Advertisement

ರೈತರಿಗೆ ಹೈನುಗಾರಿಕೆ ತುಂಬ ಸಹಕಾರಿ

12:37 PM Apr 21, 2017 | |

ಪಿರಿಯಾಪಟ್ಟಣ: ರೈತರು ಆರ್ಥಿಕ ವಾಗಿ ಸದೃಢಗೊಳ್ಳಲು ಕೃಷಿ ಯೊಂದಿಗೆ ಹೈನುಗಾರಿಕೆಯನ್ನು ಅಳವಡಿಸಿ ಕೊಳ್ಳಬೇಕು ಎಂದು ಕ್ಷೇತ್ರದ ಶಾಸಕ ಜಿ.ಟಿ.ದೇವೆಗೌಡರು ಹೇಳಿದರು. ತಾಲೂಕಿನ ಭುವನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಸಭಾಂಗಣ ಉದ್ಘಾಟಿಸಿ ಮಾತನಾಡಿದರು. 

Advertisement

ರೈತರು ಇತ್ತೀಚಿನ ದಿನಗಳಲ್ಲಿ ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದರೂ ಸಹ ಇಂತಹ ಸಮಯದಲ್ಲಿ ಹೈನುಗಾರಿಕೆ ಅವಲಂಭಿ ಸಿದವರಿಗೆ ನಿರಂತರ ಆದಾಯ ಕೊಡುವಂತೆ ಮಾಡಿದೆ. ಹೈನುಗಾರಿಕೆ ಉಪಕಸುಬಾಗಿ ಅವಲಂಭಿಸಿಕೊಂಡು ಆರ್ಥಿಕವಾಗಿ ಸದೃಢವಾಗಬೇಕು. ರೈತರಿಗೆ ಕೃಷಿಯೊಟ್ಟಿಗೆ ದಿನನಿತ್ಯದ ಖರ್ಚು ವೆಚ್ಚ ಸರಿದೂಗಿಸಲು ಹೈನು ಗಾರಿಕೆ ತುಂಬ ಸಹಕಾರಿ ಎಂದರು.

ನೂತನ ಕಟ್ಟಡದ ಶಿಲಾನ್ಯಾಸ ವನ್ನು ತಾಲೂಕು ಜೆಡಿಎಸ್‌ ಅಧ್ಯಕ್ಷ ಕೆ. ಮಹದೇವ್‌ ಅನಾವರಣ ಗೊಳಿಸಿ ಮಾತನಾಡಿ, ಹೈನುಗಾರಿಕೆ ಅವಲಂಭಿಸಿದವರು ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವುದರಿಂದ ಬಂದ ಲಾಭಾಂಶವನ್ನು ಪಡೆಯಬಹು ದಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟಕ್ಕೆ ಉತ್ತಮ ದರ ಸಿಗುತ್ತದೆ. 

ದೇಶಾವಾರು ಉತ್ತಮ ಗುಣಮಟ್ಟದ ಹಾಲಿಗೆ ನಮ್ಮ ರಾಜ್ಯದಲ್ಲಿಯೇ ಅತಿ ಹೆಚ್ಚು ಬೆಲೆ ಸಿಗುತ್ತಿರುವುದು ಹಾಗೂ ಹೈನುಗಾರಿಕೆಯಲ್ಲಿ ಮೊದಲಿಗರಾಗಿ ಮೈಸೂರು ಜಿಲ್ಲೆಯು ಹೈನುಗಾರಿಕೆಗೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿರುವುದು ಸಂತೋಷದ ವಿಷಯವಾಗಿದೆ ಎಂದರು.

ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ್‌ ಮಾತನಾಡಿ, ಸಂಘವು ಅತಿ ಹೆಚ್ಚು ಸಾಲದ ಹೊರೆ ಇರುವಾಗ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಭಯವಿತ್ತು. ಆದರೆ ಈಗ ಸಂಘವು ಅತಿ ಹೆಚ್ಚು ಲಾಭದಾಯಕವಾಗಿದೆ. ಅದನ್ನು ರೈತರಿಗೆ ನೇರವಾಗಿ ವಿನಿಯೋಗಿಸುತ್ತಿದ್ದೇವೆ ರೈತರು ಪೂರೈಸಿದ ಉತ್ತಮ ಗುಣಮಟ್ಟದ ಹಾಲಿಗೆ ಹೊರ ರಾಜ್ಯಗಳಿಂದಲೂ ತುಂಬ ಬೇಡಿಕೆ ಇದೆ.

Advertisement

ಗುಣಮಟ್ಟದಲ್ಲಿ ರೈತರು ಯಾವುದೇ ರಾಜಿ ಮಾಡಿ ಕೊಳ್ಳಬಾರದು. ಸಹಕಾರ ಸಂಘಗಳ ಮುಖಾಂತರ ಉಚಿತ ಮೆಕ್ಕೆಜೋಳ ವಿತರಿಸಿದ್ದೇವೆ. ಹೈನುಗಾರಿಕೆಗೆ ಸಬ್ಸಿಡಿ ದರದಲ್ಲಿ ದೊರೆಯುವ ಸರ್ಕಾರದ ಎಲ್ಲಾ ಸವಲತ್ತುಗಳನ್ನು ರೈತರು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ನೂತನ ಸಭಾಂಗಣದ ಉದ್ಘಾಟನೆಯಲ್ಲಿ ಪಾಲ್ಗೊಂಡ ಎಲ್ಲಾ ಗಣ್ಯರಿಗೂ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶಿವಲಿಂಗೇಗೌಡ ಮತ್ತು ನಿರ್ದೇಶಕ ಪಿ.ಎಂ.ಪ್ರಸನ್ನ, ಗ್ರಾಮದ ಯ.ಈಶ್ವರಯ್ಯ, ಜಿಪಂ ಸದಸ್ಯ ಕೆ.ಎಸ್‌ ಮಂಜುನಾಥ್‌, ತಾ.ಪಂ ಸದಸ್ಯೆ ಶೋಭಾಚಂದ್ರು, ಗ್ರಾಪಂ ಅಧ್ಯಕ್ಷ ಈರೇಗೌಡ, ಸದಸ್ಯರಾದ ನಾರಾಯಣ್‌ಶೆಟ್ಟಿ, ಎಪಿಎಂಸಿ ನಿರ್ದೇಶಕ ಹರೀಶ್‌, ಪಿಎಸಿಸಿಎಸ್‌ಎನ್‌ ಅಧ್ಯಕ್ಷ ಲೋಕೇಶ್‌, ಉಪಾಧ್ಯಕ್ಷ ಯೋಗೇಶ್‌, ಈಶ್ವರಯ್ಯ,

ರಾಜೇಗೌಡ, ವಿಸ್ತರಣಾಧಿಕಾರಿಗಳಾದ ಸಂತೋಷ್‌, ನಿಶ್ಚಿತ್‌, ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್‌, ಉಪಾಧ್ಯಕ್ಷೆ ಶಾಂತಮ್ಮ, ಸಿಬ್ಬಂದಿ ಬಿ.ಆರ್‌.ಪ್ರಕಾಶ್‌, ಜಲೇಂದ್ರ ತಮ್ಮೇಗೌಡ, ಮುಖಂಡರಾದ ಅಶ್ವತ್‌, ಸಿದ್ದೇಗೌಡ, ರಾಮೇಗೌಡ, ಗಿರಿಶ್‌, ರಾಮಶೆಟ್ಟಿ, ಸೋಮೇಗೌಡ, ರಾಜಗೋಪಾಲ್‌, ತೋಪೇಗೌಡ, ನಾಗೇಂದ್ರ ಸೇರಿದಂತೆ ಕಾರ್ಯಕಾರಿ ಮಂಡಳಿಯ ಸರ್ವ ನಿರ್ದೇಶಕರುಗಳು ಹಾಗೂ ಸದಸ್ಯರು ಗಳು ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next