Advertisement

ದಕ್ಷಿಣ ಕನ್ನಡ: ಕೆಲ ಅಪರಾಧ ಸುದ್ದಿಗಳು (ಫೆ 8)

11:13 AM Feb 09, 2018 | |

ಮೊಬೈಲ್‌ ಕಳವು: ಇಬ್ಬರ ಬಂಧನ
ಉಳ್ಳಾಲ:
ಮುಡಿಪು ಜಂಕ್ಷನ್‌ನ ಕೃಷ್ಣ ಕಮ್ಯುನಿಕೇಷನ್‌ನಿಂದ ಮೊಬೈಲ್‌ ಕದ್ದ ಆರೋಪಿಗಳಲ್ಲಿ ಇಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿ, ಮೊಬೈಲ್‌ ಸಹಿತ ಕಳವಿಗೆ ಬಳಸಿದ ಮೋಟಾರ್‌ ಸೈಕಲ್‌ ಅನ್ನು ವಶಕ್ಕೆ  ಪಡೆದಿದ್ದಾರೆ.
ಮಂಜೇಶ್ವರ ವರ್ಕಾಡಿ ಗ್ರಾಮದ ತಲೆಕ್ಕಿ ಬೊಳಾ¾ರ್‌ನ ನಿವಾಸಿಗಳಾದ ಝಿಯಾದ್‌(19) ಹಾಗೂ   ಮಹಮ್ಮದ್‌ ಅಶ್ರಫ್‌ ಯಾನೆ ಇರ್ಫಾನ್‌ (19) ಅವರನ್ನು ಬಾಳೆಪುಣಿ ಗ್ರಾಮದ ಗರಡಿಪಳ್ಳ ಬಳಿ ಬಂಧಿಸಲಾಗಿದೆ. ಉಳಿದ ಆರೋಪಿಗಳಿಗೆ ಶೋಧ ಮುಂದುವರಿದಿದೆ. 

Advertisement

ಕಾರು – ಬೈಕ್‌ ಢಿಕ್ಕಿ:ಇಬ್ಬರಿಗೆ  ಗಾಯ

ಮೂಲ್ಕಿ: ಇಲ್ಲಿನ ಕಾರ್ನಾಡು ಗೇರುಕಟ್ಟೆ ಬಳಿ ಕಾರೊಂದು ಬೆೈಕ್‌ಗೆ  ಢಿಕ್ಕಿ ಹೊಡೆದ ಪರಿಣಾಮ  ಸವಾರರು  ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚ್ಚೇರಿಪೇಟೆ ಜಾರಿಗೆಕಟ್ಟೆ   ನಿವಾಸಿಗಳಾದ ನವೀನ (28) ಮತ್ತು ರಾಘವೇಂದ್ರ (29)  ಬೆೈಕ್‌ನಲ್ಲಿ ಬರುತ್ತಿದ್ದಾಗ ಬಜಪೆ ಕಡೆಗೆ ಹೋಗುತ್ತಿದ್ದ ಕಾರಿನ ಚಾಲಕನ ನಿರ್ಲಕ್ಷ್ಯದಿಂದ‌ ಅಫಘಾತ ಸಂಭವಿಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಬೆೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ಮಂಗಳೂರು ಉತ್ತರ ಟ್ರಾಫಿಕ್‌ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ರಿಕ್ಷಾ – ಕಾರು ಢಿಕ್ಕಿ: ಮಹಿಳೆಗೆ ಗಾಯ

ಮೂಲ್ಕಿ: ಇಲ್ಲಿಯ ಲಿಂಗಪಯ್ಯ ಕಾಡು ವನಭೋಜನ ಬಳಿ ಕಾರೊಂದು ರಿಕ್ಷಾಕ್ಕೆ  ಢಿಕ್ಕಿ ಹೊಡೆದು ರಿಕ್ಷಾ ಪ್ರಯಾಣಿಕರೋರ್ವರು ಗಾಯಗೊಂಡಿದ್ದಾರೆ. ಢಿಕ್ಕಿ  ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು, ಅದರಲ್ಲಿದ್ದ  ಮಹಿಳೆ ಬಿಂದೂ ಅವರು  ಗಾಯಗೊಂಡಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್‌ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕೆಲವು ಸಮಯದಿಂದ ವನಭೋಜನ ಬಳಿಯ   ಏರು ಪ್ರದೇಶದಲ್ಲಿ  ನಿರಂತರ ಅಪಘಾತಗಳು ನಡೆಯುತ್ತಿದೆ.

Advertisement

ಆತ್ಮಹತ್ಯೆ
ಬೆಳ್ತಂಗಡಿ:
ನಗರದ ಹುಣ್ಸೆಕಟ್ಟೆ ಗುಂಡಿಕಾಡು ನಿವಾಸಿ  ಲಕೀÒ$¾ (58) ಗುರುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ವರ್ಷದ ಹಿಂದೆ   ಅಪಘಾತವಾಗಿ ಅನಾರೋಗ್ಯದಿಂದಿದ್ದರು.  ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next