Advertisement
36 ಮಂದಿಗೆ ಸೋಂಕಿತರ ಸಂಪರ್ಕದಿಂದ, 103 ಮಂದಿಗೆ ಇನ್‌ಫ್ಲೂಯೆನ್ಜ್ ಲೈಕ್ ಇಲ್‌ನೆಸ್, 10 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಕೋವಿಡ್ ದೃಢಪಟ್ಟಿದೆ. 97 ಮಂದಿಯ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.
ಮೂಲ್ಕಿ: ಬಪ್ಪನಾಡು ಗ್ರಾಮದ ಪಂಚಮಹಾಲ್ ಕೆನರಾ ಬ್ಯಾಂಕ್ ಸಮೀಪದ ಮೂವರು ಮಹಿಳೆಯರು, ತೋಕೂರು ಬಳಿಯ ಇಬ್ಬರು ಮಹಿಳೆಯರು, ಕಾರ್ನಾಡು ಆಶ್ರಯ ಕಾಲನಿ ಮತ್ತು ಕಂಬಳಬೆಟ್ಟು ಹಳೆಯಂಗಡಿಯ ಇಬ್ಬರು ಪುರುಷರ ಸಹಿತ ಮೂಲ್ಕಿ ಪರಿಸರದಲ್ಲಿ ಗುರುವಾರ 7 ಮಂದಿಗೆ ಕೋವಿಡ್ ಬಾಧಿಸಿರುವುದು ದೃಢವಾಗಿದೆ.
Related Articles
ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಗುರುವಾರ 14 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಪುತ್ತೂರು ಕರ್ಮಲದ ಮಹಿಳೆ, ತೆಂಕಿಲದ ಇಬ್ಬರು ಪುರುಷರು, ನೆಹರೂನಗರ, ಕೃಷ್ಣನಗರ, ದರ್ಬೆ, ಬನ್ನೂರು, ಕಾವು ಮಾಟ್ನೂರು, 34ನೇ ನೆಕ್ಕಿಲಾಡಿಯ ಪುರುಷರು ಮತ್ತು ಬಪ್ಪಳಿಗೆ, ಮೊಟ್ಟೆತ್ತಡ್ಕ, ಕುಂಬ್ರದ ಮಹಿಳೆಯರನ್ನು ಸೋಂಕು ಬಾಧಿಸಿದೆ. ಕಡಬ ತಾಲೂಕಿನ ಕೋಡಿಂಬಾಳದ ಯುವತಿ, ಕೌಕ್ರಾಡಿಯ ಯುವಕ ಬಾಧಿತರಾಗಿದ್ದಾರೆ. ಉಭಯ ತಾಲೂಕುಗಳಲ್ಲಿ ಈ ವರೆಗೆ 424 ಕೊರೊನಾ ಪ್ರಕರಣಗಳು ವರದಿಯಾಗಿವೆ. 6 ಮಂದಿ ಮೃತಪಟ್ಟಿದ್ದಾರೆ.
Advertisement
ಬಂಟ್ವಾಳ: 47 ಪ್ರಕರಣಬಂಟ್ವಾಳ: ತಾಲೂಕಿನಲ್ಲಿ ಗುರುವಾರ 47 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಳಿಕೆಯಲ್ಲಿ 7, ಮಾಣಿ, ವಿಟ್ಲದಲ್ಲಿ ತಲಾ 4, ಪಿಲಾತಬೆಟ್ಟಿನಲ್ಲಿ 3, ಬಂಟ್ವಾಳ, ಬಿ.ಕಸ್ಬಾ, ಸಿದ್ಧಕಟ್ಟೆ, ಕನ್ಯಾನ, ಮೂಡನಡುಗೋಡು, ನಾವೂರು, ಬಿ.ಮೂಡದಲ್ಲಿ ತಲಾ 2, ಪಾಣೆಮಂಗಳೂರು, ಪುದು, ಸಜೀಪನಡು, ಬಾಳ್ತಿಲ, ಕೊಲ, ವೀರಕಂಭ, ಇರ್ವತ್ತೂರು, ಪೆರುವಾಯಿ, ಕುಕ್ಕಿಪಾಡಿ, ಕಡೇಶ್ವಾಲ್ಯ, ವಿಟ್ಲ ಕಸ್ಬಾ, ಅಮಾಡಿ, ಕೇಪು, ಕಾವಳಮೂಡೂರು, ಫರಂಗಿಪೇಟೆಗಳಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.