Advertisement

ಸಾಮಾಜಿಕ ಜಾಲತಾಣದಲ್ಲಿ “ದಡ್ಡ’ ಪ್ರವೀಣನ ಹವಾ: Watch

03:50 PM Jun 23, 2018 | Team Udayavani |

“ಕಿರಿಕ್ ಪಾರ್ಟಿ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ರಿಷಬ್​ ಶೆಟ್ಟಿ “ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈ’ ಎಂಬ ಮಕ್ಕಳ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದು, ಇದೀಗ ಚಿತ್ರದ “ದಡ್ಡ’ ಎಂಬ ಹಾಡನ್ನು ರಕ್ಷಿತ್ ಶೆಟ್ಟಿ ಹಾಗೂ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಯೂಟ್ಯೂಬ್ ಟ್ರೆಂಡಿಂಗ್​ನಲ್ಲಿದೆ. 

Advertisement

ಚಿತ್ರಕ್ಕೆ “ರಾಮಾ ರಾಮಾ ರೇ’ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದು, “ದಡ್ಡ’ ಹಾಡನ್ನು ಅವರೇ ಹಾಡಿರುವುದು ವಿಶೇಷ. ಇನ್ನು ರಂಜನ್ “ದಡ್ಡ’ ಹಾಡಿನಲ್ಲಿ ಪ್ರವೀಣನ ಪಾತ್ರ ಮಾಡಿದ್ದು, ಸದ್ಯ ಎಲ್ಲ ಶಾಲಾ ಹುಡುಗರ ಯೂತ್​ ಐಕಾನ್ ಆಗಿದ್ದಾನೆ. ಇದೊಂದು ಕಾಸರಗೋಡು ಹಿನ್ನೆಲೆಯಲ್ಲಿ ಸಾಗುವ ಮಕ್ಕಳ ಚಿತ್ರವಾಗಿದ್ದು, ಮಕ್ಕಳ ಜೊತೆ ತಲೆಹರಟೆ ಮಾಡ್ಕೊಂಡು ಹಿರಿಯ ನಟ ಅನಂತ್‍ನಾಗ್ ಇಲ್ಲಿ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಚಿತ್ರಕ್ಕೆ ವೆಂಕಟೇಶ್‌ ಅಂಗುರಾಜ್‌ ಕ್ಯಾಮೆರಾ ಕೈಚಳಕವಿದ್ದು, ರಿಷಬ್​ ಪತ್ನಿ ಪ್ರಗತಿ ಶೆಟ್ಟಿ ಸಹ ಚಿತ್ರದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಚಿತ್ರದ ವಿತರಣಾ ಹಕ್ಕನ್ನು ಜಯಣ್ಣ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next