Advertisement
ಕ್ಷೀರಕ್ರಾಂತಿಯ ಪಿತಾಮಹ ಖ್ಯಾತಿಯ ಡಾ| ವರ್ಗೀಸ್ ಕುರಿಯನ್ ಜನ್ಮ ದಿನಾಚರಣೆ ಪ್ರಯುಕ್ತ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಶ್ರಯದಲ್ಲಿ ಅಜ್ಜರಕಾಡು ಟೌನ್‌ಹಾಲ್‌ನಲ್ಲಿ ಮಂಗಳವಾರ ನಡೆದ ಶುದ್ಧ ಹಾಲು ಉತ್ಪಾದನೆಯ ಮಹತ್ವ, ಮೇಘ ತಂತ್ರಜ್ಞಾನ ಸಾಫ್ಟ್ ವೇರ್ ಬಿಡುಗಡೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಹಾಲು ಉತ್ಪಾದಕರಿಗೆ ನ್ಯಾಯವಾಗಿ ಸಿಗುವ ಲಾಭಾಂಶ ವರ್ಗಾವಣೆಯಲ್ಲಿ ದ.ಕ. ಹಾಲು ಉತ್ಪಾದಕರ ಒಕ್ಕೂಟ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಹಾಲಿನ ಕೊರತೆಯಿದ್ದ ದೇಶದಲ್ಲಿ ಹಾಲಿನ ಪ್ರವಾಹ ಹರಿಸುವ ಸಾಧನೆಯ ಹಾದಿ ತೋರಿದ ಡಾ| ವರ್ಗೀಸ್ ಕುರಿಯನ್ ಅವರ ಸ್ಮರಣೆ ಅತ್ಯಗತ್ಯ ಎಂದು ಹೇಳಿದರು. ಮಿಲ್ಕೊ ಸಾಫ್ಟ್ವೇರನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ, ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಬಿಡುಗಡೆಗೊಳಿಸಿ, ಗ್ರಾಮೀಣ ಪ್ರದೇಶದಲ್ಲಿ ತಂತ್ರಜ್ಞಾನ ಬಳಕೆ, ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಅಭಿವೃದ್ಧಿ’ ಕುರಿತು ತಾಂತ್ರಿಕ ಉಪನ್ಯಾಸ ನೀಡಿದರು. ಶುದ್ಧ ಹಾಲು ಉತ್ಪಾದನೆಯ ಮಹತ್ವದ ಬಗ್ಗೆ ಬೆಂಗಳೂರು ಪ್ರಾದೇಶಿಕ ಡೈರಿ ಸೈನ್ಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ರಾಮಚಂದ್ರ ಬಿ. ಅವರು ಉಪನ್ಯಾಸ ನೀಡಿದರು.
Related Articles
Advertisement
ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ಎ. ಜಗದೀಶ ಕಾರಂತ, ಹದ್ದೂರು ರಾಜೀವ ಶೆಟ್ಟಿ, ಸುಧಾಕರ ಶೆಟ್ಟಿ, ಸಾಣೂರು ನರಸಿಂಹ ಕಾಮತ್, ಸುಭದ್ರ ರಾವ್, ಸವಿತಾ ಎನ್. ಶೆಟ್ಟಿ, ಸ್ಮಿತಾ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಸಮ್ಮಾನಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕರನಾರಾಯಣ ಹಾ.ಉ.ಸ.ಸಂಘದ ಕಾರ್ಯದರ್ಶಿ ಎಸ್. ದಯಾನಂದ ರಾವ್ ಅವರನ್ನು ಸಮ್ಮಾನಿಸಲಾಯಿತು. ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ ಹರಿವರ್ಮ ಅವರನ್ನು ಅಭಿನಂದಿಸಲಾಯಿತು. ನಂದಿನಿ ಡೀಲರ್‌ಗಳ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಉಭಯ ಜಿಲ್ಲೆಗಳ ನಂದಿನಿ ಡೀಲರ್‌ಗಳನ್ನು ಗುರುತಿಸಿ ಗೌರವಿಸಲಾಯಿತು. ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಸಹಾಯಕ ವ್ಯವಸ್ಥಾಪಕರಾದ ಸುಧಾಕರ್, ಜಾನೆಟ್ ರೋಸಾರಿಯೋ ನಿರೂಪಿಸಿದರು. ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ ಅವರು ವಂದಿಸಿದರು. ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ ಮಾತನಾಡಿ, ರೈತ ಮಹಿಳೆಯರ ಸ್ವಾಲಂಬಿ ಬದುಕಿಗೆ ಹೈನುಗಾರಿಕೆ ಪೂರಕವಾಗಿದೆ. ರಾಜ್ಯದ 14 ಒಕ್ಕೂಟಗಳಲ್ಲಿ ದ.ಕ.ಹಾ.ಉ. ಒಕ್ಕೂಟ ಹಾಲು ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. 1.20 ಲಕ್ಷದ ಸದಸ್ಯರಿರುವ 725 ಸಂಘಗಳಿಗೆ ಅನುಕೂಲವಾಗುವಂತೆ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗಿದೆ ಎಂದರು.