Advertisement

Dada Palke Award: ವಹೀದಾ ರೆಹಮಾನ್‌ಗೆ ದಾದಾ ಪಾಲ್ಕೆ ಪ್ರಶಸ್ತಿ

11:29 PM Oct 17, 2023 | Team Udayavani |

ಹೊಸದಿಲ್ಲಿ: ಖ್ಯಾತ ಚಲನಚಿತ್ರ ನಟಿ ವಹೀದಾ ರೆಹಮಾನ್‌ಗೆ ಪ್ರತಿಷ್ಠಿತ ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಪ್ರದಾನ ಮಾಡಿದರು.
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಿದ್ದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ವಹೀದಾ, ಗೌರವವನ್ನು ಚಿತ್ರೋದ್ಯಮಕ್ಕೆ ಸಮರ್ಪಿಸಿದರು. ವಹೀದಾ ಅವರು ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಎಂಟನೇ ಮಹಿಳೆಯಾಗಿದ್ದಾರೆ. “ಗೌರವ ಹಾಗೂ ವಿನಮ್ರತೆಯಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ. ನನ್ನ ಸಾಧನೆಗೆ ಆತ್ಮೀಯ ಚಿತ್ರೋದ್ಯಮವೇ ಕಾರಣ. ಉನ್ನತ ಮಟ್ಟದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ತಂತ್ರಜ್ಞರು, ಬರಹಗಾರರು, ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡುವ ಅದೃಷ್ಟ ನನಗೆ ಒಲಿಯಿತು’ ಎಂದು ವಹೀದಾ ರೆಹಮಾನ್‌ ಹೇಳಿದರು.

Advertisement

ಅಲ್ಲು ಅರ್ಜುನ್‌, ಅಲಿಯಾ ಭಟ್‌ಗೆ ಪ್ರಶಸ್ತಿ: ಇದೇ ವೇಳೆ ನಟ ಅಲ್ಲು ಅರ್ಜುನ್‌ಗೆ ಶ್ರೇಷ್ಠ ನಟ ಪ್ರಶಸ್ತಿ ಹಾಗೂ ನಟಿ ಅಲಿಯಾ ಭಟ್‌ಗೆ ಶ್ರೇಷ್ಠ ನಟಿ ಪ್ರಶಸ್ತಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕಾರ ವೇಳೆ ತಮ್ಮ ಮದುವೆ ಸೀರೆಯಲ್ಲಿ ಅಲಿಯಾ ಭಟ್‌ ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next