ಬಾರಿಯೂ ಜನವರಿವರೆಗೆ ಬದಲಿಲ್ಲ. 8,87,060 ಮಹಿಳಾ ಮತದಾರರಿದ್ದರೆ ಪುರುಷರು 8,50,552. ಇಷ್ಟಾದರೂ ಜಿಲ್ಲೆಯ ಚುನಾವಣೆಯ ಇತಿಹಾಸ ಗಮನಿಸಿದರೆ ಕೇವಲ 5 ಅವಧಿಯಲ್ಲಿ ಮಹಿಳೆಯರಿಗೆ ಮಾತ್ರ ಶಾಸಕಿಯರಾಗುವ ಅವಕಾಶ ಸಿಕ್ಕಿದೆ.
Advertisement
ಹಾಗೆಂದು ಆದವರು ನಾಲ್ಕು ಮಂದಿ. ಇದರಲ್ಲಿ ಪುತ್ತೂರು ಮೂರು ಬಾರಿ ಶಾಸಕಿ ಯರಾಗಲು ಅವಕಾಶವಿತ್ತರೆ, ಮಂಗಳೂರು ಹಾಗೂ ಬಂಟ್ವಾಳದಲ್ಲಿ ಒಮ್ಮೆ ಅವಕಾಶ ಸಿಕ್ಕಿದೆ. ಜಿಲ್ಲೆಯಲ್ಲೆ ಮೊದಲ ಬಾರಿ ಶಾಸಕಿಯಾದವರು 1967 ರಲ್ಲಿ ಬಂಟ್ವಾಳದಿಂದ ಲೀಲಾವತಿ ರೈ. ಅವರು ಕಾಂಗ್ರೆಸ್ ಪ್ರತಿನಿ ಧಿಸಿದ್ದರು. 1972ರಲ್ಲಿ ಮಂಗಳೂರಿನಿಂದ (ಈಗ ಮಂಗಳೂರು ದಕ್ಷಿಣ) ಕಾಂಗ್ರೆ ಸ್ ನ ಎಡ್ಡಿ ಸಲ್ಡಾನ್ಹಾ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದು ವಿಧಾನಸಭೆ ಪ್ರವೇಶಿಸಿದರು.
2008ರಲ್ಲಿ ಮಲ್ಲಿಕಾ ಪ್ರಸಾದ್ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿಯಾದರೂ ದಕ್ಷಿಣ ಕನ್ನಡದಲ್ಲಿ ಕನಿಷ್ಠ
ಮೂವರು ಮಹಿಳೆಯರಿಗಾದರೂ ಸ್ಪರ್ಧಿಸಲು ಅವಕಾಶ ಸಿಗುತ್ತದೆಯೇ? ಮತದಾರರು ಬೆಂಬಲಿಸಿ ಗೆಲ್ಲಿಸುವರೇ
ಎಂಬುದನ್ನು ಕಾದು ನೋಡಬೇಕಿದೆ.