮುಖರಾಗಿದ್ದಾರೆ. ಬಾಧಿತರಲ್ಲಿ 7 ಮಂದಿ ಇತರ ರಾಜ್ಯಗಳಿಂದ ಹಾಗೂ 9 ವಿದೇಶದಿಂದ ಬಂದವರು. 220 ಮಂದಿಗೆ ಸಂಪರ್ಕದಿಂದ ತಗಲಿದೆ.

ಕೇರಳದಲ್ಲಿ 5,445 ಪ್ರಕರಣ
ಕೇರಳದಲ್ಲಿ ಗುರುವಾರ 5,445 ಮಂದಿಗೆ ಸೋಂಕು ದೃಢಪಟ್ಟಿದೆ. 24 ಮಂದಿಯ ಸಾವು ಸಂಭವಿಸಿದೆ.

ಬೀದಿಬದಿ ಅಂಗಡಿ: ಪಾರ್ಸೆಲ್‌ ಮಾತ್ರ
ಅಂಗಡಿಗಳಲ್ಲಿ ಸಂಪರ್ಕದ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಆದೇಶ ಪ್ರಕಟಗೊಳ್ಳುವ ವರೆಗೆ ಬೀದಿಬದಿಯ ಗೂಡಂಗಡಿಗಳಲ್ಲಿ ಮುಂದೆ ಪಾರ್ಸೆಲ್‌ ವಿತರಣೆ ಮಾತ್ರ ಇರುವುದು. ಜ್ಯೂಸ್‌, ಕಾಫಿ, ಚಹಾ ಇತ್ಯಾದಿ ಬೇಕರಿಗಳ ಜತೆ ವಿತರಿಸುವ ಸಂಸ್ಥೆಗಳನ್ನು ಸಂಜೆ 6ಕ್ಕೆ ಮುಚ್ಚಬೇಕು. ಇತರ ಅಂಗಡಿಗಳು ರಾತ್ರಿ 9ರ ವರೆಗೆ ಚಟುವಟಿಕೆ ನಡೆಸಬಹುದು ಎಂದು ತೀರ್ಮಾನ ಕೈಗೊಳ್ಳಲಾಗಿದೆ.

ಉಡುಪಿ: 1 ಸಾವು,
ಉಡುಪಿ: ಕೋವಿಡ್ ಬಾಧಿತ ಉಡುಪಿಯ 68 ವರ್ಷ ಪ್ರಾಯದ ವ್ಯಕ್ತಿ ಮೃತಪಟ್ಟಿದ್ದಾರೆ. ಇದುವರೆಗೆ ಒಟ್ಟು 162 ಮಂದಿ ಮೃತಪಟ್ಟಂತಾಗಿದೆ. ಗುರುವಾರ 237 ಜನರಿಗೆ ಪಾಸಿಟಿವ್‌ ಮತ್ತು 2,734 ಜನರಿಗೆ ನೆಗೆಟಿವ್‌ ವರದಿಯಾಗಿದೆ.  ಸೋಂಕಿತರಲ್ಲಿ ರೋಗ ಲಕ್ಷಣವಿರುವ 80 ಪುರುಷರು, 63 ಮಹಿಳೆಯರು, ರೋಗ ಲಕ್ಷಣವಿರದ 52 ಪುರುಷರು, 42 ಮಹಿಳೆಯರಿದ್ದಾರೆ. ಉಡುಪಿ ತಾಲೂಕಿನ 123, ಕುಂದಾಪುರ ತಾಲೂಕಿನ 68, ಕಾರ್ಕಳ ತಾಲೂಕಿನ 46 ಮಂದಿ ಇದ್ದಾರೆ. ಇವರಲ್ಲಿ 127 ಜನರನ್ನು ಆಸ್ಪತ್ರೆಗಳಿಗೂ 252 ಜನರನ್ನು ಹೋಂ ಐಸೊಲೇಶನ್‌ಗೂ ದಾಖಲಿಸಲಾಗಿದೆ.

Advertisement

ಅ. 7ರಂದು ಒಟ್ಟು 2,944 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 1,38,651 ಮಾದರಿಗಳನ್ನು ಸಂಗ್ರಹಿಸಲಾಗಿದೆ. 379 ಜನರು ಬಿಡುಗಡೆಗೊಂಡಿದ್ದು ಇದುವರೆಗೆ 16,692 ಜನರು ಬಿಡುಗಡೆಗೊಂಡಿದ್ದಾರೆ. 1,952 ಮಂದಿ ಆಸ್ಪತ್ರೆ ಮತ್ತು ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಡಗು: 95 ಪ್ರಕರಣ
ಮಡಿಕೇರಿ: ಜಿಲ್ಲೆಯಲ್ಲಿ ಗುರುವಾರ 95 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 3,458 ಆಗಿದ್ದು, 2,674 ಮಂದಿ ಗುಣಮುಖರಾಗಿದ್ದಾರೆ. 734 ಸಕ್ರಿಯ ಪ್ರಕರಣಗಳಿದ್ದು, 50 ಮರಣ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next