Advertisement

ದ.ಕ.: 2 ಸಾವಿರ ಮನೆಗಳಲ್ಲಿ  ಶೌಚಾಲಯ ಇಲ್ಲ !

06:00 AM Nov 25, 2018 | |

ಮಂಗಳೂರು: ಸರಕಾರಿ ಅಂಕಿ ಅಂಶದ ಪ್ರಕಾರ ದ. ಕನ್ನಡದ 605 ಮನೆಗಳಲ್ಲಿ ಮಾತ್ರ ಶೌಚಾಲಯ ಇಲ್ಲ; ವಾಸ್ತವವಾಗಿ ಜಿಲ್ಲೆಯ 2 ಸಾವಿರಕ್ಕೂ ಹೆಚ್ಚು ಮನೆಗಳು ಈ ಮೂಲಸೌಲಭ್ಯ ವಂಚಿತವಾಗಿವೆ! ಇದು ಶನಿವಾರ ನಡೆದ ದ.ಕ.ಜಿ.ಪಂ. ಸಾಮಾನ್ಯ ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನೀಡಿದ ಮಾಹಿತಿ. ಸರಕಾರಿ ಅಂಕಿಅಂಶಗಳು ಸರಿಯಲ್ಲ. ಇಲಾಖಾ ಮಾಹಿತಿಗಿಂತ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಶೌಚಾಲಯ ಇಲ್ಲದೆ ಸಮಸ್ಯೆ ಅನುಭವಿ ಸುತ್ತಿವೆ ಎಂದು ಜಿ.ಪಂ.ನ ಆಡಳಿತ ಮತ್ತು ವಿಪಕ್ಷ ಸದಸ್ಯರು ಒಕ್ಕೊರಲ ಅಭಿಪ್ರಾಯ ಮಂಡಿಸಿದರು. ಇದಕ್ಕೆ ದನಿಗೂಡಿಸಿದ ಅಧ್ಯಕ್ಷರು, ಈ ವಿಚಾರಕ್ಕೆ ಸಂಬಂಧಿಸಿ ನಿರ್ಣಯ ಕೈಗೊಳ್ಳುವ ಸಲುವಾಗಿ ಪ್ರತ್ಯೇಕ ವಿಶೇಷ ಸಭೆಯನ್ನು ಶೀಘ್ರ ಕರೆಯಲಾಗುವುದು ಎಂದರು.

Advertisement

ಸ್ಥಾಯೀ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಮಾತನಾಡಿ, ಜಿಲ್ಲೆ ಹಾಗೂ ಜಿಲ್ಲೆಯ ಕೆಲವು ಗ್ರಾ.ಪಂ.ಗಳಿಗೆ ಸ್ವತ್ಛತೆಗಾಗಿ ಪುರಸ್ಕಾರಗಳು ಬಂದಿವೆ. ಆದರೆ ವಸ್ತುಸ್ಥಿತಿ ಬೇರೆ. ಜಿಲ್ಲೆಯಲ್ಲಿ ಶೌಚಾಲಯ ಇಲ್ಲದ ಮನೆಗಳ ಪೈಕಿ ಶೇ. 80ರಷ್ಟು ಪ.ಜಾತಿ ಮತ್ತು ಪ.ಪಂಗಡದ ಕುಟುಂಬಗಳು. ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದರು.

ಸದಸ್ಯೆ ಮಮತಾ ಗಟ್ಟಿ ಮಾತನಾಡಿ, ನರೇಗಾ ಯೋಜನೆಯಡಿ ಕಡ್ಡಾಯ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಬಹುದಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಜಿ.ಪಂ. ಸಿಇಒ ಸೆಲ್ವಮಣಿ ಆರ್‌. ಉದ್ಯೋಗ ಖಾತರಿ ಯೋಜನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

 3 ಜಿ ನೆಟ್‌ವರ್ಕ್‌ ವಿಸ್ತರಣೆ
ಗ್ರಾಮೀಣ ನ್ಯಾಯಬೆಲೆ ಅಂಗಡಿಗಳಲ್ಲಿ 3ಜಿ ನೆಟ್‌ವರ್ಕ್‌ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸಿಇಒ ಬಿಎಸ್ಸೆನ್ನೆಲ್‌ ಅಧಿಕಾರಿಗಳಿಗೆ ಸೂಚಿಸಿದರು. ಕೆಆರ್‌ಡಿಎಲ್‌ ವಿರುದ್ಧ ವರದಿ ಕೆಆರ್‌ಐಡಿಎಲ್‌ ಅಧಿಕಾರಿ ಮಾತ ನಾಡಿ, ಜಿಲ್ಲೆಯಲ್ಲಿ 102 ಶುದ್ಧ ಕುಡಿ ಯುವ ನೀರಿನ ಘಟಕ ಯೋಜನೆ ಇದ್ದು, 80ನ್ನು ಪ್ರಾರಂಭಿಸಲಾಗಿದೆ. ಮುಂದಿನ 15 ದಿನಗಳೊಳಗೆ ಉಳಿದ ಘಟಕಗಳನ್ನು ಪ್ರಾರಂಭಿಸಲಾಗುವುದು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಸಮಗ್ರ ಮಾಹಿತಿಯನ್ನು ಕೆಆರ್‌ಐಡಿಎಲ್‌ ನೀಡುತ್ತಿಲ್ಲ. ಸಭೆ ಗಳಿಗೂ ಸರಿಯಾಗಿ ಹಾಜರಾಗುತ್ತಿಲ್ಲ. ಘಟಕಗಳನ್ನು ಅಸಮರ್ಪಕವಾಗಿ ಪ್ರಾರಂಭಿಸಲಾಗಿದೆ ಎಂದು ದೂರಿ ದರು. ಈ ಬಗ್ಗೆ ಸರಕಾರಕ್ಕೆ ವರದಿ ಕಳುಹಿಸಲು ನಿರ್ಣಯಿಸಲಾಯಿತು.

ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಅನಿತಾ ಹೇಮನಾಥ ಶೆಟ್ಟಿ, ಯು.ಪಿ. ಇಬ್ರಾಹಿಂ ಉಪಸ್ಥಿತರಿದ್ದರು. 

Advertisement

ಗ್ರಾಮ ಪಂಚಾಯತ್‌ಗಳಿಗೆ ಪುರಸ್ಕಾರ
ವಿಶ್ವ ಶೌಚಗೃಹ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮಗಳನ್ನು ಅತ್ಯುತ್ತಮ ರೀತಿಯಲ್ಲಿ ಜಾರಿಗೊಳಿಸಿದ ಮಂಗಳೂರು ತಾ.ಪಂ.ನ ಕಲ್ಲಮುಂಡ್ಕೂರು, ಬಂಟ್ವಾಳದ ತುಂಬೆ, ಪುತ್ತೂರಿನ ನೂಜಿಬಾಳ್ತಿಲ, ಬೆಳ್ತಂಗಡಿಯ ಮುಂಡಾಜೆ ಹಾಗೂ ಸುಳ್ಯದ ಕನಕಮಜಲು ಗ್ರಾ.ಪಂ.ಗಳಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. 

ಜಿ.ಪಂ. ಸಾಮಾನ್ಯ ಸಭೆ: ಪ್ರಶಸ್ತಿಗೆ ಆಕ್ಷೇಪ
ಪ್ರಶಸ್ತಿಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಶಸ್ತಿಯನ್ನು ಯಾವ ಮಾನದಂಡದಲ್ಲಿ ನೀಡಲಾಗಿದೆ ಎಂದು ಪ್ರಶ್ನಿಸಿ, ಕೆಲವು ಗ್ರಾ.ಪಂ.ಗಳ ಆವರಣದಲ್ಲಿ ಸ್ವತ್ಛತೆಯೇ ಇಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಸೆಲ್ವಮಣಿ ಆರ್‌., ಈ ಪ್ರಶಸ್ತಿಗಾಗಿ ಕೇಂದ್ರ ಸರಕಾರ ಕೆಲವು ನಿಯಮಾವಳಿಗಳನ್ನು ನೀಡಿದೆ. ಅವುಗಳ ಅನುಸಾರ ಚಟುವಟಿಕೆ ಹಮ್ಮಿಕೊಂಡ ಗ್ರಾ. ಪಂ.ಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next