Advertisement

Dakshina Kannada 21, ಉಡುಪಿಯ 15 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

10:51 PM Sep 03, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 21 ಮಂದಿ ಶಿಕ್ಷಕರು 2023-24ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸೆ. 5ರಂದು ಬೆಳಗ್ಗೆ 10ಕ್ಕೆ ಸುಳ್ಯ ಪರಿವಾರಕಾನದ ಅಮರಜ್ಯೋತಿ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ಜರಗುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Advertisement

ಕಿರಿಯ ಪ್ರಾಥಮಿಕ ವಿಭಾಗ
1. ವಿಜಯಶ್ರೀ, ಸಹ ಶಿಕ್ಷಕರು, ಸರಕಾರಿ ಮಾ.ಹಿ.ಪ್ರಾ ಶಾಲೆ, ಚೆನ್ನೈತೋಡಿ, ಬಂಟ್ವಾಳ
2. ಕಲ್ಲೇಶಪ್ಪ.ಬಿ., ಮುಖ್ಯಶಿಕ್ಷಕರು, ಸರಕಾರಿ ಕಿ.ಪ್ರಾ. ಶಾಲೆ ಮುಂಡೂರು, ಬೆಳ್ತಂಗಡಿ
3. ಜಯಂತಿ, ಸಹ ಶಿಕ್ಷಕರು, ದ.ಕ. ಜಿ.ಪಂ ಹಿ.ಪ್ರಾ. ಶಾಲೆ ಬಡಗ ಎಕ್ಕಾರು, ಮಂಗಳೂರು ಉತ್ತರ
4. ಕಾರ್ಮಿನ್‌ ಡಿ’ಸೋಜಾ, ಸಹ ಶಿಕ್ಷಕರು ಸರಕಾರಿ ಕಿ.ಪ್ರಾ. ಶಾಲೆ ಆಚಾರಿ ಜೋರ, ಕುಪ್ಪೆಪದವು, ಮಂಗಳೂರು ದಕ್ಷಿಣ
5. ವಾಣಿಶ್ರೀ, ಸಹಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಡಂಗಡಿ, ಮೂಡುಬಿದಿರೆ
6. ಆನಂದ ಮೂರ್ತಿ ಡಿ.ಎಸ್‌. ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂರಾಜೆಕೊಪ್ಪ, ಪುತ್ತೂರು
7. ರಾಧಮ್ಮ ಕೆ., ಸಹಶಿಕ್ಷಕಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೊಳುಬೈಲು, ಸುಳ್ಯ
ಹಿರಿಯ ಪ್ರಾಥಮಿಕ ವಿಭಾಗ
8. ಶಕುಂತಲಾ ಎಸ್‌. ಉಳ್ಳಾಲ, ಮುಖ್ಯಶಿಕ್ಷಕರು, ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪುದು- ತುಂಬೆ, ಬಂಟ್ವಾಳ
9. ಪ್ರಶಾಂತ ಸುವರ್ಣ, ದೈಹಿಕ ಶಿಕ್ಷಣ ಶಿಕ್ಷಕರು, ದ.ಕ.ಜಿ.ಪಂ.ಉ.ಹಿ.ಪ್ರಾ. ಶಾ. ಬಂದಾರು, ಬೆಳ್ತಂಗಡಿ
10. ಗಣೇಶ ಕುಮಾರ್‌, ಮುಖ್ಯಶಿಕ್ಷಕರು, ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಮಣ್ಣಗುಡ್ಡ, ಮಂಗಳೂರು ಉತ್ತರ
11. ದಾûಾಯಿಣಮ್ಮ, ಸಹ ಶಿಕ್ಷಕರು, ದ.ಕ. ಜಿ.ಪಂ. ಮಾದರಿ ಹಿ.ಪ್ರಾ. ಶಾಲೆ ಶಕ್ತಿನಗರ, ಮಂಗಳೂರು ದಕ್ಷಿಣ
12. ಸುಜಾತಾ ಕುಮಾರಿ, ಸಹ ಶಿಕ್ಷಕರು, ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಪಣಪಿಲ, ಮೂಡುಬಿದಿರೆ
13. ಶುಭಲತಾ, ಮುಖ್ಯಶಿಕ್ಷಕರು, ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಆನಡ್ಕ, ಪುತ್ತೂರು
14. ಹನುಮಂತಪ್ಪ ಜಿ., ಸಹಶಿಕ್ಷಕರು, ಶ್ರೀ ಶಾರದಾ ಅನುದಾನಿತ ಹಿ.ಪ್ರಾ. ಶಾಲೆ, ಗೂನಡ್ಕ, ಸುಳ್ಯ
ಪ್ರೌಢ ಶಾಲಾ ವಿಭಾಗ
15. ಗೋಪಾಲಕೃಷ್ಣ ನೇರಳೆಕಟ್ಟೆ, ಸಹ ಶಿಕ್ಷಕರು, ಸ. ಪ್ರೌಢ ಶಾಲೆ, ನಾರ್ಶ ಮೈದಾನ, ಬಂಟ್ವಾಳ
16. ರಾಮಕೃಷ್ಣ ಭಟ್‌, ಮುಖ್ಯ ಶಿಕ್ಷಕರು, ಎಸ್‌.ಡಿ.ಎಂ. ಪ್ರೌಢ ಶಾಲೆ, ಬೆಳಾಲು, ಬೆಳ್ತಂಗಡಿ
17. ಆಲ್ವಿನ್‌ ಅರುಣ್‌ ನೊರೊನ್ಹಾ, ಸಹಶಿಕ್ಷಕರು, ಸೈಂಟ್‌ ಜೋಸೆಫ್‌ ಪಿ.ಯು. ಕಾಲೇಜು (ಪ್ರೌಢ ಶಾಲೆ ವಿಭಾಗ) ಬಜಪೆ, ಮಂಗಳೂರು ಉತ್ತರ
18. ಕೃಷ್ಣ ಎನ್‌., ಸಹಶಿಕ್ಷಕರು, ಕಿಟ್ಟೆಲ್‌ ಮೆಮೊರಿಯಲ್‌ ಪ್ರೌಢ ಶಾಲೆ ಗೋರಿಗುಡ್ಡ, ಮಂಗಳೂರು ದಕ್ಷಿಣ
19. ಡಾ| ಪ್ರತಿಮಾ ಎಚ್‌.ಪಿ. ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ನೀರ್ಕೆರೆ, ಮೂಡುಬಿದಿರೆ
20. ಹರಿಶ್ಚಂದ್ರ ಕೆ., ಮುಖ್ಯಶಿಕ್ಷಕರು, ಸಂತ ಜಾರ್ಜ್‌ ಅನುದಾನಿತ ಪ್ರೌಢ ಶಾಲೆ ಕುಂತೂರುಪದವು, ಪುತ್ತೂರು
21. ಉದಯ ಕುಮಾರ್‌ ರೈ, ಸಹ ಶಿಕ್ಷಕರು ವಿದ್ಯಾಬೋಧಿನಿ ಪ್ರೌಢ ಶಾಲೆ, ಬಾಳಿಲ, ಸುಳ್ಯ

ಉಡುಪಿ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಿಸಲಾಗಿದ್ದು, ಹಿರಿಯ ಪ್ರಾಥಮಿಕ, ಕಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಲಾ ಐವರಂತೆ 15 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಸೆ. 5ರಂದು ಬ್ರಹ್ಮಾವರದ ಶ್ಯಾಮಿಲಿ ಶನಾಯ ಸಭಾಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕಿರಿಯ ಪ್ರಾಥಮಿಕ ವಿಭಾಗ
1. ರಘುರಾಮ, ಬಹ್ಮಾವರ ತಾಲೂಕಿನ ಸಗ್ರಿನೋಳೆ ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕ
2. ಯಶವಂತ, ಕುಂದಾಪುರ ತಾಲೂಕಿನ ಕೋಣಿಹರ ಸ.ಕಿ.ಪ್ರಾ. ಶಾಲೆಯ ಶಿಕ್ಷಕ
3. ಸೀತಾ ಜೋಗಿ, ಬೈಂದೂರು ತಾಲೂಕಿನ ಮರವಂತೆ (ಪೂರ್ವ) ಸ.ಕಿ.ಪ್ರಾ. ಶಾಲೆಯ ಸಹಶಿಕ್ಷಕಿ
4. ಶ್ಯಾಮಲಾ, ಉಡುಪಿ ತಾಲೂಕಿನ ಮಲ್ಪೆ ಗಾಂಧಿ ಶತಾಬ್ದ ಸ.ಮಾ.ಹಿ.ಪ್ರಾ. ಶಾಲೆಯ ಸಹಶಿಕ್ಷಕಿ
5. ಶ್ರೀನಿವಾಸ ಭಟ್‌, ಕಾರ್ಕಳ ತಾಲೂಕಿನ ಮುದ್ರಾಡಿ ಉಪ್ಪಳ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ
ಪ್ರಾಥಮಿಕ ಶಾಲಾ ವಿಭಾಗ
6. ಕೆ. ಅರುಣ್‌ ಕುಮಾರ್‌ ಶೆಟ್ಟಿ, ಬ್ರಹ್ಮಾವರ ತಾಲೂಕಿನ ಪೆರ್ಡೂರು ಅನಂತ ಪದ್ಮನಾಭ ಅನುದಾನಿತ ಹಿ. ಪ್ರಾ. ಶಾಲೆಯ ಸಹ ಶಿಕ್ಷಕ
7. ಶಶಿಧರ ಶೆಟ್ಟಿ, ಕುಂದಾಪುರ ತಾಲೂಕಿನ ಅಮಾಸೆಬೈಲು ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ
8. ಪ್ರವೀಣ್‌ ಕುಮಾರ್‌ ಶೆಟ್ಟಿ, ಬೈಂದೂರು ತಾಲೂಕಿನ ಆಲೂರು ಸರಸ್ವತಿ ಅ.ಹಿ. ಪ್ರಾ. ಶಾಲೆಯ ದೈ.ಶಿ. ಶಿಕ್ಷಕ
9 ಶಂಕರ್‌, ಉಡುಪಿ ತಾಲೂಕಿನ ಮಲ್ಪೆಯ ಗಾಂಧಿ ಶತಾಬ್ದ ಸ.ಮಾ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ
10. ದೇವದಾಸ ಪಾಟ್ಕರ್‌, ಕಾರ್ಕಳ ತಾಲೂಕಿನ ಮುಡಾರು ಸ.ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕ
ಪ್ರೌಢಶಾಲಾ ವಿಭಾಗ
11. ರಮೇಶ್‌ ಕುಲಾಲ್‌, ಬ್ರಹ್ಮಾವರ ತಾಲೂಕಿನ ಆವರ್ಸೆ ಸ. ಪ್ರೌಢ ಶಾಲೆಯ ಮುಖ್ಯಶಿಕ್ಷಕ
12. ಅಜಯ್‌ ಕುಮಾರ್‌ ಶೆಟ್ಟಿ, ಕುಂದಾಪುರ ತಾಲೂಕಿನ ಕಂಡ್ಲೂರು ರಾಮನ್ಸ್‌ ಪ್ರೌಢ ಶಾಲೆಯ ಸಹ ಶಿಕ್ಷಕ
13. ಚೆನ್ನಯ್ಯ ಯು., ಬೈಂದೂರು ತಾಲೂಕಿನ ತಲ್ಲೂರು ಸ. ಪ್ರೌಢ ಶಾಲೆಯ ಸಹ ಶಿಕ್ಷಕ
14. ಬಾಲಕೃಷ್ಣ ಪಿ., ಉಡುಪಿ ತಾಲೂಕಿನ ಮಣಿಪಾಲ ರಾಜೀವನಗರದ ಸ. ಪ್ರೌಢ ಶಾಲೆಯ ಮುಖ್ಯಶಿಕ್ಷಕ
15. ಶಿವಸುಬ್ರಹ್ಮಣ್ಯ ಜಿ. ಭಟ್‌, ಕಾರ್ಕಳ ತಾಲೂಕಿನ ನಲ್ಲೂರು ಸ.ಪ್ರೌ. ಶಾಲೆಯ ಸಹ ಶಿಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next