Advertisement
ಮತದಾನ: ಸುಳ್ಯದ ಹೆಗ್ಗಳಿಕೆಸುಳ್ಯ ವಿಧಾನಸಭಾ ಕ್ಷೇತ್ರ 2014 ಮತ್ತು 2019ರ ಲೋಕಸಭಾ ಚುನಾವಣೆಗಳು ಹಾಗೂ 2018ರ ವಿಧಾನಸಭಾ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾನದ ಮೂಲಕ ನಿರಂತರ ಪ್ರಥಮ ಸ್ಥಾನವನ್ನು ಕಾಯ್ದುಕೊಂಡ ಹೆಗ್ಗಳಿಕೆಯನ್ನು ಹೊಂದಿದೆ. 2014ರಲ್ಲಿ ಶೇ. 84.42., 2019ರಲ್ಲಿ ಶೇ. 84.16 ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ. 83 ಮತದಾನವಾಗಿತ್ತು.
ಬಂಟ್ವಾಳ : ನಕಲಿ ಮತ ದಾನಕ್ಕೆ ಯತ್ನಿಸಿದ ಪ್ರಕರಣದಲ್ಲಿ ಎ. 18ರಂದು ಪರ್ಲಿಯಾ ಮತಗಟ್ಟೆ 122 ಮತ್ತು 123ರಲ್ಲಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಮತಗಟ್ಟೆ 122ರ ಭದ್ರತಾ ಸಿಬಂದಿ ದೂರಿನಂತೆ ಪರ್ಲಿಯಾ ನಿವಾಸಿ ಬಾವು ಬ್ಯಾರಿಯವರ ಪುತ್ರ ಅನ್ವರ್ (30), ಮತಗಟ್ಟೆ 123ರ ಮತಗಟ್ಟೆ ಅಧಿಕಾರಿ ದೂರಿನಂತೆ ಪರ್ಲಿಯಾ ನಿವಾಸಿ ಶಾಹುಲ್ ಹಮೀದ್‌ರ ಪುತ್ರ ಮೊಹಮ್ಮದ್ ಶಫೀಕ್ (19) ಎಂಬವರ ವಿರುದ್ಧ ದೂರು ದಾಖಲಾಗಿತ್ತು. ಮೊದಲ ಆರೋಪಿ ಸಂಜೆ 5.45ಕ್ಕೆ, ಎರಡನೇ ಆರೋಪಿ ಸಂಜೆ 5.55ಕ್ಕೆ ಮತಗಟ್ಟೆಗೆ ಬಂದು ಮತ ದಾನಕ್ಕೆ ಯತ್ನಿಸಿದ್ದರು. ಮತಗಟ್ಟೆ ಅಧಿಕಾರಿ ಸೂಚಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗಿತ್ತು.