Advertisement
ಮೇಷ: ವೃತ್ತಿರಂಗದಲ್ಲಿ ನಿಮ್ಮ ದುಡಿಮೆ ವೃತ್ತಿ ಬದುಕಿನ ಮೇಲೆ ಭಾರೀ ಪರಿಣಾಮ ಬೀರುವ ದಿನಗಳಾಗಲಿವೆ. ಸದುಪಯೋಗಿಸಿಕೊಳ್ಳಿರಿ. ಸಾಂಸಾರಿಕವಾಗಿ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವುದು ನಿಮ್ಮ ಮೇಲಿದೆ.
Related Articles
Advertisement
ಸಿಂಹ: ಆತ್ಮವಿಮರ್ಶೆಗೆ ಸಕಾಲವಿದು. ವೃತ್ತಿರಂಗದಲ್ಲಿ ಭವಿಷ್ಯ ನಿರ್ಧಾರವಾಗಲಿದೆ. ಆರ್ಥಿಕವಾಗಿ ವಿವಿಧ ರೀತಿಯ ಅನುಕೂಲಗಳು ತೋರಿಬರುತ್ತದೆ. ವೈವಾಹಿಕ ಮಾತುಕತೆಗಳು ನಿಮ್ಮ ಪರವಾಗಲಿದೆ.
ಕನ್ಯಾ: ಧಾರ್ಮಿಕವಾಗಿ, ಸಾಮಾಜಿಕವಾಗಿ ಹೊಸ ಆಯಾಮವಿದೆ. ಅರ್ಧಂಬರ್ಧಗೊಂಡ ಕೆಲಸ ಕಾರ್ಯಗಳು ಪುನಃ ಚಾಲನೆಗೆ ಬರಲು ಇದು ಸಕಾಲವಾಗಿದೆ. ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಪ್ರಗತಿಯಿಂದ ಸಂತಸವಿದೆ.
ತುಲಾ: ಹಂತಹಂತವಾಗಿ ಶತ್ರುಗಳ ಪ್ರಭಾವವು ಕ್ಷೀಣಿಸಲಿದೆ. ಸಾಹಿತಿಗಳಿಗೆ ಬರವಣಿಗೆಯಿಂದ ಉತ್ತಮ ಆದಾಯವು ತೋರಿಬರುವುದು. ಕಾರ್ಯಕ್ಷೇತ್ರದಲ್ಲಿ ಆಗಾಗ ವಿಘ್ನಗಳು ತೋರಿಬರಲಿದೆ. ತಾಳ್ಮೆಯಿಂದ ವರ್ತಿಸಿರಿ.
ವೃಶ್ಚಿಕ: ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಲಾಭವಿದೆ. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗ್ರತೆ ಮಾಡುವುದು. ವೃತ್ತಿರಂಗದಲ್ಲಿ ಹಿತಶತ್ರುಗಳಿಂದ ಆಗಾಗ ಮನಸ್ಸಿಗೆ ತೊಳಲಾಟವನ್ನು ಅನುಭವಿಸುವಂತಾದೀತು. ಶುಭವಿದೆ.
ಧನು: ಸಾಂಸಾರಿಕವಾಗಿ ಬೇಡಿಕೆ, ಈಡೇರಿಕೆಗಳ ಕಿರಿಕಿರಿಯ ಕಾಲವಿದು. ಕೌಟುಂಬಿಕವಾಗಿ ಸಂಬಂಧಗಳನ್ನು ಗಟ್ಟಿಗೊಳಿಸಬೇಕಾಗುತ್ತದೆ. ಅವಿವಾಹಿತರಿಗೆ ಅಚ್ಚರಿಯ ಕಂಕಣಭಾಗ್ಯದ ಯೋಗ ತಂದೀತು. ಜಾಗ್ರತೆ ಅಗತ್ಯ.
ಮಕರ: ನಿಮ್ಮ ವೈಯಕ್ತಿಕ ವಿಚಾರದಲ್ಲಿ ನೀವೇ ಹತೋಟಿಯನ್ನು ಇಟ್ಟುಕೊಳ್ಳುವುದು ಅಗತ್ಯವಿದೆ. ಹಾಗೆಂದು ವೃತ್ತಿರಂಗದಲ್ಲಿ ನಿಮ್ಮ ಸ್ವಾಭಿಮಾನಕ್ಕೆ ತೀರಾ ಚ್ಯುತಿಯೇನೂ ತೋರಿಬಾರದು. ಸಿಟ್ಟು ಸಿಡುಕು ಅದುಮಿರಿ.
ಕುಂಭ: ನಿಮ್ಮ ಪರಿಶ್ರಮ, ಆತ್ಮವಿಶ್ವಾಸ, ದೃಢನಿರ್ಧಾರಗಳು ಕಾರ್ಯಸಾಧನೆಗೆ ಅನುಕೂಲವಿರುತ್ತದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ಅಧಿಕವಾಗಲಿದೆ. ಈ ಮಧ್ಯೆ ಅನಿರೀಕ್ಷಿತ ಧನಾಗಮನವಿದೆ.
ಮೀನ: ತಾಳ್ಮೆ ಸಮಾಧಾನದಿಂದ ಮಾತನ್ನುಆಡಿರಿ. ಇಲ್ಲದಿದ್ದಲ್ಲಿ ಕಷ್ಟವಾದೀತು. ಕೌಟುಂಬಿಕ ಸಮಸ್ಯೆಗಳು ಆಗಾಗ ಋಣಾತ್ಮಕ ಚಿಂತನೆಗೆ ಗುರಿ ಮಾಡಲಿದೆ. ಕಾರ್ಯರಂಗದಲ್ಲಿ ಎಡರುತೊಡರುಗಳಿದ್ದರೂ ಅಭಿವೃದ್ಧಿ ಇದೆ.
ಎನ್.ಎಸ್. ಭಟ್