Advertisement
ಕೇಳಿದ್ದು 12, ದಕ್ಕಿದ್ದು 1!ಜಿ.ಪಂ.ನಲ್ಲಿ ಬಿಜೆಪಿ ಬಹುಮತ ಹೊಂದಿದೆ. ಆದರೂ ಅದು ಸ್ಥಾಯೀ ಸಮಿತಿ ಚುನಾವಣೆ ಎದುರಿಸಿತು. ಮತದಾನಕ್ಕೂ ಮೊದಲು ನಡೆದ ಮಾತುಕತೆ ವೇಳೆ 12 ಸ್ಥಾನಗಳನ್ನು ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿಯಿತು. ಆದರೆ ಬಿಜೆಪಿ 11 ಸ್ಥಾನಗಳನ್ನು ಮಾತ್ರ ನೀಡಲು ಒಪ್ಪಿಕೊಂಡಿತು. ಅಂತಿಮವಾಗಿ ಮತದಾನ ನಡೆಯಿತು. ಕಾಂಗ್ರೆಸ್ ಒಂದು ಸ್ಥಾನ ಪಡೆಯಲು ಮಾತ್ರ ಶಕ್ತವಾಯಿತು.
ಜಿ.ಪಂ.ನಲ್ಲಿ ಬಿಜೆಪಿ 21 ಮತ್ತು ಕಾಂಗ್ರೆಸ್ 15 ಸದಸ್ಯರನ್ನು ಹೊಂದಿದೆ. ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಎಸ್. ಅಂಗಾರ, ಉಮಾನಾಥ ಕೋಟ್ಯಾನ್, ರಾಜೇಶ್ ನಾೖಕ್ ಮತದಾನದಲ್ಲಿ ಪಾಲ್ಗೊಂಡರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು. ಸಿಇಒ ಡಾ| ಆರ್. ಸೆಲ್ವಮಣಿ ಚುನಾವಣೆ ನಿರ್ವಹಿಸಿದರು.
ದ.ಕ. ಜಿ.ಪಂ. ಸಾಮಾನ್ಯಸಭೆ ನ.26ರಂದು ಬೆಳಗ್ಗೆ 11ಕ್ಕೆ ಜಿ.ಪಂ.ನ ನೇತ್ರಾವತಿ ಸಭಾಂಗಣ ದಲ್ಲಿ ಜರಗಲಿದೆ.