Advertisement
ವೃಷಭ: ಹಲವು ಬಗೆಯ ಅಭಿವೃದ್ಧಿ ಯೋಜನೆ ಗಳಿಗೆ ಚಾಲನೆ. ಉಳಿತಾಯ ಯೋಜನೆಗಳ ಏಜೆಂಟರಿಗೆ ಒಳ್ಳೆಯ ದಿನ. ಕಲೋಪಾಸಕ್ತರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ. ಮಕ್ಕಳ ವ್ಯಾಸಂಗಾಸಕ್ತಿ ಬೆಳೆಸಲು ವಿಶೇಷ ಪ್ರಯತ್ನ ಅಗತ್ಯ.
Related Articles
Advertisement
ಕನ್ಯಾ: ಲೌಕಿಕ ದುಃಖ ಉಪಶಮನಕ್ಕೆ ಸಣ್ಣ ಯಾತ್ರೆ. ಮನೋರಂಜನೆ ಕೇಂದ್ರಿತ ಉದ್ಯಮ ಕ್ಷಿಪ್ರ ಪ್ರಗತಿ.ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ ಉತ್ತಮ ಅವಕಾಶ. ಮಕ್ಕಳ ವಿವಾಹ ಮಾತುಕತೆಯಲ್ಲಿ ಮುನ್ನಡೆ.ಗೃಹೋಪಕರಣಗಳ ಖರೀದಿಗೆ ಧನವ್ಯಯ. ತುಲಾ: ಗ್ರಹಗತಿ ಮತ್ತು ಹವಾಮಾನ ಎರಡರ ಪರಿಣಾಮವಾಗಿ ತಾತ್ಕಾಲಿಕ ಅನಾರೋಗ್ಯ.ಉದ್ಯೋಗಸ್ಥರಿಗೆ ಕೆಲಸಗಳ ಒತ್ತಡ. ತಾಯಂದಿರಿಗೆ ಮಕ್ಕಳ ಆರೋಗ್ಯದ ಚಿಂತೆ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅಧಿಕಲಾಭ. ವೃಶ್ಚಿಕ: ಸಂಸಾರ ಸುಖ ಉತ್ತಮ. ದೀರ್ಘಕಾಲದ ಹಿಂದೆ ನೀಡಿದ್ದ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ. ಕಷ್ಟದಲ್ಲಿರುವವರಿಗೆ ಧನ ಸಹಾಯ ಮಾಡುವ ಸಂದರ್ಭ. ಲೇವಾದೇವಿ ವ್ಯವಹಾರಸ್ಥರಿಗೆ ವಸೂಲಿಯ ಚಿಂತೆ. ಧನು: ಆಸ್ತಿ ಖರೀದಿಯ ಬಗ್ಗೆ ಮಾತುಕತೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಯ ಸಾಧ್ಯತೆ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯದಲ್ಲಿ ಭಾಗಿ. ದೀರ್ಘಕಾಲದ ಅನಾರೋಗ್ಯ ದಿಂದ ಮುಕ್ತಿ. ಮಕ್ಕಳಿಂದ ನೆಮ್ಮದಿ. ಮಕರ: ಉದ್ಯೋಗಸ್ಥರಿಂದ ಅನಾಯಾಸ ವಾಗಿ ಕಾರ್ಯನಿರ್ವಹಣೆ. ವಾಹನ ಚಾಲನೆಯಲ್ಲಿ ಎಚ್ಚರ. ಸೌಂದರ್ಯ ವರ್ಧಕಗಳ ಮಾರಾಟಗಾರರಿಗೆ ಸದವಕಾಶ. ಶಸ್ತ್ರ ವೈದ್ಯರಿಗೆ ವಿಶಿಷ್ಟ ಬಗೆಯ ಚಿಕಿತ್ಸೆಯಿಂದ ಕೀರ್ತಿ. ಕುಂಭ: ಏಳೂವರೆ ಶನಿಯ ಮಹಿಮೆಯಿಂದ ನೆಮ್ಮದಿ ಭಂಗ. ಬಂಧುಗಳೊಡನೆ ಮನಸ್ತಾಪ ವಾಗದಂತೆ ಎಚ್ಚರ. ಸಮಾಜಸೇವೆಗೆ ಇನ್ನಷ್ಟು ಅವಕಾಶಗಳ ಶೋಧನೆ. ಮಕ್ಕಳ ವಿಷಯದಲ್ಲಿ ಚಿಂತೆ. ಮುದ್ರಣ ಸಾಮಗ್ರಿ ವಿತರಕರಿಗೆ ದೂರದಿಂದ ಕರೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಮೀನ: ಒಂದಾದ ಮೇಲೊಂದರಂತೆ ಬರುವ ಹೊಣೆಗಾರಿಕೆಗಳು. ಸೋದರಿಯ ಸಂಸಾರ ಸಂಬಂಧಿ ಯೋಜನೆಗಳಿಗೆ ಸಹಾಯ.ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ಗುರುದರ್ಶನದಿಂದ ಆತ್ಮಸ್ಥೈರ್ಯ ವೃದ್ಧಿ. ಹಿರಿಯರ ಆಸ್ತಿ ವಿಚಾರದಲ್ಲಿ ಮನಸ್ತಾಪ.