Advertisement

ಹೈನುಗಾರರೇ ತಂತ್ರಜ್ಞಾನದ ತರಬೇತಿ ಪಡೆದುಕೊಳ್ಳಿ

04:32 PM Jun 25, 2022 | Team Udayavani |

ಕೋಲಾರ: ಹೈನುಗಾರಿಕೆಯಲ್ಲಿ ಇಂದಿನ ಆಧುನಿಕ ತಂತ್ರಜ್ಞಾನ ಬೆಳೆವಣಿಗೆಗೆ ಪೂರಕವಾದ ತರಬೇತಿ ಪಡೆದು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಗುಣಮಟ್ಟದ ಹಾಲು ಶೇಖರಣೆಗೆ ಗಮನಹರಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌. ಅನಿಲ್‌ ಕುಮಾರ್‌ ಹೇಳಿದರು.

Advertisement

ನಗರ ಹೊರವಲಯದ ಟಮಕ ಕೈಗಾರಿಕಾ ಪ್ರಾಂಗಣದಲ್ಲಿನ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಶಿಬಿರ ಕಚೇರಿಯಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿ, ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಕೋಚಿಮುಲ್‌ ಒಕ್ಕೂಟ ಹಾಗೂ ಸಹಕಾರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕೋಲಾರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗಾಗಿ ನಡೆದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಕೋಲಾರ ತಾಲೂಕು 272 ಹಾಲು ಉತ್ಪಾದಕರ ಸಂಘ ಹೊಂದಿದೆ. ಇದರಲ್ಲಿ 27 ಮಹಿಳಾ ಸಂಘಗಳಿದ್ದು, ಕೋಲಾರವು ಹೆಚ್ಚು ಹಾಲು ಸಂಘ ಹೊಂದಿರುವ ತಾಲೂಕಾಗಿದೆ. ಜಿಲ್ಲೆಯ ಹಾಲು ಒಕ್ಕೂಟದ ಪಿತಾಮಹಾ ಎಂ.ವಿ.ಕೃಷ್ಣಪ್ಪ ಅವರಂತೆ ತಾಲೂಕಿನಲ್ಲಿ ಹೆಚ್ಚು ಹಾಲು ಉತ್ಪಾದನ ಸಂಘಗಳ ರಚನೆಗೆ ಕಾರಣರಾದ ಅಣ್ಣಿಹಳ್ಳಿ ಕೃಷ್ಣಪ್ಪ ಅವರ ಸ್ಮರಣೆ ಅಗತ್ಯ ಎಂದರು.

ಕೊರೊನಾದಲ್ಲಿ ಸಂಘಗಳ ಸಹಕಾರ: ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ಡಿ.ವಿ.ಹರೀಶ್‌ ಮಾತನಾಡಿ, ಕೋವಿಡ್‌ ನಿಂದ ಒಕ್ಕೂಟವು ಸಂಕಷ್ಟಕ್ಕೆ ಸಿಲುಕಿದ ವೇಳೆ ಹಾಲು ಉತ್ಪಾದಕರ ಸಂಘಗಳ ಸಹಕಾರವು ಅಭಿನಂದನಾರ್ಹವಾಗಿದೆ. ಕಳೆದ 3 ವರ್ಷಗಳ ಅಡಳಿತದಲ್ಲಿ ಹಾಲು ಉತ್ಪಾದಕರ ಮಕ್ಕಳ ಉನ್ನತ ಶೈಕ್ಷಣಿಕ ಅಭಿವೃದ್ಧಿಗೆ ಪ್ರೋತ್ಸಾಹ, ಸಿಬ್ಬಂದಿಗಳ ನಿವೃತ್ತಿ ಸಂದರ್ಭದಲ್ಲಿ 2 ಲಕ್ಷ ರೂ. ಗೌರವಧನ, 20 ಬಿ.ಎಂ.ಸಿ. ಕೇಂದ್ರಗಳ ಮಂಜೂರಾತಿ, ಹಾಲಿನ ಗುಣಮಟ್ಟ, ಉತ್ಪಾದನೆಯಲ್ಲಿ ಪ್ರಗತಿಯ ಸಾಧನೆ ಮಾಡಿದೆ ಎಂದರು.

ಹಾಲು ಉತ್ಪಾದಕರ ಜೀವಾಳ: ಡಿಸಿಸಿ ಬ್ಯಾಂಕಿನ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಹೊಸ ಮಾಹಿತಿಗಳ ಅರಿವು ಮುಖ್ಯ, ಕೋಚಿಮುಲ್‌ ಪ್ರಗತಿಗೆ ಎಂ.ವಿ.ಕೆ ಹೆಜ್ಜೆಯ ಗುರುತುಗಳ ಮಾರ್ಗದರ್ಶನವೆ. ಇಂದು ಹಾಲು ಉತ್ಪಾದಕರ ಜೀವಾಳವಾಗಿದೆ ಎಂದು ಹೇಳಿದರು. ನಿರ್ದೇಶಕ ಚಂಜಿಮಲೆ ರಮೇಶ್‌ ಮಾತನಾಡಿ, ಹೈನುಗಾರಿಕೆ ರೈತರ ಉಪಕಸುಬು ಅಗಿರುವುದರಿಂದ ಅಪತ್ಕಾಲದಲ್ಲಿ ನೆರವಾಗುತ್ತಿದ್ದು, ರೈತರ ಆತ್ಮಹತ್ಯೆ ನಮ್ಮ ಜಿಲ್ಲೆಗಳಲ್ಲಿ ಇಲ್ಲವಾಗಿದೆ. ಸ್ವಾಭಿಮಾನಿ ಬದುಕಿಗೆ ಕಾರಣವಾಗಿದೆ ಎಂದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಮೂರಂಡಹಳ್ಳಿ ಗೋಪಾಲಪ್ಪ ಮಾತನಾಡಿ, ಹಾಲು ಸಂಘಗಳ ಆದಾಯ ಆಧರಿಸಿ ಸಿಬ್ಬಂದಿಗೆ ವೇತನ, ನೇಮಕಾತಿ ಮಾಡಲಾಗುತ್ತಿದೆ. ಕಾರ್ಯದರ್ಶಿಗಳ ಶ್ರಮದ ಅಧಾರದ ಮೇಲೆ ಒಕ್ಕೂಟದ ಪ್ರಗತಿ ಅವಲಂಭಿಸಿದೆ. ಶಿಕ್ಷಣ ನಿಧಿ ಪಾವತಿಸುವ ಮೂಲಕ ಒಕ್ಕೂಟಕ್ಕೆ ಸಹಕಾರಿಸಬೇಕು ಎಂದು ಮನವಿ ಮಾಡಿದರು. ಒಕ್ಕೂಟದ ಉಪವ್ಯವಸ್ಥಾಪಕ ಶ್ರೀಧರಮೂರ್ತಿ ನಿವೃತ್ತರಾದ ಹಿನ್ನಲೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಸಹಕಾರ ಇಲಾಖೆ ನಿವೃತ್ತ ಅಧಿ ಕಾರಿ ಸುಂದರಪ್ಪ, ವಕೀಲ ಧನರಾಜ್‌ ಮಾತನಾಡಿದರು.

Advertisement

ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಕಲ್ವಮಂಜಲಿ ಟಿ.ಕೆ.ಬೈರೇಗೌಡ, ಮೀನುಗಾರರ ಒಕ್ಕೂಟದ ಜಿಲ್ಲಾಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ, ಒಕ್ಕೂಟದ ನಿರ್ದೇಶಕರಾದ ಪೆಮ್ಮಶೆಟ್ಟಿಹಳ್ಳಿ ಎಸ್‌.ಸುರೇಶ್‌, ಚೆಂಜಿಮಲೆ ಬಿ.ರಮೇಶ್‌, ಅರುಣ, ವೃತ್ತಿಪರ ನಿರ್ದೇಶಕ ಕೆ.ಎಂ.ವೆಂಕಟೇಶಪ್ಪ, ಸಲಹೆಗಾರರಾದ ಕ್ಯಾಲನೂರು ಷೇಕ್‌ ಮಹಮದ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್‌, ಸಹಕಾರ ಶಿಕ್ಷಣಾ ಧಿಕಾರಿ ಕೆ.ಮಲ್ಲಯ್ಯ, ವಿಸ್ತರಣಾಧಿಕಾರಿ ಶ್ರೀನಿವಾಸ್‌, ಒಕ್ಕೂಟದ ಮಹೇಶ್‌, ಯೂನಿಯನ್‌ನ ರವಿ, ಲಕ್ಷ್ಮೀ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next