Advertisement
ರಾಜ್ಯದಲ್ಲಿ ಪ್ರಸ್ತುತ ಸಾಲಿನಲ್ಲಿ ಶಿಶುಗಳ ಸಾವಿನ ಪ್ರಮಾಣ ಸಾವಿರಕ್ಕೆ 26 ಇದ್ದರೆ ದ.ಕ. ಜಿಲ್ಲೆಯಲ್ಲಿ ಇದು ಸಾವಿರಕ್ಕೆ 10 ಆಗಿದೆ.
10 ವರ್ಷಗಳ ಅಂಕಿ-ಅಂಶಗಳನ್ನು ಪರಿಗಣಿಸಿದರೆ ತಾಯಿ ಮರಣದಲ್ಲಿ ಏರಿಳಿತ ಕಂಡು ಬಂದಿದೆ. 2020-21 ಸಾಲಿನಲ್ಲಿ ಜಿಲ್ಲೆಯಲ್ಲಿ 22 ತಾಯಂದಿರು ಹೆರಿಗೆ ವೇಳೆ ಮೃತಪಟ್ಟಿದ್ದರೆ 2021-22 ಸಾಲಿನ ಜನವರಿ ವರೆಗಿನ 10 ತಿಂಗಳಲ್ಲಿ 15 ತಾಯಂದರ ಮರಣ ಸಂಭವಿಸಿದೆ.
Related Articles
ಗರ್ಭಾವಸ್ಥೆಯಲ್ಲಿ ತಾಯಿ ವಿಟಮಿನ್‌ಯುಕ್ತ ಆಹಾರ ಸೇವಿಸದೇ ಇರುವುದರಿಂದ ಮಗುವಿನಲ್ಲಿ ಅಪೌಷ್ಟಿಕತೆ ಕಂಡುಬಂದು ಹೆರಿಗೆ ವೇಳೆ ಶಿಶು ಮರಣ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕಲು ಅಂಗನವಾಡಿಗಳ ಮುಖಾಂತರ ಸರಕಾರವೇ ವಿಟಮಿನ್‌ಯುಕ್ತ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ. ಸೊಪ್ಪು ತರಕಾರಿ, ಹಣ್ಣು, ಒಣ ಹಣ್ಣು, ಮೊಟ್ಟೆ, ಮೀನು, ಹಾಲು, ಮೊಸರು ಮುಂತಾದವುಗಳ ಸೇವನೆಯಿಂದ ತಾಯಿ ಮತ್ತು ಮಗುವಿನ ದೇಹಕ್ಕೆ ವಿಟಮಿನ್ ದೊರೆಯುತ್ತದೆ.
Advertisement
ಗರ್ಭಿಣಿಯರ ನೋಂದಣಿಯಾದ ತತ್‌ಕ್ಷಣದಿಂದಲೇ ಅವರ ಆರೋಗ್ಯದ ಬಗ್ಗೆ ನಿಗಾ ಇಡುವ ಕೆಲಸ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ನಡೆಯುತ್ತಿದೆ. ಪ್ರತೀ ತಿಂಗಳು ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಲಾಗುತ್ತದೆ. ಅಂಗನವಾಡಿ / ಆಶಾ ಕಾರ್ಯಕರ್ತೆಯರು ಆಗಾಗ ಮನೆ-ಮನೆ ಭೇಟಿ ನೀಡುತ್ತಾರೆ.
ಹೆರಿಗೆ ಸಂದರ್ಭ ತಾಯಿ / ಮಗುವಿನ ಸಾವನ್ನು ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಹೈ ರಿಸ್ಕ್ ಪ್ರಕರಣಗಳಿದ್ದಲ್ಲಿ, ಹಿಂದೆ ಗರ್ಭಪಾತ, ಸಿಜೇರಿಯನ್ ಆಗಿದ್ದರೆ ಅಥವಾ ಈ ಮೊದಲು ನಿರ್ಜೀವ ಶಿಶು ಜನನವಾಗಿದ್ದಲ್ಲಿ ಅಂತಹ ತಾಯಂದಿರ ಬಗ್ಗೆ ವಿಶೇಷ ನಿಗಾ ಇರಿಸುವ ಕೆಲಸವೂ ನಡೆಯುತ್ತಿದೆ.– ಡಾ| ಕಿಶೋರ್ ಕುಮಾರ್,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ