Advertisement

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

01:15 AM Apr 28, 2024 | Team Udayavani |

ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ನಡೆದ ಮತದಾನದ ಅಂತಿಮ ವಿವರಗಳು ಲಭ್ಯವಾಗಿದ್ದು ಶೇ.77.56 ಮತದಾನವಾಗಿದೆ.

Advertisement

ಈ ಮೂಲಕ 2019ರ ಚುನಾವಣೆ ಹೋಲಿಸಿದರೆ ಶೇ 0.34ರಷ್ಟು ಪ್ರಮಾಣದಲ್ಲಿ ಮತದಾನದಲ್ಲಿ ಇಳಿಕೆಯಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಶೇ.77.90 ಮತದಾನ ನಡೆದಿತ್ತು. ಈ ಸಲ ದ.ಕ. ಜಿಲ್ಲೆಯ ಒಟ್ಟು 18,17,603 ಮತದಾರರಲ್ಲಿ 14,09,653 ಮಂದಿ ಮತಗಟ್ಟೆಗಳಿಗೆ ತೆರಳಿ ಮತ ಮಾಡಿದ್ದಾರೆ.

ನಗರದ ಮತದಾರರೇ ಅಧಿಕ ಇರುವ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಮತಪ್ರಮಾಣ ಶೇ. 67.17ಕ್ಕೆ ಕುಸಿದಿದೆ.

ಮಂಗಳೂರು ನಗರ ಉತ್ತರದಲ್ಲಿ ಶೇ. 73.78 ಮತದಾನವಾಗಿದ್ದು, ಮೂಡುಬಿದಿರೆಯಲ್ಲಿ ಶೇ. 76.51 ಮತದಾನ ದಾಖಲಾಗಿದೆ. ಸುಳ್ಯದಲ್ಲಿ ಶೇ. 83.01ರ ಮೂಲಕ ದ.ಕ. ಜಿಲ್ಲೆಯ ಇತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಅತ್ಯಧಿಕ ಮತ ಚಲಾವಣೆಯಾಗಿದೆ. ಅನಂತರ ಬೆಳ್ತಂಗಡಿಯಲ್ಲಿ ಶೇ. 81.30 ಮತದಾನವಾಗಿದೆ.

Advertisement

ಕೆಲವೊಂದು ಮತಗಟ್ಟೆಗಳಲ್ಲಿ ಮತದಾರರ ಹೆಸರು ಇನ್ನೂ ಪಟ್ಟಿಯಲ್ಲಿರುವುದು ಶುಕ್ರವಾರದ ಮತದಾನದ ವೇಳೆ ಗೋಚರಿಸಿದೆ. ಚುನಾವಣೆ ಘೋಷಣೆಯಾದ ಬಳಿಕ ಬಿಎಲ್‌ಒಗಳನ್ನು ಮನೆ ಭೇಟಿಗೆ ಕಳುಹಿಸಲಾಗುತ್ತದೆ. ಮತದಾರರ ಮಾಹಿತಿ ಕಲೆ ಹಾಕಲಾಗುತ್ತದೆ. 18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಸೇರಿಸುವ ಹಾಗೂ ಮೃತರನ್ನು ಪಟ್ಟಿಯಿಂದ ಕೈಬಿಡುವ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕಿಸಲಾಗುತ್ತದೆ. ಮನೆಯಿಂದಲೇ ಮತ ಶೇ 97.11
85 ಮೇಲ್ಪಟ್ಟ ಹಿರಿಯ ನಾಗರಿಕರಲ್ಲಿ 6053 ಮಂದಿ ಮನೆಯಲ್ಲೇ ಮತದಾನಕ್ಕೆ ಆಸಕ್ತಿ ತೋರಿದ್ದು, ಅದರಲ್ಲಿ 5,878 ಮಂದಿ ಮತಹಾಕುವ ಮೂಲಕ ಶೇ 97.11 ಮತದಾನವಾಗಿದೆ.

ಉಡುಪಿ-ಚಿಕ್ಕಮಗಳೂರು: ಶೇ. 77.15
ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಎಲ್ಲ ಮತಗಟ್ಟೆಗಳ ಮತಯಂತ್ರಗಳು ಉಡುಪಿಯ ಡಿಮಸ್ಟರಿಂಗ್‌ ಕೇಂದ್ರಕ್ಕೆ ತಲುಪಿದ್ದು, ಮತದಾನದ ಅಂತಿಮ ಅಂಕಿ ಅಂಶವನ್ನು ಜಿಲ್ಲಾ ಚುನಾವಣಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಶೇ.77.15ರಷ್ಟು ದಾಖಲೆಯ ಮತದಾನ ಈ ಬಾರಿ ಕ್ಷೇತ್ರದಲ್ಲಿ ಆಗಿದೆ.

ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಉಡುಪಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರದಲ್ಲೂ ಮತದಾನ ಪ್ರಮಾಣ ಏರಿಕೆಯಾಗಿದೆ. ಒಟ್ಟಾರೆಯಾಗಿ ಕ್ಷೇತ್ರದ ಮತದಾನ ಪ್ರಮಾಣದಲ್ಲಿ ಶೇ.1.08ರಷ್ಟು ಏರಿಕೆಯಾಗಿದೆ. ಕಳೆದ ಬಾರಿ ಶೇ.76.07ರಷ್ಟು ಮತದಾನವಾಗಿತ್ತು.

ಶೃಂಗೇರಿಯಲ್ಲಿ ಶೇ.80.31 ಗರಿಷ್ಠ ಹಾಗೂ ಚಿಕ್ಕಮಗಳೂರಿನಲ್ಲಿ ಶೇ.70.73 ಕನಿಷ್ಠ ಮತದಾನ ದಾಖಲಾಗಿದೆ. ಶೇ, 79ಕ್ಕಿಂತ ಹೆಚ್ಚಿನ ಮತದಾನವು ಕುಂದಾಪುರ, ಕಾಪು ಮತ್ತು ಕಾರ್ಕಳದಲ್ಲಿ ದಾಖಲಾಗಿದೆ. ತರಿಕೆರೆಯಲ್ಲಿ ಮಾತ್ರ ಪುರುಷ ಮತದಾರರು ಹೆಚ್ಚು ಮತದಾನ ಮಾಡಿದ್ದಾರೆ.

ಉಳಿದಂತೆ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರಿಂದಲೇ ಹೆಚ್ಚು ಮತದಾನವಾಗಿದೆ. ಕ್ಷೇತ್ರದ 8 ವಿಧಾನಸಭಾ ವ್ಯಾಪ್ತಿಯಲ್ಲಿ 7,68,215 ಪುರುಷ ಮತದಾರರಿದ್ದು ಅವರಲ್ಲಿ 5,94,565 ಮಂದಿ ಮತದಾನ ಮಾಡಿದ್ದಾರೆ. 8,16,910 ಮಹಿಳಾ ಮತದಾರರಲ್ಲಿ 6,28,316 ಮಹಿಳೆಯರು ಮತದಾನ ಮಾಡಿದ್ದಾರೆ. ಒಟ್ಟಾರೆ ಮತದಾನದಲ್ಲೂ ಮಹಿಳೆಯೇ ಮುಂದಿದ್ದಾರೆ. 7 ಮಂದಿ ಲಿಂಗತ್ವ ಅಲ್ಪಸಂಖ್ಯಾಕರು ಮತದಾನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next