Advertisement

ಇಂದಿನ ಗ್ರಹಬಲ: ದೈವಾನುಗ್ರಹ ಉತ್ತಮವಿದ್ದರೂ ಅನಾವಶ್ಯಕ ಮಾನಸಿಕ ಭ್ರಮೆಗಳು ಕಾಡಲಿವೆ.

07:48 AM Mar 23, 2021 | Team Udayavani |

23-02-2021

Advertisement

ಮೇಷ: ಸಾಮಾಜಿಕವಾಗಿ ಗುರು ಧಾರ್ಮಿಕ ವರಿಷ್ಠರ ಭೇಟಿಯ ಅವಕಾಶ ಕಂಡುಬರುವುದು. ಆರ್ಥಿಕ ಸಮಸ್ಯೆಗಳ ಪರಿಹಾರಾರ್ಥ ಯಶಸ್ವಿ ಕಾರ್ಯತಂತ್ರಗಳ ರೂಪಣೆ ಸಫ‌ಲತೆ ತಂದುಕೊಡಲಿದೆ. ಶುಭವಿದೆ.

ವೃಷಭ: ವಾಹನ, ಯಂತ್ರೋಪಕರಣಗಳಿಂದ ಖರ್ಚು-ವೆಚ್ಚಗಳು ಅಧಿಕ ರೂಪದಲ್ಲಿ ತೋರಿ ಬಂದಾವು. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಅನುಷ್ಠಾನಗೊಳ್ಳಲಿರುವ ಸೂಚನೆಗಳು ಕಂಡುಬರುತ್ತದೆ. ಕಿರು ಸಂಚಾರ ಕೂಡಿ ಬಂದೀತು.

ಮಿಥುನ: ಹೂಡಿಕೆಗಳಲ್ಲಿ ತುಸು ಚೇತರಿಕೆ ತಂದರೂ ಕಾದು ನೋಡವ ನೀತಿ ಉತ್ತಮ. ಆರ್ಥಿಕ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆಯೊಂದರ ಅನುಭವವಾಗಲಿದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ಉಪಟಳ ಶುರುವಾದೀತು.

ಕರ್ಕ: ಕೌಟುಂಬಿಕ ವಾದ-ವಿವಾದ, ಕಲಹಗಳು ಹಂತಹಂತವಾಗಿ ಉಪಶಮನವಾಗಲಿದೆ. ಹಿತಶತ್ರುಗಳಿಂದ ವಿರೋಧಿಗಳಿಗೆ ಆಮಿಷ ಪ್ರಲೋಭನೆಯಿಂದ ರಾಜಕೀಯದವರಿಗೆ ಆತಂಕ ತಂದೀತು. ಜಾಗ್ರತೆ ಮಾಡಿ ಮುನ್ನಡೆಯಿರಿ.

Advertisement

ಸಿಂಹ: ಮಕ್ಕಳ ಆರೋಗ್ಯ, ವಿದ್ಯಾಭ್ಯಾಸಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ಶುಭಕಾರ್ಯಗಳ ಚಿಂತನೆ ಕಾರ್ಯರೂಪಕ್ಕೆ ಬರಲಿದೆ. ಧನಾರ್ಜನೆಯಲ್ಲಿ ಪ್ರಗತಿ, ಭೂ ನಿವೇಶನ, ಗೃಹ ನಿರ್ಮಾಣ ಕಾರ್ಯದ ಓಡಾಟ ತಂದೀತು.

ಕನ್ಯಾ: ಧಾರ್ಮಿಕ ಗುರುಗಳ ಭೇಟಿಯ ಅಪೂರ್ವ ಅವಕಾಶಗಳಿಂದ ಮಾನಸಿಕ ನೆಮ್ಮದಿ ತಂದೀತು. ಧೈವಾನುಗ್ರಹ ಉತ್ತಮವಿದ್ದರೂ ಅನಾವಶ್ಯಕ ಮಾನಸಿಕ ಭ್ರಮೆಗಳು ಕಾಡಲಿವೆ. ದುಂದುವೆಚ್ಚಾದಿಗಳ ಮೇಲೆ ಹತೋಟಿ ಸಾಧಿಸಿರಿ.

ತುಲಾ: ವಿದ್ಯಾರ್ಥಿಗಳಿಗೆ ಸಹವಾಸ ದೋಷದಿಂದ ಅನಗತ್ಯ ಅಪವಾದವಿದೆ. ದಿನಾಂತ್ಯ ಅತಿಥಿಗಳು ಬಂದಾರು. ಕಾರ್ಯಕ್ಷೇತ್ರದಲ್ಲಿ ಕಾರ್ಯಾಂತರದಿಂದ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿಯು ತೋರಿ ಬರುತ್ತದೆ.

ವೃಶ್ಚಿಕ: ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಅಧಿಕಾರಿ ವರ್ಗದವರಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹ ಲಭಿಸಲಿದೆ. ಒಮ್ಮೊಮ್ಮೆ ಕೆಳವರ್ಗದ ಸಹೋದ್ಯೋಗಿಗಳಿಂದ ಕಿರುಕುಳ ಕಂಡುಬರುತ್ತದೆ.

ಧನು: ಇಷ್ಟ ವಿರೋಧಿ ವರ್ತನೆಯಿಂದ ಮಾನಸಿಕವಾಗಿ ಉದ್ವೇಗ ತಂದೀತು. ಸಮಾಧಾನವಿರಲಿ. ಧನಾರ್ಜನೆಯಲ್ಲಿ ಪ್ರಗತಿ ಇರುತ್ತದೆ. ಸಮಾಧಾನವಿರಲಿ. ಸಂತೃಪ್ತ ಜೀವನ.

ಮಕರ: ವಿವಿಧ ಮೂಲಗಳಿಂದ ಧನಾರ್ಜನೆ ಸಾಧ್ಯತೆ ಇರುತ್ತದೆ. ಶುಭಮಂಗಲ ಕಾರ್ಯಗಳಿಗೆ ಪ್ರಯಾಣ ಅನಿವಾರ್ಯವಾದೀತು. ವೃತ್ತಿರಂಗದಲ್ಲಿ ಚಿಂತನೆ ಹಾಗೂ ಕಾರ್ಯಗಳಲ್ಲಿ ವಿರೋಧಾಭಾಸ ಕಂಡು ಬಂದೀತು.

ಕುಂಭ: ಆರ್ಥಿಕ ವಿಚಾರದಲ್ಲಿ ಸಂಬಂಧಪಟ್ಟ ಕಾರ್ಯದಲ್ಲಿ ಪ್ರಗತಿ ಇರುತ್ತದೆ. ವ್ಯಾಪಾರಿ ವರ್ಗದವರಿಗೆ ಹಳೆಯ ವಸ್ತು, ಸರಕು ವಿಕ್ರಯದ ಅವಕಾಶದಿಂದ ಹೆಚ್ಚಿನ ಲಾಭದಾಯಕ ಆದಾಯವಿರುತ್ತದೆ. ಆರೋಗ್ಯ ಜಾಗ್ರತೆ.

ಮೀನ: ಆರೋಗ್ಯ ವಿಚಾರದಲ್ಲಿ ಕಾಳಜಿ ಅಗತ್ಯವಿರುತ್ತದೆ. ಉದ್ವೇಗವು ಒಳ್ಳೆಯದಲ್ಲ. ಸಹನೆ, ತಾಳ್ಮೆ ಈಗ ಅಗತ್ಯವಿದೆ. ಜನರ ಮಾತಿಗೆ ಹೆಚ್ಚಿನ ಬೆಲೆ ಕೊಡದಿರಿ. ಆಡುವವರು ಆಡಿಕೊಳ್ಳಲಿ ಬಿಡಿ. ನಿಮ್ಮಿಚ್ಛೆಯಂತೆ ನಡೆಯಿರಿ.

ಎನ್.ಎಸ್.ಭಟ್

Advertisement

Udayavani is now on Telegram. Click here to join our channel and stay updated with the latest news.

Next