Advertisement

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

07:21 AM May 08, 2024 | Team Udayavani |

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಪರಿಪೂರ್ಣತೆಗೆ ಪೈಪೋಟಿ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಸಮಯದೊಂದಿಗೆ ಸೆಣಸಾಟ. ಮಳೆಯಾಗದ ಕಾರಣ ಕೃಷಿಕರಿಗೆ ಚಿಂತೆ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಕೈಸೇರಿ ನೆಮ್ಮದಿ.

Advertisement

ವೃಷಭ: ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ.ಸರಕಾರಿ ನೌಕರರಿಗೆ ಕೆಲಸದ ಒತ್ತಡ. ವಿದೇಶ ಗಳಲ್ಲಿ ನೌಕರಿಯಲ್ಲಿರುವವರಿಗೆ ತಾಯ್ನಾಡಿಗೆ ಬರುವ ಯೋಗ. ಮುದ್ರಣ ಕ್ಷೇತ್ರದವರಿಗೆ ಸಮಯದೊಂದಿಗೆ ಮೇಲಾಟ.

ಮಿಥುನ: ಸರಕಾರಿ ಉದ್ಯೋಗಸ್ಥರಿಗೆ ಹೆಚ್ಚುವರಿ ಜವಾಬ್ದಾರಿಗಳು. ಪತ್ರಕರ್ತರಿಗೆ ರಾಜಕಾರಣಿಗಳ ಒತ್ತಡ. ಮನೆಯಲ್ಲಿ ದೇವತಾರ್ಚನೆ ಹಾಗೂ ಮಂಗಲ ಕಾರ್ಯದ ಸಿದ್ಧತೆ. ಮಕ್ಕಳಿಗೆ ವ್ಯಾಸಂಗದಲ್ಲಿ ಆಸಕ್ತಿ.

ಕರ್ಕಾಟಕ: ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ತಾಂತ್ರಿಕ ವಿಭಾಗಗಳಲ್ಲಿ ದುಡಿಯುವವರಿಗೆ ಕೆಲಸದ ಒತ್ತಡ. ಮೇಲಧಿಕಾರಿ ಗಳಿಂದ ಉತ್ತೇಜನ. ಸ್ವಂತ ವ್ಯವಹಾರಸ್ಥರಿಗೆ ಸಮಯ ದೊಂದಿಗೆ ಸ್ಪರ್ಧೆ.

ಸಿಂಹ: ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆ. ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ. ಸಮಾಜದಲ್ಲಿ ಸ್ಥಾನಮಾನ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸಂಸಾರ ಸುಖ ಉತ್ತಮ. ಅವಿವಾಹಿತರಿಗೆ ವಿವಾಹ ಯೋಗ.

Advertisement

ಕನ್ಯಾ: ಆಪ್ತರಿಂದ ಸಕಾಲಿಕ ಸಹಾಯ ಪ್ರಾಪ್ತಿ. ನಿಯೋಜಿತ ಕಾರ್ಯ ಮುಗಿಸಲು ಸಹೋದ್ಯೋಗಿಯ ಸಹಾಯ. ಅಪರೂಪದ ಗೆಳೆಯರ ಆಗಮನ. ವಿದೇಶದಿಂದ ಶುಭ ವಾರ್ತೆ.ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಗೋಚರ.

ತುಲಾ: ಉದ್ಯೋಗಸ್ಥರಿಂದ ಜವಾಬ್ದಾರಿಗಳ ಸಮರ್ಥ ನಿರ್ವಹಣೆ. ಸ್ವಂತ ವ್ಯವಹಾರಸ್ಥರಿಗೆ ಅನಿರೀಕ್ಷಿತ ಯಶಸ್ಸು. ಮಹಾಪುರುಷರ ದರ್ಶನ ಯೋಗ. ಮಕ್ಕಳ ಭವಿಷ್ಯದ ಚಿಂತನೆ. ಪರಿಸರ ಅಭಿವೃದ್ಧಿಯಲ್ಲಿ ಆಸಕ್ತಿ.

ವೃಶ್ಚಿಕ: ಮನೆಯಲ್ಲಿ ಹಿತಕರ ವಾತಾವರಣ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ಪೀಠೊಪಕರಣ ನಿರ್ಮಾಪಕರಿಗೆ ಉತ್ತಮ ಬೇಡಿಕೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ದೇವಾಲಯಕ್ಕೆ ಭೇಟಿ. ಹಿರಿಯರ ಆರೋಗ್ಯ ಉತ್ತಮ.

ಧನು: ಅನಿರೀಕ್ಷಿತ ಧನಪ್ರಾಪ್ತಿ. ವ್ಯಾಪಾರ ವಿಸ್ತರಣೆಗೆ ಚಿಂತನೆ. ಕೈ ಕಸಬುದಾರರಿಗೆ ಕೈತುಂಬಾ ಕೆಲಸ. ಬೌದ್ಧಿಕ ಕಾರ್ಯಗಳಲ್ಲಿ ತೊಡಗಿರುವವರ ಮೇಲೆ ವಿವಿಧ ಕ್ಷೇತ್ರಗಳವರಿಂದ ಒತ್ತಡ. ಮನೆಯಲ್ಲಿ ನೆಮ್ಮದಿಯ ವಾತಾವರಣ.

ಮಕರ: ಸಹೋದ್ಯೋಗಿಗಳಿಂದ ಅಪೇಕ್ಷಿತ ಸಹಕಾರ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ರೂಪದರ್ಶಿಗಳ ವ್ಯವಹಾರದಲ್ಲಿ ಹಿನ್ನಡೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಫ್ಯಾಶನ್‌ ಡಿಸೈನಿಂಗ್‌ ಪರಿಣತರಿಗೆ ಉದ್ಯೋಗಾವಕಾಶ.

ಕುಂಭ: ಸೇವಾ ಕಾರ್ಯಗಳ ವಿಸ್ತರಣೆಗೆ ಸಮಾನ ಮನಸ್ಕರಿಂದ ಸಹಕಾರ. ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು. ಸರಕಾರಿ ನೌಕರರಿಗೆ ವರ್ಗಾವಣೆಯ ಚಿಂತೆ. ಹಿರಿಯ ಅಧಿಕಾರಿಗಳಿಗೆ ರಾಜಕಾರಣಿಗಳ ಕಾಟ.ಮುದ್ರಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ ಮಧ್ಯಮ.

ಮೀನ: ನಿತ್ಯದ ವ್ಯವಹಾರಗಳು ಸುಗಮ. ಉದ್ಯೋಗಸ್ಥರಿಗೆ ನಿರಾತಂಕವಾದ ವಾತಾವರಣ. ಸರಕಾರಿ ಅಧಿಕಾರಿಗಳಿಂದ ಮತ್ತು ನೌಕರರಿಂದ ಉತ್ತಮ ಸ್ಪಂದನ. ಕೆಲವು ವರ್ಗಗಳ ವ್ಯವಹಾರಸ್ಥರಿಗೆ ಅನಿರೀಕ್ಷಿತ ಪ್ರಗತಿ. ವ್ಯವಹಾರ ನಿರ್ವಹಣೆಗೆ ಸಂಗಾತಿಯ ಸಹಕಾರ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next