Advertisement

ದಿನಭವಿಷ್ಯ: ಈ ರಾಶಿಯ ಯುವಕ-ಯುವತಿಯರು ಪರಸ್ಪರ ಪ್ರೇಮದ ಸುಳಿಯಲ್ಲಿ ಸಿಲುಕಿಯಾರು !

07:26 AM Jun 09, 2021 | Team Udayavani |

ಮೇಷ: ಕೌಟುಂಬಿಕವಾಗಿ ಜೀವನದಲ್ಲಿ ಏರಿಳಿತಗಳ ಅನುಭವ ತಂದುಕೊಡಲಿದೆ. ಹಾಗೆ ಹೆಚ್ಚಿನ ಉಸ್ತುವಾರಿ ಅಗತ್ಯವಿದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಷಯದತ್ತ ಮನಸ್ಸು ಹೆಚ್ಚು ವಾಲುವುದು. ಆರ್ಥಿಕವಾಗಿ ಅಧಿಕ ಸಂಗ್ರಹ .

Advertisement

ವೃಷಭ: ಸ್ತ್ರೀಯರಿಗೆ ಹತ್ತು ಹಲವು ಖರ್ಚುಗಳು ಎದುರಾಗಲಿದೆ. ಬಂಧುಮಿತ್ರರಿಂದ ಪ್ರಶಂಸೆಗೆ ಒಳಗಾಗುವಿರಿ. ಪ್ರಯತ್ನಿಸುವ ಅನೇಕ ಕೆಲಸ ಕಾರ್ಯಗಳಲ್ಲಿ ಸಾಫ‌ಲ್ಯ ಕಾಣುವಿರಿ. ವಿದ್ಯಾರ್ಥಿಗಳು ಅಭ್ಯಾಸ ಜಾಸ್ತಿ ಮಾಡಬೇಕು.

ಮಿಥುನ: ಕಣ್ಣೇದುರು ನಡೆಯುವ ಮೋಸ, ವಂಚನೆ ಗಳನ್ನು ಎದುರಿಸುವ ಛಾತಿಯು ಇಲ್ಲವಾದೀತು. ಸಾಮಾಜಿಕವಾಗಿ ಜನ ಮನ್ನಣೆಗೆ ಪಾತ್ರರಾಗುವಿರಿ. ವಿದ್ಯಾರ್ಥಿಗಳ ಕೆಟ್ಟ ಮಿತ್ರರ ಸಹವಾಸದಿಂದ ಅಡ್ಡದಾರಿ ಹಿಡಿಯದ ಹಾಗೆ ನೋಡಿಕೊಳ್ಳಿರಿ.

ಕರ್ಕ: ಸೋಲನ್ನು ಒಪ್ಪಿ ಗುರಿಯನ್ನು ಸಾಧಿಸಿದಲ್ಲಿ ಯಶಸ್ಸು ನಿಮ್ಮದಾಗಲಿದೆ. ಗ್ರಹಗಳ ಪ್ರತಿಕೂಲತೆಯಿಂದ ಆಲಸಿಯಾದವನ ಕಾರ್ಯಕ್ಷಮತೆ ಕ್ಷೀಣಿಸುತ್ತಲೆ ಹೋಗುತ್ತದೆ. ಅವಿವಾಹಿತರಿಗೆ ಪ್ರಸ್ತಾವಗಳು ಕಂಕಣಬಲಕ್ಕೆ ನಾಂದಿಯಾಗಲಿದೆ.

ಸಿಂಹ: ಐಶಾರಾಮದಿಂದ ದೈಹಿಕ ಪೀಡೆಗಳಿಗೆ ಒಳಗಾಗದಂತೆ ಕಾಳಜಿ ಇರಲಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಬಗ್ಗೆ ಶಿಸ್ತು ಪಾಲಿಸುವಂತೆ ಹೇಳುವ ಪ್ರಸಂಗ ಒದಗಿ ಬರುವುದು. ದುಂದುವೆಚ್ಚ ಮಾಡುವಲ್ಲಿ ಕಡಿವಾಣ ಹಾಕಿರಿ.

Advertisement

ಕನ್ಯಾ: ಉದ್ಯೋಗಿಗಳು ಕೆಲಸದ ಮಹತ್ವವನ್ನು ತಿಳಿಯುವುದು ಲೇಸು. ಯುವಕ-ಯುವತಿಯರು ಪರಸ್ಪರ ಪ್ರೇಮದ ಸುಳಿಯಲ್ಲಿ ಸಿಲುಕಿಯಾರು. ಒಂಟಿಯಾದ ಯೋಗ್ಯ ವಯಸ್ಕರಿಗೆ ಮದುವೆಯ ಆಸರೆ ಬೇಕೆನಿಸಲಿದೆ.

ತುಲಾ: ಆರ್ಥಿಕ ಸಂಪನ್ಮೂಲಗಳು ಪ್ರಕಟಗೊಳಿಸಲು ಹೆಚ್ಚು ಹೆಚ್ಚು ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಹಾಗೇ ಸಮತೋಲನದ ಜೀವನವನ್ನು ನಡೆಸಿಕೊಂಡು ಹೋಗಲು ಆಧ್ಯಾತ್ಮಿಕತೆಯ ಚಿಂತನೆ ಅನಿವಾರ್ಯವಾದೀತು.

ವೃಶ್ಚಿಕ: ವಿದ್ಯಾರ್ಥಿಗಳ ಓದಿನ ಪ್ರಾಪ್ತಿ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಅವಿವೇಕಿಗಳ ಮಾತಿಗೆ ಕಿವಿಗೊಡದಿರುವುದೇ ಲೇಸು. ನಿಮ್ಮ ಮಕ್ಕಳಿಂದ ನಿಮ್ಮ ಗೌರವವು ಹೆಚ್ಚಾಗಲಿದೆ. ಮಂಗಲ ಕಾರ್ಯವಿದೆ.

ಧನು: ಅವಿವಾಹಿತರ ಅದೃಷ್ಟಬಲ ಖುಲಾಯಿಸಲಿದೆ. ಆತ್ಮೀಯರ ಹಾಗೂ ಕುಟುಂಬ ಸದಸ್ಯರ ಆಗಮನ ಮನೆಯಲ್ಲಿ ಸಂತಸ ತರಲಿದೆ. ವೃತ್ತಿರಂಗದಲ್ಲಿ ಹೆಚ್ಚು ಕೆಲಸ ಬಂದರೂ ಅವೆಲ್ಲವನ್ನೂ ನಿಭಾಯಿಸುವ ಸಾಧ್ಯತೆ ಇರುತ್ತದೆ.

ಮಕರ: ನೀರಸವಾದ ನಿರುದ್ಯೋಗಿಗಳ ದೈನಂದಿನ ಬದುಕಿನಲ್ಲಿ ಆಶಾಕಿರಣ ಮೂಡಿ ಬರುತ್ತದೆ. ಕಿಟಕಿ ಪ್ರೇಮಿಗಳಿಗೆ ಮದುವೆಯು ಅನಿವಾರ್ಯವಾಗಲಿದೆ. ವಿದ್ಯಾರ್ಥಿಗಳಾದವರು ದುಶ್ಚಟಗಳಿಗೆ ದಾಸರಾಗದಂತೆ ಜಾಗ್ರತೆ ಮಾಡಿರಿ.

ಕುಂಭ: ಮದುವೆಯ ಮುಂಚಿನ ಪರೀಕ್ಷಾರ್ಥ ಹೊಂದಾಣಿಕೆಗಳು ಅವಿವಾಹಿತರಿಗೆ ಕಂಕಣಬಲಕ್ಕೆ ಪೂರಕ ವಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆ ವ್ಯಾಪಾರಸ್ಥರಿಗೆ ಸಮಾಧಾನ ತಂದೀತು. ನಿಮ್ಮ ಮನೆಯವರ ಸಹಕಾರವಿದೆ.

ಮೀನ: ಊದ್ಭೂತವಾದ ಸಮಸ್ಯೆಗಳು ಹಂತಹಂತವಾಗಿ ತಮ್ಮಷ್ಟಕ್ಕೇ ತಾವೇ ಇಲ್ಲವಂತಾಗಿ ಬಿಡುತ್ತವೆ. ನಿರುದ್ಯೋಗಿಗಳು ಒದಗಿ ಬಂದ ಉದ್ಯೋಗ ಲಾಭವನ್ನು ಸ್ವೀಕರಿಸುವ ಮನೋಭಾವವನ್ನು ಹೊಂದಲೇ ಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next