Advertisement
ನಿರಂತರ ಮಳೆಯಿಂದಾಗಿ ಸಂಪಾಜೆಬಳಿ ಮನೆ ಸಮೀಪ ಬೃಹತ್ ಹೊಂಡ ನಿರ್ಮಾಣವಾಗಿತ್ತು. ಬಳಿಕ ಪಂಚಾಯ ತ್‌ನಿಂದ ಮುಚ್ಚಲಾಗಿದೆ. ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆ ಸ್ಥಿತಿಯಲ್ಲೇ ಇದ್ದು, ನೀರಿನ ಪ್ರಮಾಣ ಸ್ವಲ್ಪ ಇಳಿಕೆಯಾಗಿತ್ತು.
ಅದು 6.4 ಮೀ.ಗೆ ಇಳಿಕೆ ಕಂಡಿದೆ. ಸುರತ್ಕಲ್‌ನಲ್ಲಿ ಬಟ್ಟಪ್ಪಾಡಿ ಬಳಿ ಕಡಲ್ಕೊರೆತ ಉಂಟಾಗಿದ್ದು, ಕಡಲು ಪ್ರಕ್ಷುಬ್ಧ ಗೊಂಡಿದೆ. ಮಂಗಳೂರಿನಲ್ಲಿ ದಿನವಿಡೀ ಮಳೆಯಾಗಿದ್ದು, ಕೆಲವು ಕಡೆ ಕಾವೂರು, ಮರೋಳಿ, ಅಳಪೆಯಲ್ಲಿ ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿದೆ. ಇಂದು ರೆಡ್ ಅಲರ್ಟ್
ಹವಾಮಾನ ಇಲಾಖೆ ಬುಧವಾರವೂ ಕರಾವಳಿಗೆ ರೆಡ್‌ಅಲರ್ಟ್ ಘೋಷಣೆ ಮಾಡಿದೆ. ಅಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ. ಗುರುವಾರದಿಂದ ಮೂರು ದಿನ ಆರೆಂಜ್ ಆಲರ್ಟ್ ಇದೆ. 30-40 ಕಿ.ಮೀ ವೇಗದಲ್ಲಿ ನಿರಂತರವಾಗಿ ಗಾಳಿ ಬೀಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Related Articles
ಸುಬ್ರಹ್ಮಣ್ಯ: ನಿರಂತರ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಮಂಗಳವಾರ ನೀರಿನ ಮಟ್ಟ ಅಲ್ಪ ಇಳಿಕೆಯಾಗಿದೆ.
Advertisement
ಸೋಮವಾರ ರಾತ್ರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಸ್ನಾನಘಟ್ಟದ ಶೌಚಾಲಯ, ಲಗೇಜ್ ಕೊಠಡಿ ಭಾಗಶಃ ಮುಳುಗಡೆಯಾಗಿ, ಹೆದ್ದಾರಿಗೆ ನೀರು ನುಗ್ಗಿತ್ತು. ಆದರೆ ಮಂಗಳವಾರ ಬೆಳಗ್ಗೆ ನೀರಿನ ಮಟ್ಟ ಇಳಿಕೆಯಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಮತ್ತೆ ಆರಂಭಗೊಂಡಿತ್ತು. ಸಂಜೆ ವೇಳೆ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಇಳಿಕೆಯಾಗಿದೆ. ಆದರೂ ಸ್ನಾನಘಟ್ಟ ಮುಳುಗಡೆ ಸ್ಥಿತಿಯಲ್ಲೇ ಇದೆ.