Advertisement

ಅಪ್ಪ ಅಂದರೆ ಭಯ, ಪ್ರೀತಿಯ ಸಮ್ಮಿಶ್ರಣದ ನೆನಪು!

04:14 PM Jun 16, 2018 | Sharanya Alva |

“ಅಪ್ಪ” ಆ ಶಬ್ದದಲ್ಲಿಯೇ ಅದೇನೋ ಅಪರಿಮಿತ ಶಕ್ತಿ ಅಡಗಿದೇ..ಈ ಭಯ, ಪ್ರೀತಿ ಎನ್ನುವ ಎರಡು ಸಮ್ಮಿಶ್ರಗಳು ಒಂದು ಪದ ಕೇಳಿದ ತಕ್ಷಣ ಬರುತ್ತದೆ ಅಂದರೆ ಅದು ಅಪ್ಪ ಅನ್ನುವ ಪದಕ್ಕೇ ಮಾತ್ರ..ಆತ ಕೂಡಾ ಒಬ್ಬ ಅಪ್ಪನಿಗೆ ಮಗನಾಗಿ ಹಲವಾರು ರೀತಿಯಲ್ಲಿ ಒಂದಷ್ಟು ಅನುಭವಗಳನ್ನು ಪಡೆದಿರುತ್ತಾನೆ. ತನ್ನಪ್ಪ ತನಗೆ ಆ ರೀತಿಯ ಅನುಭವವನ್ನು ನೀಡುವಾಗ ಎಷ್ಟೊ ಸಲ ಅತಿರೇಕ ಅನ್ನಿಸಿದರು ,ತಾನು ಒಬ್ಬ ಅಪ್ಪನಾದಾಗ ಅತಿರೇಕವಾಗಿದೆಲ್ಲಾ ಅಗತ್ಯ ಅನ್ನಿಸುತ್ತದೆ.

Advertisement

ಅಪ್ಪನಾದವನು ತನ್ನ ಮಗು ಕಣ್ಣೆದುರೆ  ಜಾರಿ ಬಿದ್ದರು ಮೇಲೆತ್ತಲು ಹೋಗುವುದಿಲ್ಲ, ಏಕೆಂದರೆ ಮುಂದಿನ ಏಳಿಗೆಯ ಅವಕಾಶಕ್ಕಾಗಿ,ಅತ್ತಾಗ ಕಣ್ಣೊರೆಸುವ ಪ್ರಯತ್ನವನ್ನು ಮಾಡುವುದಿಲ್ಲಾ, ಕಾರಣ  ಮುಂದಿನಾ ನಗುವನ್ನು ಅರಸಿಕೊಂಡು ಹೋಗಲಿ ಎಂದು. ನೋವಲ್ಲಿದ್ದಾಗ ಸಂತೈಸುವ ಮಾತಿಲ್ಲಾ, ಅವರ ಸಂತೋಷವನ್ನು ಅವರೇ ಹುಡುಕಬೇಕೆಂದು.ಹಾಗೆಯೇ ಎಲ್ಲಾ ಅಪ್ಪಂದಿರು ಒಂದೇ ರೀತಿ ಇರುವುದಿಲ್ಲ.ಕೆಲವರು ತಮ್ಮ ಪ್ರೀತಿಯನ್ನು  ವ್ಯಕ್ತಪಡಿಸುತ್ತಾರೆ, ಇನ್ನು ಕೆಲವರು ಮನಸ್ಸಿನಲ್ಲೇ ಇಟ್ಟುಕೊಂಡಿರುತ್ತಾರೆ.

ಕೆಲವರೂ ಯಾವಾಗ್ಲೂ ತಮ್ಮ ಮಕ್ಕಳಿಗೆ ಗದರಿಸುತ್ತಾ ಇರ್ತಾರೆ ಅಂದರೆ ಅವರಿಗೆ ಅವರ ಮಕ್ಕಳ ಮೇಲೆ ನಂಬಿಕೆ ಇಲ್ಲದೆ ಇರುವುದಲ್ಲಾ, ಬದಲಿಗೆ ಪ್ರೀತಿಯಿಂದಲೇ ತಿದ್ದೋಕೆ ಹೋದ್ರೆ ಮಕ್ಕಳಿಗೆ ಮಾಡಿರೊ ತಪ್ಪಿನ ಅರಿವು ಆಗೋದು ಕಮ್ಮಿಯಾಗುತ್ತೆ ಅಂತ.

ಅಪ್ಪ ಹೇಗೆ ಇರಲಿ, ಅವರು ಕುಡುಕ ಆಗಿರಲಿ, ಬೇಜವಾಬ್ದಾರಿ ಮನುಷ್ಯ ಆಗಿರಲಿ, ಸೋಮಾರಿ ಆಗಿರಲಿ, ಜಿಪುಣ ಆಗಿರಲಿ ಏನೇ ಆಗಿದ್ರೂ ಕೂಡಾ ಎಲ್ಲೋ ಒಂದು ಕಡೆ ಅದರಿಂದಾಗಿ ತನ್ನ ಮಕ್ಕಳಿಗೆ ನೋವಾಗುತ್ತೆ  ಅನ್ನೋದು ತನ್ನ ತಲೆಗೆ ಬಂದಾಗ, ಎಲ್ಲದ್ರಿಂದಲೂ ಹೊರಗೆ ಬರೋ ಪ್ರಯತ್ನ ಮಾಡುತ್ತಾನೆ,ಆದ್ರೆ ಅದು ತಲೆಗೆ ಬರೋದೆ ಸ್ವಲ್ಪ ನಿಧಾನ.

ಇನ್ನೂ ಅಪ್ಪ ಇಲ್ಲದೆ ಇರೊರದ್ದು ಇನ್ನೊಂತರ ನೋವು..ಕೆಲವರು ಹುಟ್ಟಿದಾಗಿಂದ ಅಪ್ಪ‌ನನ್ನು ನೋಡಿನೆ ಇರೋದಿಲ್ಲ. ಇನ್ನೂ ಕೆಲವರು ಅಪ್ಪ ಅಂದರೆ ಇವರು ಅಂತ ಗುರುತಿಸೋ ವಯಸ್ಸಿನಲ್ಲಿ ಅವರನ್ನಾ ಕಳೆದುಕೊಂಡಿರುತ್ತಾರೆ.

Advertisement

ಚಿಕ್ಕವರಿದ್ದಾಗ ಜೊತೆಗಿರುತ್ತಾರೆ,ಆದರೆ ಯಾವುದೇ ಸವಿ ನೆನಪುಗಳು ಆರಂಭ ಆಗಿರುವುದಿಲ್ಲ. ಏಕೆಂದರೆ ಆಗ ಮಕ್ಕಳಿಗೆ ತಿಳಿವಳಿಕೆ ಕಡಿಮೆ. ಅಮ್ಮನ ಮಡಿಲಿಂದ ಹೊರಗೆ ಬರಲ್ಲಾ.ಇನ್ನು ಮಕ್ಕಳು ದೊಡ್ದವರಾದ ಮೇಲೆ ಅಪ್ಪನ ಜೊತೆ ಒಂದಷ್ಟು ನೆನಪುಗಳನ್ನು ಹುಟ್ಟು ಹಾಕಬೇಕು ಅನ್ನೋ ಅಷ್ಟರಲ್ಲಿ ಅವರೇ ಇರಲ್ಲಾ. ಹೀಗೆ ನಮ್ಮ ಜೀವನ ಎಂಬ ನಾಟಕದಲ್ಲಿ ಅಪ್ಪಾ ಅನ್ನೊ ಪಾತ್ರ ಎಷ್ಟು ಮುಖ್ಯ ಅನ್ನೋದು ಅಪ್ಪನ ಆಶ್ರಯ ಇಲ್ಲದೆ ಇರುವವರಿಗೆ ಗೊತ್ತಿರುತ್ತದೆ.ಅಪ್ಪ ಇನ್ನೂ ಹೇಗೆ ಹೇಗೆ ಪಾತ್ರ ವಹಿಸುತ್ತಾನೆ ಎನ್ನುದು ಅಪ್ಪನ ಆಶ್ರಯದಲ್ಲಿ ಇರುವವರಿಗೆ ಗೊತ್ತಿರುತ್ತದೆ.

*ರಂಜನಾ.ಎನ್.ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next