Advertisement

ನಿನ್ನಂಥ ಅಪ್ಪ ಇಲ್ಲಾ…

11:11 AM Feb 27, 2020 | mahesh |

ಹೆಣ್ಣುಮಕ್ಕಳಿಗೂ ಶಿಕ್ಷಣ, ಸಮಾನತೆ ಸಿಗಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಕೋಟ್ಯಂತರ ಹೆಣ್ಣುಮಕ್ಕಳು ಅದನ್ನು ಪಡೆದುಕೊಂಡಿದ್ದಾರೆ ಕೂಡಾ. ಆದರೆ, ಬಡ ಕುಟುಂಬಗಳ, ಹಿಂದುಳಿದ ಪ್ರದೇಶಗಳ ಹುಡುಗಿಯರಿಗೆ ಶಿಕ್ಷಣವಿನ್ನೂ ಗಗನಕುಸುಮವೇ. ಕೆಲವು ಹಳ್ಳಿಗಳಲ್ಲಿ ಶಾಲೆಗಳೇ ಇಲ್ಲವಾದ್ದರಿಂದ, ಮಗಳನ್ನು ದೂರದ ಶಾಲೆಗೆ ಕಳಿಸಲು ಹೆತ್ತವರು ಹೆದರುತ್ತಾರೆ. “ಅಷ್ಟು ಕಷ್ಟಪಟ್ಟು ಓದಿ ಏನಾಗಬೇಕಿದೆ? ಮನೆಯಲ್ಲೇ ಇರು’ ಎಂದುಬಿಡುತ್ತಾರೆ. ಆದರೆ, ಕೆಲವೇ ಕೆಲವು ಅಪ್ಪಂದಿರು ಮಾತ್ರ, ಮಗಳನ್ನು ಓದಿಸುವ ಹಠಕ್ಕೆ ಬೀಳುತ್ತಾರೆ. ಅಂಥವರಲ್ಲಿ ಅಫ್ಘಾನಿಸ್ತಾನದ ಮಿಯಾ ಖಾನ್‌ ಕೂಡಾ ಒಬ್ಬರು.

Advertisement

ಬುಡಕಟ್ಟು ಜನಾಂಗಕ್ಕೆ ಸೇರಿದ ಮಿಯಾ ಖಾನ್‌ರ ಹಳ್ಳಿಯಲ್ಲಿ ಶಾಲೆಯಾಗಲಿ, ಸಾರಿಗೆ ಸೌಕರ್ಯವಾಗಲಿ ಇಲ್ಲ. ಅವರು ಓದು-ಬರಹವನ್ನು ಬಲ್ಲವರೂ ಅಲ್ಲ. ಆದರೆ, ಮಗಳನ್ನು ಚೆನ್ನಾಗಿ ಓದಿಸಬೇಕು ಎಂಬ ಕನಸು ಅವರದ್ದು. ಯಾಕಂದ್ರೆ, ಸುತ್ತಮುತ್ತ ಯಾವ ಆಸ್ಪತ್ರೆಯಲ್ಲೂ ಲೇಡಿ ಡಾಕ್ಟರ್‌ಗಳೇ ಇಲ್ಲವಂತೆ. ತನ್ನ ಮಗಳು ಮುಂದೆ ವೈದ್ಯೆಯಾಗಿ, ಜನರ ಸೇವೆ ಮಾಡಬೇಕು ಎಂಬುದು ಮಿಯಾ ಖಾನ್‌ರ ಆಸೆ. ಹಾಗಾಗಿ, 12 ಕಿ.ಮೀ. ದೂರದಲ್ಲಿರುವ ಶಾಲೆಗೆ ಅವಳನ್ನು ಪ್ರತಿದಿನ ತಮ್ಮ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಾರೆ. ತರಗತಿಗಳು ಮುಗಿಯುವವರೆಗೆ ಕಾದು ವಾಪಸ್‌ ಕರೆದುಕೊಂಡು ಬರುತ್ತಾರೆ. ಈ ಪರಿಪಾಠ ಒಂದು ದಿನವೂ ತಪ್ಪಿಲ್ಲವಂತೆ. ಸದ್ಯ 6ನೇ ತರಗತಿಯಲ್ಲಿ ಓದುತ್ತಿರುವ ಮಗಳು ರೋಜಿ, “ನಮ್ಮ ಅಪ್ಪನ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ. ಚೆನ್ನಾಗಿ ಓದಿ ಮುಂದೆ ಡಾಕ್ಟರ್‌ ಆಗ್ತಿನಿ’ ಅನ್ನುತ್ತಾ ಅಪ್ಪನ ಹೆಮ್ಮೆಯನ್ನು ಹೆಚ್ಚಿಸುತ್ತಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next