ನವದೆಹಲಿ : ಭಾರತದಲ್ಲಿ ದಾಖಲಾದ ದೈನಂದಿನ ಕೋವಿಡ್ ಪ್ರಕರಣಗಳು ಶನಿವಾರ ನಾಲ್ಕು ತಿಂಗಳುಗಳಲ್ಲೇ ಅತಿ ಹೆಚ್ಚು ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 800 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 841 ತಾಜಾ ಸೋಂಕುಗಳೊಂದಿಗೆ, ಸಕ್ರಿಯ 5,389 ಕ್ಕೆ ಏರಿಕೆಯಾಗಿದೆ.
ಕೇರಳದಲ್ಲಿ ಎರಡು, ಜಾರ್ಖಂಡ್ ಮತ್ತು ಮಹಾರಾಷ್ಟ್ರ ತಲಾ ಒಂದು ಮೃತ್ಯು ವರದಿಯಾಗಿದೆ. ಕೇರಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಅತಿ ಹೆಚ್ಚು ವೈರಲ್ ಸೋಂಕು ಪ್ರಕರಣಗಳಿವೆ ಎಂದು ಅಂಕಿಅಂಶಗಳು ತೋರಿಸಿವೆ.
ಭಾರತದ ದೈನಂದಿನ ಸರಾಸರಿ ಹೊಸ ಕೋವಿಡ್ ಪ್ರಕರಣಗಳು ಆರು ಪಟ್ಟು ಹೆಚ್ಚಿವೆ. ಒಂದು ತಿಂಗಳ ಹಿಂದೆ (ಫೆ 18) 112 ರಷ್ಟಿದ್ದ ದೈನಂದಿನ ಸರಾಸರಿ ಹೊಸ ಪ್ರಕರಣಗಳು ಈಗ (ಮಾರ್ಚ್ 18) 626 ಆಗಿದೆ.