Advertisement

ದ.ಕ.: 218, ಉಡುಪಿ 182 ಮಂದಿಗೆ ಕೊರೊನಾ ಪಾಸಿಟಿವ್‌

10:26 AM Jul 26, 2020 | sudhir |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 218 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದೆ. ಇದೇ ವೇಳೆ ಗುರುವಾರ ಮತ್ತು ಶುಕ್ರವಾರ ಮೃತಪಟ್ಟ ಮಂಗಳೂರಿನ ಏಳು ಮಂದಿ, ಮಂಜೇಶ್ವರದ ಒಬ್ಬರು ಸೇರಿದಂತೆ ಎಂಟು ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯ ಸರಕಾರದ ಅಧಿಕೃತ ವರದಿಯಂತೆ ಜಿಲ್ಲೆಯಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 97ಕ್ಕೇರಿದೆ.

Advertisement

ಸೋಂಕಿತರ ಪೈಕಿ 46 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, 87 ಮಂದಿಗೆ ಇನ್‌ ಫ್ಲೂಯೆನ್ಸ ಲೈಕ್‌ ಇಲ್‌ನೆಸ್‌, 15 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಕೊರೊನಾ ದೃಢಪಟ್ಟಿದೆ. 70 ಮಂದಿಯ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.

ಒಂದೇ ಕಂಪೆನಿಯ 16 ಮಂದಿ
ಸುರತ್ಕಲ್‌: ಬೈಕಂಪಾಡಿ ಕೈಗಾರಿಕಾ ಪ್ರಾಂಗಣದಲ್ಲಿರುವ ಪ್ಯಾಕೇಜಿಂಗ್‌ ಕಂಪೆನಿಯ 16 ಸಿಬಂದಿಯಲ್ಲಿ ಮತ್ತೆ ಸೋಂಕು ದೃಢಪಟ್ಟಿದೆ. ಗುರುವಾರ ಮೊದಲಿಗೆ ಐವರಲ್ಲಿ ಸೋಂಕು ಕಾಣಿಸಿತ್ತು. ಎನ್‌ಎಂಪಿಟಿ ವಸತಿ ಬಡಾವಣೆಯಲ್ಲೂ 150ಕ್ಕೂ ಅಧಿಕ ಮಂದಿಗೆ ಸೋಂಕುಬಾಧಿಸಿದೆ.

ಉಳ್ಳಾಲ:16 ಪ್ರಕರಣ
ಉಳ್ಳಾಲ ನಗರಸಭಾ ವ್ಯಾಪ್ತಿಯ ಐವರು ಸೇರಿ ದಂತೆ ಉಳ್ಳಾಲ ವ್ಯಾಪ್ತಿಯಲ್ಲಿ 16 ಮಂದಿಗೆ ಸೋಂಕು ದೃಢವಾಗಿದೆ.
ಮೂಲ್ಕಿ: 5 ಪ್ರಕರಣ
ಮೂಲ್ಕಿ ತಾ| ಕಚೇರಿ ವ್ಯಾಪ್ತಿ ಯಲ್ಲಿ ಶನಿವಾರ 5 ಕೊರೊನಾ ಪ್ರಕರಣಗಳು ದಾಖಲಾಗಿವೆ.

ಉಡುಪಿ: ಜಿಲ್ಲೆಯಲ್ಲಿ ಶನಿವಾರ 182 ಪಾಸಿಟಿವ್‌ ಮತ್ತು 493 ನೆಗೆಟಿವ್‌ ಪ್ರಕರಣ ವರದಿಯಾಗಿವೆ. ಬಾಧಿತರಲ್ಲಿ ಉಡುಪಿ ತಾಲೂಕಿನ 96, ಕುಂದಾಪುರ ತಾಲೂಕಿನ 37, ಕಾರ್ಕಳ ತಾಲೂಕಿನ 49 ಮಂದಿ ಇದ್ದಾರೆ. 109 ಪುರುಷರು, 68 ಮಹಿಳೆಯರು, ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು. ಶನಿವಾರ 79 ಮಂದಿ ಗುಣಮುಖರಾಗಿ ಬಿಡು ಗಡೆಗೊಂಡರೆ, 539 ಮಂದಿ ಹೋಂ ಐಸೊಲೇಶನ್‌ಗೆ ಒಳಪಟ್ಟಿದ್ದಾರೆ.

Advertisement

ಮೂವರ ಸಾವು
ಶುಕ್ರವಾರ ರಾತ್ರಿ ಶಿವಮೊಗ್ಗ ಜಿಲ್ಲೆಯ ಮಹಿಳೆ, ಶನಿವಾರ ಕೊಲ್ಲೂರಿನವರೊಬ್ಬರು ಮತ್ತು ಉ.ಕ. ಜಿಲ್ಲೆಯವರೊಬ್ಬರು ಮೃತಪಟ್ಟಿದ್ದು ಅವರಲ್ಲಿ ಕೋವಿಡ್ ದೃಢವಾಗಿದೆ.

75 ವರ್ಷದ ಶಿವಮೊಗ್ಗದ ಮಹಿಳೆ
ಶ್ವಾಸಕೋಶ, ಕಿಡ್ನಿ ಸಮಸ್ಯೆಯಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ದ್ದರು. ಶುಕ್ರವಾರ ರಾತ್ರಿ ಅವರು ಮೃತ
ಪಟ್ಟರು. ಶನಿವಾರ ಅಂತಿಮ ಸಂಸ್ಕಾರ ವನ್ನು ಉಡುಪಿಯ ಖಬರಸ್ಥಾನದಲ್ಲಿ ನೆರವೇರಿಸಲಾಯಿತು.

ಕೊಲ್ಲೂರಿನ 45 ವರ್ಷದ ವ್ಯಕ್ತಿ ಯನ್ನು ಶ್ವಾಸಕೋಶದ ಕ್ಯಾನ್ಸರ್‌ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ದೃಢಪಟ್ಟ ಬಳಿಕ ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲಾ ಯಿತು. ಶನಿವಾರ ಮೃತಪಟ್ಟರು. ಅವರ ಅಂತಿಮ ಸಂಸ್ಕಾರವನ್ನು ಕೊಲ್ಲೂರಿನಲ್ಲಿ ನಡೆಸಲಾಯಿತು.

ಉ.ಕ. ಜಿಲ್ಲೆಯ 45 ವರ್ಷದ ಒಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಬೇರೆ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿ ದ್ದರು. ಅವರಿಗೆ ಪಾಸಿಟಿವ್‌ ಬಂದಿದ್ದು ಶನಿವಾರ ಅಸು ನೀಗಿದರು.

ಉಡುಪಿ ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸಾವುಗಳ ಸಂಖ್ಯೆ 15ಕ್ಕೇರಿದೆ. ಹೊರ ಜಿಲ್ಲೆಗಳ ವ್ಯಕ್ತಿಗಳ ಸಾವನ್ನು ಉಡುಪಿ ಜಿಲ್ಲೆಗೆ ಸೇರಿಸಿಲ್ಲ. ಶನಿವಾರ 592 ಮಂದಿಯ ಮಾದರಿ ಸಂಗ್ರಹಿಸಿದ್ದು 528 ವರದಿ ಗಳು ಬರಬೇಕಿವೆೆ.

Advertisement

Udayavani is now on Telegram. Click here to join our channel and stay updated with the latest news.

Next