Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರು, ಜಿಲ್ಲೆಯಲ್ಲಿ ಒಟ್ಟು 1157 ಮಂದಿಯ ಮೇಲೆ ಭದ್ರತಾ ಕಾಯ್ದೆಯಡಿ ಕ್ರಮಕೈಗೊಳ್ಳಲಾಗಿದೆ. ಅಪರಾಧ ಕೃತ್ಯ ಗಳಲ್ಲಿ ಗುರುತಿಸಿಕೊಂಡಿದ್ದ 806 ಮಂದಿಯಿಂದ ಮುಚ್ಚಳಿಕೆ ಬರೆಸಿ ಕೊಳ್ಳಲಾಗಿದೆ. 75 ಮಂದಿಯನ್ನು ಗಡೀ ಪಾರು ಮಾಡಲಾಗಿದೆ. 8 ಮಂದಿಯ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡಿದ್ದು, ಇದರಲ್ಲಿ 4ಮಂದಿಯ ಮೇಲೆ ಹೈಕೋರ್ಟ್ ಅಡ್ವೆಸರಿ ಕಮಿಟಿಯಿಂದ ಗೂಂಡಾ ಕಾಯ್ದೆ ಅನುಮೋದನೆಗೊಂಡಿದೆ. ಅವರನ್ನು ಒಂದು ವರ್ಷದ ವರೆಗೆ ಬಂಧನದಲ್ಲಿ ಇರಿಸಲಾಗುತ್ತದೆ ಎಂದರು.
ಒಳಗೊಂಡಂತೆ ಸ್ಥಳೀಯ ಸಿಬಂದಿ ಯೊಂದಿಗೆ ಪಥಸಂಚಲನ ನಡೆಸಲಾಗಿದ್ದು, 3 ಕಡೆ ದೊಡ್ಡ ಪ್ರಮಾಣದ ಪಥ ಸಂಚಲನ ನಡೆದಿದೆ. ಮಂಗಳೂರು ನಗರದಲ್ಲಿ ಮಂಗಳವಾರ ಪಥ ಸಂಚಲನ ನಡೆಸಲಾಗಿದ್ದು, 830 ಅಧಿಕಾರಿ ಸಿಬಂದಿ ಭಾಗವಹಿಸಿದ್ದಾರೆ. 12 ಕಡೆಗಳಲ್ಲಿ ಚೆಕ್‌ಪೋಸ್ಟ್ ತೆರೆಯ ಲಾಗಿದ್ದು, 22,24,489 ರೂ. ನಗದು, 8,87,950 ರೂ. ಮೌಲ್ಯದ ಅಮಲು ಪದಾರ್ಥ ವಶಪಡಿಸಿಕೊಳ್ಳಲಾಗಿದೆ. ಒಟ್ಟು 3 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ ಎಂದರು. ಮತದಾರ ಜಾಗೃತಿ ಅಭಿಯಾನ
ದ.ಕ. ಜಿಲ್ಲೆಯಲ್ಲಿ ಹಿಂದಿನ ಚುನಾವಣೆಗಳಲ್ಲಿ 72 ಮತಗಟ್ಟೆ ಯಲ್ಲಿ ಕಡಿಮೆ ಮತದಾನ ಆಗಿತ್ತು. ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಇದು ಹೆಚ್ಚು. ಇದರ ಆಧಾರದಲ್ಲಿ ಈ ಮತಗಟ್ಟೆಯಲ್ಲಿ ಮತದಾನ ಹೆಚ್ಚಳಕ್ಕೆ ಸ್ವೀಪ್ ಮೂಲಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಮತದಾನದ ವಿಚಾರದಲ್ಲೂ ಜಾಗೃತಿ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಡಾ| ಆನಂದ್ ತಿಳಿಸಿದರು.