Advertisement

ಡೈರಿ ಹಗರಣ: ಸಚಿವ ಶರಣಪ್ರಕಾಶ ಮನೆ ಎದುರು ಬಿಜೆಪಿ ಪ್ರತಿಭಟನೆ

02:47 PM Feb 26, 2017 | |

ಕಲಬುರಗಿ: ಕಾಂಗ್ರೆಸ್‌ ಪಕ್ಷದ ವರಿಷ್ಠರಿಗೆ ಸಾವಿರ ಕೋಟಿ ರೂ.ಗಳನ್ನು ರಾಜ್ಯದ ಹಲವಾರು ಕಾಂಗ್ರೆಸ್‌ ಪಕ್ಷದ ಸಚಿವರಿಂದ ಹಾಗೂ ಶಾಸಕರಿಂದ ಸಂಗ್ರಹಿಸಿ ಮುಖ್ಯಮಂತ್ರಿಗಳು ಹಂಚಿಕೆ ಮಾಡಿದ ವಿವರವುಳ್ಳ ಡೈರಿ ಶಾಸಕ ಗೋವಿಂದರಾಜ್‌ ಅವರ ಬಳಿ ಸಿಕ್ಕ ಬಗ್ಗೆ ಆಂಗ್ಲ ಸುದ್ದಿವಾಹಿನಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಗ್ರಾಮಾಂತರ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಪ್ರತಿಭಟನೆ ನಡೆಸಿದರು.  

Advertisement

ಡೈರಿಯಲ್ಲಿ ಹಣ ನೀಡಿರುವ ಬಗ್ಗೆ ಕಾಂಗ್ರೆಸ್‌ ನಾಯಕರ ಹೆಸರುಗಳನ್ನು ಡೈರಿಯಲ್ಲಿ ನಮೂದಿಸಲಾಗಿದೆ. ಒಟ್ಟು 602 ಕೋಟಿ ರೂ. ಸಂಗ್ರಹವಾಗಿದ್ದು, 473 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖವಾಡ ಕಳಚಿಬಿದ್ದಿದ್ದು, ರಾಜ್ಯ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಕೂಡಲೇ  ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಹಾಗೂ ಪಾಲಿಕೆ  ಸದಸ್ಯ ಪರಶುರಾಮ ಸಲವಾಯಿ, ಜಿಲ್ಲಾ  ಯುವ ಘಟಕದ ಅಧ್ಯಕ್ಷ ಪ್ರವೀಣ ತೆಗನೂರ, ಸೂರ್ಯಕಾಂತ ಡೋಣಿ, ಶ್ರೀನಿವಾಸ ದೇಸಾಯಿ, ಸಂತೋಷ ಹಾದಿಮನಿ, ಶರಣು ಸಜ್ಜನ್‌, ಕೈಲಾಸ ಪಾಟೀಲ, ಸುನೀಲ, ಬಸವರಾಜ ಜವಳಿ, ನಾಗರಾಜ ಉಪಾಸೆ, ಮಹಿಂದ್ರಾ ನಾಯ್ಡು, ಶ್ರೀಧರ ಚವ್ಹಾಣ, ಸುನೀಲ ಮಹಾಗಾಂವಕರ, ಅಮೀತ ಚಿಡಗುಂಪಿ ಹಾಗೂ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next