Advertisement
ವೃಷಭ: ಉದ್ಯೋಗಸ್ಥರಿಗೆ ಖಾತೆ ಬದಲಾವಣೆ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ.ಎಲ್ಲರಿಗೂ ಉತ್ತಮ ಆರೋಗ್ಯ ಭಾಗ್ಯ.ಮಿಥುನ: ಹಳೆಯ ಯೋಜನೆಗಳನ್ನು ಕೈಬಿಡಲು ನಿರ್ಧಾರ. ತಾತ್ಕಾಲಿಕ ನೌಕರರ ಕೆಲಸ ಖಾಯಂ. ಅನವಶ್ಯ ವೈಮನಸ್ಯಕ್ಕೆ ಎಡೆಗೊಡ ಬೇಡಿ. ಯುವಜನರಿಗೆ ವೃತ್ತಿಪರ ಶಿಕ್ಷಣದ ವ್ಯವಸ್ಥೆ.ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ .
ಸ್ವೋದ್ಯೋಗ ಯೋಜನೆ ಉತ್ಪನ್ನಗಳಿಗೆ ಕೀರ್ತಿ. ಸಿಂಹ: ನಿರ್ವಹಿಸಲು ಕಷ್ಟವಾಗುವಷ್ಟು ವ್ಯವಹಾರಗಳು. ಉದ್ಯೋಗಸ್ಥರಿಗೆ ಆರ್ಥಿಕ ಲಾಭ ನೀಡದ ಪದೋನ್ನತಿ. ಉದ್ಯಮಕ್ಕೆ ನವಚೈತನ್ಯ ನೀಡುವ ಪ್ರಕ್ರಿಯೆ ಆರಂಭ. ಹೊಸ ಕ್ರಮಗಳಿಂದ ಉದ್ಯಮಕ್ಕೆ ಲಾಭ. ಎಲ್ಲರಿಗೂ ಉತ್ತಮ ಆರೋಗ್ಯ.
Related Articles
ತುಲಾ: ಶಾರೀರಿಕ ಬಾಧೆಯಿಂದ ಮುಕ್ತರಾಗಿ ದ್ದೀರಿ ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟದಿಂದ ಬಿಡುಗಡೆ ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ಉದ್ಯೋಗ ಅರಸುವವರಿಗೆ ಉಪಯುಕ್ತ ಮಾಹಿತಿ ಲಭ್ಯ.
Advertisement
ವೃಶ್ಚಿಕ: ಉದ್ಯೋಗಸ್ಥರ ಹಿತಕ್ಕೆ ಹಾನಿಯಾಗದು. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ರಾಜಕಾರಣಿಗಳ ನಡುವೆ ನಿಲ್ಲದ ಕೆಸರೆರಚಾಟ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಂಸಾರದಲ್ಲಿ ಸಾಮರಸ್ಯ, ಒಗ್ಗಟ್ಟಿಗೆ ಹಾನಿಯಿಲ್ಲ.
ಧನು: ಪಟ್ಟು ಬಿಡದ ಪ್ರಯತ್ನದಿಂದ ಕಾರ್ಯ ವೈಖರಿ ಸುಧಾರಣೆ. ಉದ್ಯಮದ ವೈವಿಧ್ಯೀಕರಣ ಯೋಜನೆ ಸಫಲ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ.
ಮಕರ: ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಭೀತಿ. ಉದ್ಯೋಗಸ್ಥರ ಕಾರ್ಯಸಾಮರ್ಥ್ಯಕ್ಕೆ ಹೊಸ ಸವಾಲುಗಳು.ಹಿತಶತ್ರುಗಳ ಮಸಲತ್ತಿಗೆ ಸೋಲು. ಯಂತ್ರೋಪಕರಣ ಉದ್ಯಮಿಗಳಿಗೆ ಅನುಕೂಲದ ವಾತಾವರಣ. ಕುಂಭ: ಸಪ್ತಾಹ ಮುಂದುವರಿಯುತ್ತಿದ್ದಂತೆ ಮುಂದೆ ಸಾಗುವ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಸಂಗೀತ, ನೃತ್ಯಾದಿ ಲಲಿತ ಕಲೆಗಳಲ್ಲಿ ಆಸಕ್ತರಿಗೆ ಹರ್ಷ. ಮೀನ: ಅಷ್ಟೊಂದು ಪೋ›ತ್ಸಾಹಕ ವಾತಾವರಣ ಕಾಣಿಸದಿದ್ದರೂ ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು ಯಶಸ್ವಿ. ಸಮಾಜ ಸುಧಾರಣಾ
ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಮಕ್ಕಳಲ್ಲಿ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ