Advertisement

ದ.ಕ. ಜಿಲ್ಲೆಯಲ್ಲಿ ಶೇ.1.83ಕ್ಕೆ ಇಳಿಕೆಯಾದ ಪಾಸಿಟಿವಿಟಿ ದರ : 207 ಮಂದಿಯಲ್ಲಿ ಸೋಂಕು ಪತ್ತೆ

07:17 PM Aug 28, 2021 | Team Udayavani |

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಶನಿವಾರದಂದು ಕೋವಿಡ್ ದೈನಂದಿನ ಪ್ರಕರಣ ತುಸು ಇಳಿಕೆ ಕಂಡಿದೆ. ಜಿಲ್ಲೆಯ 207 ಮಂದಿಗೆ ಕೊರೊನಾ ದೃಢಪಟ್ಟಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ.

Advertisement

ಮೃತಪಟ್ಟವರಲ್ಲಿ ಸುಳ್ಯ ಮತ್ತು ಪುತ್ತೂರು ತಾಲೂಕಿನ ತಲಾ ಇಬ್ಬರು . ಮತ್ತು ಹೊರ ಜಿಲ್ಲೆಯ ಮೂವರು.

ಜಿಲ್ಲೆಯಲ್ಲಿ ಶನಿವಾರದಂದು 312 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 1564 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಒಟ್ಟು 1,09,407 ಮಂದಿ ಕೊರೊನಾ ಸೋಂಕಿಗೊಳಗಾಗಿದ್ದು, 1,05,278 ಮಂದಿ ಗುಣಮುಖರಾಗಿದ್ದಾರೆ.

ಸದ್ಯ 2565 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಶೇ.1.83 ಪಾಸಿಟಿವಿಟಿ ದರ ಇದೆ.

ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 1229 ಪತ್ತೆ|1289 ಸೋಂಕಿತರು ಗುಣಮುಖ

Advertisement
Advertisement

Udayavani is now on Telegram. Click here to join our channel and stay updated with the latest news.

Next