Advertisement

ಆರೋಗ್ಯಕ್ಕಾಗಿ ಪ್ರತಿನಿತ್ಯ ವ್ಯಾಯಾಮ: ಡಾ|ಭಂಡಾರಿ

06:00 AM Apr 08, 2018 | |

ಕಾರ್ಕಳ: ಆರೋಗ್ಯ ಕಾಪಾಡಿ ಕೊಳ್ಳುವ ದೃಷ್ಟಿಯಿಂದ ಮನುಷ್ಯರಿಗೆ ಪ್ರತಿನಿತ್ಯ ವ್ಯಾಯಾಮ ಅತ್ಯಗತ್ಯ. ಸದಾ ಸಂತಸದಿಂದ ಇರುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಕೇವಲ ಹಣದಿಂದಲೇ ಎಲ್ಲವನ್ನೂ ಪಡೆಯು ವುದು ಅಸಾಧ್ಯ ಎಂದು ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಪತಿ ಡಾ| ಸತೀಶ್‌ ಕುಮಾರ್‌ ಭಂಡಾರಿ ಹೇಳಿದರು.

Advertisement

ಅವರು ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್ ಫಿಸಿಯೋಥೆರಪಿಯ ಕಾರುಣ್ಯ ಸ್ವಯಂ ಸೇವಾ ಗುಂಪಿನ ವತಿಯಿಂದ ಕಾರ್ಕಳ ಕ್ರಿಸ್ತಸೇವಕಿ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವೃದ್ಧರಿಗೆ, ಅಂಗನ್ಯೂನತೆ ಹೊಂದಿದವರಿಗೆ ನಾವು ಎಷ್ಟು ಪ್ರಾಮುಖ್ಯ ನೀಡುತ್ತೇವೆ ಹಾಗೂ ಸೌಲಭ್ಯ ಒದಗಿಸು ತ್ತೇವೆ ಎನ್ನುವುದರ ಮೇಲೆ ದೇಶದ ಅಭಿವೃದ್ಧಿಯನ್ನು ಮೌಲ್ಯಮಾಪನ ಮಾಡಬಹುದಾಗಿದೆ ಎಂದರು.

ನಿಟ್ಟೆ ಡೀಮ್ಡ್ ಟು ಬಿ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್‌ ಡಾ| ಅಲ್ಕಾ ಕುಲ ಕರ್ಣಿ ಅತಿಥಿಯಾಗಿ ಮಾತನಾಡಿ ದರು. ಕ್ರಿಸ್ತಸೇವಕಿ ಆಶ್ರಮದ ಸಂಚಾಲಕಿ ರೇಷ್ಮಾ, ಕೆ.ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿಯ ಉಪ-ಡೀನ್‌ ಡಾ| ಜಯ ಪ್ರಕಾಶ್‌ ಶೆಟ್ಟಿ, ನಿಟ್ಟೆ ಗಜ್ರಿಯ ಆಸ್ಪತ್ರೆಯ ವ್ಯವಸ್ಥಾಪನ ಅಧಿಕಾರಿ ನರೇಶ್‌ ರೈ, ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್ ಫಿಸಿಯೋಥೆರಪಿಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅನಂತರ ಆಶ್ರಮ ವಾಸಿಗಳಿಗೆ ದಿನ ಬಳಕೆಯ ವಸ್ತುಗಳು, ಮೂತ್ರಶೇಖರಣಾ ಕ್ಯಾನ್‌ ಹಾಗೂ ವೃದ್ಧರಿಗೆ ಊರುಗೋಲುಗಳನ್ನು ವಿತರಿಸಲಾಯಿತು. ಆಶ್ರಮ ವಾಸಿಗಳಿಗೆ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡ ಲಾಯಿತು. ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಡಾ| ದಾನೇಶ್‌ ಕುಮಾರ್‌ ಅವರು ಸ್ವಾಗತಿಸಿ, ಡಾ| ಪುರುಷೋತ್ತಮ ಚಿಪ್ಪಳೆ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next