Advertisement

ಅಪ್ಪ ಮಾರಾಟಕ್ಕಿದ್ದಾನೆ !: ತಂದೆ ಮೇಲೆ ಮಗಳ ಹಾಸ್ಯಾಸ್ಪದ ಪ್ರತೀಕಾರ

08:41 PM Oct 04, 2023 | Pranav MS |

ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಮಕ್ಕಳ ಚುರುಕುತನಕ್ಕೆ ಮಾರು ಹೋಗದವರೇ ಇಲ್ಲ, ಸ್ವಲ್ಪ ಕಾಲದ ಹಿಂದಿನ ಮಕ್ಕಳಿಗೂ ಈಗಿನ ಮಕ್ಕಳಿಗೂ ಅಬ್ಬಬ್ಟಾ ಎನಿಸುವಷ್ಟು ವ್ಯತ್ಯಾಸವಿದೆ. ಜಾಲತಾಣದಲ್ಲಿ 8 ವರ್ಷದ ಪೋರಿಯೊಬ್ಬಳ ಪೋಸ್ಟ್‌ ವೈರಲ್‌ ಆಗಿದ್ದು, ತಂದೆ ಮೇಲಿನ ಆಕೆಯ ತುಂಟ ಪ್ರತೀಕಾರ ಕಂಡು ನೆಟ್ಟಿಗರೂ ಹುಬ್ಬೇರಿಸಿದ್ದಾರೆ.

Advertisement

ಹೌದು, ಟ್ವಿಟರ್‌ ಬಳಕೆದಾರರಾದ ಮೆಲನ್‌ ಎಂಬವರು ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದರು. ಅದರಲ್ಲಿ ಅಸ್ಪಷ್ಟ ಅಕ್ಷರಗಳಲ್ಲಿ ಮಗುವೊಂದು ಬರೆದಿರುವ ಪತ್ರವಿತ್ತು. ಆ ಪತ್ರದಲ್ಲಿ ಏನಿತ್ತು ಗೊತ್ತೇ ? ಫಾದರ್‌ ಫಾರ್‌ ಸೇಲ್‌ ಎಂದು.

ಹೌದು, ಮೆಲನ್‌ ತಮ್ಮ ಪುತ್ರಿಯ ಯಾವುದೋ ಬೇಡಿಕೆಯನ್ನು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಅವರ 8 ವರ್ಷದ ಮಗಳು 2 ಲಕ್ಷ ರೂ.ಗಳಿಗೆ ಅಪ್ಪನನ್ನು ಮಾರಾಟ ಮಾಡುತ್ತಿದ್ದೇನೆ, ಹೆಚ್ಚಿನ ಮಾಹಿತಿಗಾಗಿ ಡೋರ್‌ ಬೆಲ್‌ ಮಾಡಿ ಎಂದು ಫ‌ಲಕ ಬರೆದು ನೇತು ಹಾಕಿ, ಪ್ರತೀಕಾರ ತೆಗೆದುಕೊಂಡಿದ್ದಾಳೆ.ಇದನ್ನು ಟ್ವಿಟರ್‌ನಲ್ಲಿ ಮೆಲನ್‌ ಹಂಚಿಕೊಂಡಿದ್ದು, ಬಹುಶಃ ನನ್ನ ಮೌಲ್ಯ ಇಷ್ಟೇ ಎಂದು ಹಾಸ್ಯ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next