Advertisement

ಇಂದಿನ ಗ್ರಹಬಲ: ಈ ರಾಶಿಯವರಿಂದು ಕಾರ್ಯರಂಗದಲ್ಲಿ ಜಂಜಾಟಗಳಿಂದ ದೂರವಿದ್ದಷ್ಟೂ ಉತ್ತಮ

07:44 AM Feb 24, 2021 | Team Udayavani |

24-02-2021

Advertisement

ಮೇಷ: ಧಾರ್ಮಿಕ ಆಚರಣೆಗಳು ಮನಸ್ಸಿಗೆ ಶಾಂತಿ, ಸಮಾಧಾನಗಳು ನೀಡಲಿವೆ. ಆರ್ಥಿಕವಾಗಿ ನಾನಾ ರೂಪದಲ್ಲಿ ಧನ ಸಂಗ್ರಹವಿದ್ದರೂ ಖರ್ಚುವೆಚ್ಚಗಳು ಮಿತಿ ಮೀರದಂತೆ ಗಮನಹರಿಸಿರಿ. ಶುಭವಿದೆ.

ವೃಷಭ: ಉತ್ತಮ ಗ್ರಹಗಳು ನಿಮ್ಮ ಪರವಾಗಿ ಮುನ್ನಡೆಗೆ ಸಾಧಕರಾದಾರು. ಗೃಹದಲ್ಲಿ ಸಾಂಸಾರಿಕವಾಗಿ ಹಾಗೂ ಕೌಟುಂಬಿಕವಾಗಿ ಶಾಂತಿ, ಸಮಾಧಾನಗಳು ನೆಲೆಸಲಿದೆ. ವಿದ್ಯಾರ್ಥಿ ವರ್ಗಕ್ಕೆ ಮುನ್ನಡೆ ತಂದೀತು.

ಮಿಥುನ: ಚಿಕ್ಕಪುಟ್ಟ ಸಮಸ್ಯೆಗಳು ಅನಾವಶ್ಯಕವಾಗಿ ಮಾನಸಿಕ ಅಸ್ಥಿರತೆ, ಉದ್ವೇಗ, ಕೋಪತಾಪಗಳಿಗೆ ಕಾರಣವಾಗಲಿದೆ. ಸಾಂಸಾರಿಕವಾಗಿ ಕಿರಿಕಿರಿಗಳು ಹೆಚ್ಚಲಿವೆ. ಆರೋಗ್ಯದಲ್ಲಿ ಹೆಚ್ಚು ಸುಧಾರಣೆ ಕಂಡುಬಂದೀತು.

ಕರ್ಕ: ಸ್ವಯಂಕೃತ ಅಪರಾಧಗಳ ಬಗ್ಗೆ ಪಶ್ಚಾತ್ತಾಪಗಳು ಕಂಡುಬಂದೀತು. ವ್ಯವಹಾರದಲ್ಲಿ ಬುದ್ಧಿವಂತಿಕೆಯಿದ್ದರೂ, ಎಚ್ಚರಿಕೆಯಿಂದ ವ್ಯವಹರಿಸಿದರೆ ಒಳಿತು. ಅವಿವಾಹಿತರಿಗೆ ಒಳ್ಳೆಯ ಯೋಗವಿದೆ.

Advertisement

ಸಿಂಹ: ಸಹಕಾರ ಮನೋಭಾವದಿಂದ ಮುಂದುವರಿದ್ದಲ್ಲಿ ಹಂತಹಂತವಾಗಿ ಅಭಿವೃದ್ಧಿಯು ಕಂಡುಬರಲಿದೆ. ಕಾರ್ಯರಂಗದಲ್ಲಿ ಜಂಜಾಟಗಳಿಂದ ದೂರವಿದ್ದಷ್ಟೂ ಉತ್ತಮ. ಒಳ್ಳೆಯದಿದೆ.

ಕನ್ಯಾ: ಧಾರಾಳವಾಗಿ ಎಲ್ಲಾ ಕ್ಷೇತ್ರದಲ್ಲಿ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಲಿದೆ. ವೃತ್ತಿರಂಗದಲ್ಲಿ ಉತ್ತಮ ಚೇತರಿಕೆಯ ದಿನಗಳಿವು ಆದರೂ ಹಿಡಿತ ಬಲವಾಗಿರಲಿ. ಮನೆಯಲ್ಲಿ ಸಂತೃಪ್ತಿ ಇದೆ.

ತುಲಾ: ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಉಪಯೋಗಿಸಿಕೊಳ್ಳುವುದು ಉತ್ತಮ. ವ್ಯವಹಾರಿಕ ಒಪ್ಪಂದಗಳ ಬಗ್ಗೆ ಜಾಗ್ರತೆ ಮಾಡಬೇಕಾದೀತು. ಸಾಂಸಾರಿಕವಾಗಿ ಆದಷ್ಟು ತಾಳ್ಮೆ , ಸಮಾಧಾನದ ಅಗತ್ಯವಿದೆ.

ವೃಶ್ಚಿಕ: ಗ್ರಹಗಳ ಕಾಡುವಿಕೆಯು ಕಂಡುಬಂದೀತು. ಮಾನಸಿಕವಾಗಿ ಕಿರಿಕಿರಿಯಾಗಲಿದೆ. ಅನಿರೀಕ್ಷಿತ ರೂಪದಲ್ಲಿ ಖರ್ಚು ಬಂದೀತು. ದೂರ ಸಂಚಾರದಲ್ಲಿ ಜಾಗ್ರತೆ ಮಾಡಿದರೆ ಉತ್ತಮ. ಅತಿಥಿಗಳ ಆಗಮನವಿದೆ.

ಧನು: ವಿದ್ಯಾರ್ಥಿಗಳಿಗೆ ಅಭ್ಯಾಸ ಬಲ ಹಾಗೂ ಕಠಿಣ ಪರಿಶ್ರಮವು ಉತ್ತಮ ಫ‌ಲ ನೀಡಲಿದೆ. ನಿಮ್ಮ ಮನೆಯಲ್ಲಿ ಶಾಂತಿ, ಸಮಾಧಾನವಿರುವುದು. ಎಲ್ಲರೊಂದಿಗೆ ಬೆರೆತುಕೊಂಡು ಹೋದರೆ ಉತ್ತಮ.

ಮಕರ: ಆಗಾಗ ತೋರಿಬರುವ ಅಡೆತಡೆಗಳನ್ನು ಸರಿ ದಾರಿಗೆ ತರಬೇಕಾದೀತು. ವ್ಯಾಪಾರ, ವ್ಯವಹಾರದಲ್ಲಿ ಆದಷ್ಟು ಜಾಗ್ರತೆ ಮಾಡಿರಿ. ಹಿತಶತ್ರುಗಳು ತಲೆ ಎತ್ತಲಿದ್ದಾರೆ. ಅನೇಕ ರೀತಿಯಲ್ಲಿ ಕಿರಿಕಿರಿ ಕಂಡುಬಂದೀತು.

ಕುಂಭ: ಗೃಹದಲ್ಲಿ ದೇವತಾಕಾರ್ಯ ಹಾಗೂ ಧರ್ಮಕಾರ್ಯಗಳು ನಡೆಯಲಿದೆ. ಅವಿವಾಹಿತರಿಗೆ ವೈವಾಹಿಕ ಸಂಬಂಧಿತ ಮಾತುಕತೆಗಳು ಕಂಕಣಬಲದಲ್ಲಿ ಮುಕ್ತಾಯ ವಾದೀತು. ಹಿರಿಯರ ಬಗ್ಗೆ ಅಸಡ್ಡೆ ಸಲ್ಲದು.

ಮೀನ: ಕಷ್ಟಗಳನ್ನು ಎದುರಿಸುವ ಮಂದಿಗೆ ಇದು ಯಶಸ್ಸಿನ ಕಾಲವಾಗಿರುತ್ತದೆ. ಆದರೂ ಹೊಂದಾಣಿಕೆಗೆ ಅಗತ್ಯವಿದೆ. ನೀವು ನಿಮ್ಮ ಹಠ, ಛಲ ಸಾಧಿಸುವುದನ್ನು ಬಿಟ್ಟುಬಿಡಿರಿ. ಹಿರಿಯರ ಮಾತಿಗೆ ಬೆಲೆ ನೀಡಿರಿ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next