ಮುಂಬಯಿ: ಗೌಡ ಸಾರಸ್ವತ ಬ್ರಾಹ್ಮಣ ಸಭಾ ದಹಿಸರ್ ಬೊರಿವಲಿ ಸಂಸ್ಥೆಯ ಹನ್ನೊಂದನೇ ವಾರ್ಷಿಕ ನವರಾತ್ರಿ ಉತ್ಸವವಕ್ಕೆ ಇಂದು ಬೆಳಗ್ಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.
ಕುಲಗುರು ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಗಳ ಕೃಪೆ ಮತ್ತು ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್ ಸಂಯ ಮೀಂದ್ರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ ದಹಿ ಸರ್ ಪೂರ್ವದ ಎನ್. ಎಲ್. ಕಾಂಪ್ಲೆಕ್ಸ್ ನ ಸಾರಸ್ವತ ಕಲ್ಚರಲ್ ಆ್ಯಂಡ್ ರಿಕ್ರಿಯೇಷನ್ ಸೆಂಟರ್ ಮೈದಾನದಲ್ಲಿ ನಿರ್ಮಿಸಿರುವ ಮಾಧವೇಂದ್ರ ಸಭಾಮಂಟಪದಲ್ಲಿ ರಜತ ಪ್ರಭಾವಳಿಯೊಂದಿಗೆ ಸ್ವರ್ಣ ಮುಕುಟ, ವಜ್ರ, ಚಿನ್ನಾಭರಣ, ಶ್ರೀಸರಸ್ವತಿ ದೇವಿಯನ್ನು ಪ್ರತಿಷ್ಠಾಪನೆ ಗೊಳಿಸಲಾಯಿತು.
ವೇದಮೂರ್ತಿ ಲಕ್ಷಿ¾à ನಾರಾಯಣ ಭಟ್ ಅವರು ತಮ್ಮ ಪೌರೋಹಿತ್ಯದಲ್ಲಿ ವಿವಿಧ ಪೂಜಾಧಿಗಳನ್ನು ನೆರವೇ ರಿಸಿ ಸದ್ಭಕ್ತರನ್ನು ಹರಸಿದರು. ಪುರೋಹಿತರಾದ ವೇದಮೂರ್ತಿ ಉಲ್ಲಾಸ್ ಭಟ್, ವೇದಮೂರ್ತಿ ಮಂಜುನಾಥ್ ಪುರಾಣಿಕ್, ವೇದ ಮೂರ್ತಿ ಪ್ರಶಾಂತ್ ಪುರಾಣಿಕ್, ವೇದಮೂರ್ತಿ ವಿನಾಯಕ ಭಟ್, ವೇದಮೂರ್ತಿ ಮೋಹನ್ ಭಟ್, ವೇದಮೂರ್ತಿ ಹರೀಶ್ ಭಟ್ ಮತ್ತಿತರರು ಪೂಜಾಧಿಗಳಲ್ಲಿ ಸಹಕ ರಿಸಿದರು. ಮಧ್ಯಾಹ್ನ ಸುಧೀಂದ್ರ ನಗರ ಭಜನಾ ಮಂಡಳಿಯವರಿಂದ ಮತ್ತು ಸಂಜೆ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಗೌಡ ಸಾರ ಸ್ವತ್ ಬ್ರಾಹ್ಮಣ್ ಸಭಾ ದಹಿಸರ್ ಬೊರಿವಲಿ ಸಂಸ್ಥೆಯ ಸಂಚಾಲಕರಾದ ಕುಂದಾಪುರ ಶ್ರೀನಿವಾಸ ಪ್ರಭು, ಜಿ. ಡಿ. ರಾವ್, ಸಿ. ಎಂ. ಎಸ್ ರಾವ್, ಶೋಭಾ ವಿ. ಕುಲಕರ್ಣಿ, ಸುಗುಣಾ ಕೆ. ಕಾಮತ್, ಅಧ್ಯಕ್ಷ ಕೆ. ಆರ್. ಮಲ್ಯ, ಉಪಾಧ್ಯಕ್ಷ ಸಾಣೂರು ಮೋಹನ್ ವಿ. ಕಾಮತ್, ಗೌರವ ಪ್ರಧಾನ ಕಾರ್ಯದರ್ಶಿ ಎಂ. ಉದಯ ಪಡಿ ಯಾರ್, ಗೌರವ ಕೋಶಾಧಿಕಾರಿ ಮೋಹನ್ ಎ. ಕಾಮತ್, ಜತೆ ಕಾರ್ಯದರ್ಶಿಗಳಾದ ವಿನೋದ್ ಕೆ. ಪ್ರಭು ಮತ್ತು ಶಿವಾನಂದ ಇ. ಭಟ್ ಸೇರಿದಂತೆ ಸೇವಾಕರ್ತರು, ಭಕ್ತರ ನೇಕರು ಉಪಸ್ಥಿತರಿದ್ದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್