Advertisement
ಮೇಷ: ಕೌಟುಂಬಿಕವಾಗಿ ಬಂಧುಮಿತ್ರರ ಓಲೈಕೆ ಹಿತವೆನಿಸೀತು. ಕೆಲವೊಂದು ವಿಚಾರಗಳ ಬಗ್ಗೆ ಗೊಂದಲಗಳು ಇರಬಹುದು. ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯವಾಗಿದೆ. ಹಣಕಾಸಿನ ಬಗ್ಗೆ ಜಾಗ್ರತೆ ಮಾಡಿರಿ.
Related Articles
Advertisement
ಸಿಂಹ: ನೀವು ವಂಚನೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಕ್ರಯ ವಿಕ್ರಯದಲ್ಲಿ ತುಸು ಲಾಭ ಕಂಡುಬಂದು ಸಮಾಧಾನವಿದೆ. ಗುರುಬಲದಿಂದ ಅದೃಷ್ಟದ ಆಸರೆ ನಿಮ್ಮ ಪಾಲಿಗಿದೆ. ಎಣಿಕೆಗಳೆಲ್ಲಾ ಈಡೇರಲಿದೆ.
ಕನ್ಯಾ: ಧೈರ್ಯ, ಪ್ರಯತ್ನಬಲದಿಂದ ಕಾರ್ಯ ಸಾಧಿಸಿದರೆ ಯಶಸ್ಸು ನಿಮ್ಮ ಪಾಲಿಗಿದೆ. ಹೊಸ ವ್ಯಾಪಾರ, ವ್ಯವಹಾರಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಮುನ್ನಡೆಯಿರಿ. ಆಗಾಗ ಭಿನ್ನಾಭಿಪ್ರಾಯದಿಂದ ಕಾರ್ಯ ಸಾಧಿಸುವುದು ಕಷ್ಟವಾದೀತು.
ತುಲಾ: ಅವಿವಾಹಿತರಿಗೆ ವೈವಾಹಿಕ ಜೋಡಣೆ ಸಂತಸ ತಂದೀತು. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ತಂದರೂ ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ನಿಗಾ ವಹಿಸಿರಿ. ಉದ್ಯೋಗ, ಕಾರ್ಯರಂಗದಲ್ಲಿ ಸಮರ್ಪಕವಾಗಿ ಮುನ್ನಡೆಯಿರಿ.
ವೃಶ್ಚಿಕ: ಸಾಂಸಾರಿಕವಾಗಿ ಆತ್ಮೀಯರು ಮಧ್ಯಸ್ಥಿಕೆ ವಹಿಸಬೇಕಾದ ಸಂಧಿಗ್ಧತೆ ಕಂಡು ಬಂದೀತು. ತ್ರಾಸದಾಯಕವಾಗಲಿರುವ ನ್ಯಾಯಾಲಯದ ಪ್ರಕರಣವು ಕಿರಿಕಿರಿಯೆನಿಸಲಿದೆ. ಆದಾಯ ವ್ಯತ್ಯಯದಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದೀತು.
ಧನು: ಹಿರಿಯರ ಅಭಿಪ್ರಾಯ ಭೇದದಿಂದ ಶುಭಮಂಗಲ ಕಾರ್ಯಗಳು ವಿಳಂಬವಾಗುತ್ತವೆ. ಗೃಹದಲ್ಲಿ ಅಧಿಕ ರೂಪದಲ್ಲಿ ಖರ್ಚುಗಳು ತೋರಿಬರಲಿವೆ. ಅವಕಾಶಗಳು ಕೂಡಿ ಬರಲು ನಿಧಾನವಾದರೂ ನಿಶ್ಚಿತ ರೂಪದಲ್ಲಿ ಅಭಿವೃದ್ಧಿ ಇದೆ.
ಮಕರ: ಆರ್ಥಿಕವಾಗಿ ಹಣಕಾಸಿನ ಸಂಪಾದನೆ ಉತ್ತಮವಿದ್ದರೂ ಬರಬೇಕಾದ ಬಾಕಿ ಹಣಕ್ಕಾಗಿ ಒದ್ದಾಟ ತಂದೀತು. ವಿಶ್ವಾಸದ ದುರುಪಯೋಗವಾಗದಂತೆ ಗಮನಹರಿಸ ಬೇಕಾಗುತ್ತದೆ. ಅವಿವಾಹಿತರ ಪ್ರಯತ್ನಬಲಕ್ಕೆ ಉತ್ತರ ಸಿಗಲಿದೆ.
ಕುಂಭ: ಅನಾವಶ್ಯಕವಾಗಿ ಸಮಯ ವ್ಯರ್ಥವಾಗದಂತೆ ಕಾಳಜಿ ವಹಿಸಿದರೆ ಉತ್ತಮ. ದಾಂಪತ್ಯ ಜೀವನವು ಸಮಾಧಾನಕರವಾಗಲಿದೆ. ನಿರೀಕ್ಷಿತ ರೀತಿಯಲ್ಲಿ ಕೆಲಸಕಾರ್ಯಗಳು ನಡೆದರೂ ಕಿರಿಕಿರಿಯು ತಪ್ಪಲಾರದು. ಜಾಗ್ರತೆ ಮಾಡುವುದು.
ಮೀನ: ಯಾವುದೇ ವಿಚಾರದಲ್ಲಿ ನಿರಾಸೆಗೊಳ್ಳದಿರಿ. ಹಣಕಾಸಿನ ಸ್ಥಿತಿಯು ಆಗಾಗ ಏರುಪೇರಾದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ವಿದ್ಯಾರ್ಥಿಗಳ ನಿರೀಕ್ಷೆಯ ಫಲವು ಸದ್ಯದ ಸ್ಥಿತಿಯಲ್ಲಿ ತೃಪ್ತಿದಾಯಕವಾಗಲಾರದು. ಮುನ್ನಡೆಯಿರಿ.
ಎನ್.ಎಸ್. ಭಟ್