Advertisement

ದ.ಕ.: 3 ಪ್ರದೇಶಗಳು ಸೀಲ್‌ಡೌನ್‌ ಮುಕ್ತ

02:56 AM Apr 29, 2020 | Sriram |

ಮಂಗಳೂರು: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೀಲ್‌ಡೌನ್‌ಗೆ ಒಳಗಾಗಿದ್ದ ಮೂರು ಪ್ರದೇಶಗಳನ್ನು ಮುಕ್ತಗೊಳಿಸಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಆದೇಶಿಸಿದ್ದಾರೆ.

Advertisement

ಬಂಟ್ವಾಳ ತಾಲೂಕಿನ ಸಜಿಪನಡು, ಬೆಳ್ತಂಗಡಿ ತಾಲೂಕಿನ ಕರಾಯ ಮತ್ತು ಸುಳ್ಯದ ಅಜ್ಜಾವರದಲ್ಲಿ 28 ದಿನಗಳಿಂದ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿಲ್ಲ. ಈ ಪ್ರದೇಶದಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಗಳ ಕ್ವಾರಂಟೈನ್‌ ಮುಕ್ತಾಯವಾಗಿದ್ದು, ಅಲ್ಲಿ ಸೋಂಕಿಗೊಳಗಾಗಿದ್ದವರು ಕೂಡ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂಬ ಆರೋಗ್ಯ ಇಲಾಖೆಯ ವರದಿಯ ಆಧಾರದಲ್ಲಿ ಜಿಲ್ಲಾಡಳಿತವು ಸೀಲ್‌ಡೌನ್‌ನಿಂದ ಮೂರು ಪ್ರದೇಶವನ್ನು ಮುಕ್ತಗೊಳಿಸಿದೆ.

ಜಿಲ್ಲೆಯ 8 ಪ್ರದೇಶಗಳು ಕಂಟೈನ್‌ಮೆಂಟ್‌ ವಲಯ
ಪ್ರಸ್ತುತ ಪುತ್ತೂರು ತಾಲೂಕಿನ ಸಂಪ್ಯ, ಉಪ್ಪಿನಂಗಡಿ, ಬಂಟ್ವಾಳ ತಾಲೂಕಿನ ಕಸಬಾ, ತುಂಬೆ, ನರಿಕೊಂಬು, ಮಂಗಳೂರು ತಾಲೂಕಿನ ಫ‌ಸ್ಟ್‌ ನ್ಯೂರೋ ಆಸ್ಪತ್ರೆ, ಕುಲಶೇಖರ, ತೊಕ್ಕೊಟ್ಟು ಕಂಟೈನ್‌ಮೆಂಟ್‌ ವಲಯಗಳಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next