Advertisement
ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಕೊನೆಯ ತನಕ ಅತ್ಯಂತ ಕುತೂಹಲಕಾರಿಯಾಗಿ ಸಾಗಿತು. ಅಂತ್ಯದಲ್ಲಿ ತಮಿಳ್ ತಲೈವಾಸ್ ತಂಡಕ್ಕೆ ನೀರು ಕುಡಿಸಿದ ದಬಾಂಗ್ ಡೆಲ್ಲಿ ಕೇವಲ ಒಂದು ಅಂಕದ ಅಂತರದಿಂದ ರೋಚಕ ಜಯ ಸಾಧಿಸಿ ಬೀಗಿತು. ಮೊದಲ ಪಂದ್ಯದಲ್ಲೂ ದಬಾಂಗ್ ಡೆಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ವಿರುದ್ಧ ಇದೇ ರೀತಿಯಲ್ಲಿ (34-33) ಜಯಿಸಿದ್ದನ್ನು ಸ್ಮರಿಸಬಹುದು. ಇದು ಕೂಟದಲ್ಲಿ ದಬಾಂಗ್ ಡೆಲ್ಲಿ ದಾಖಲಿಸಿದ ಸತತ ಎರಡನೇ ಗೆಲುವು. ಕೊನೆಯ 3 ನಿಮಿಷಗಳಲ್ಲಿ ಪಂದ್ಯದ ಚಿತ್ರಣವೇ ಬದಲಾದದ್ದು ವಿಶೇಷ.
ದಬಾಂಗ್ ಡೆಲ್ಲಿ -ತಮಿಳ್ ತಲೈವಾಸ್ ನಡುವಿನ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಮೊದಲ ಅವಧಿಯಲ್ಲಿ ತಲೈವಾಸ್ 18-11ರ ಮುನ್ನಡೆ ಪಡೆದಿತ್ತು. ಆದರೆ ಎರಡನೇ ಅವಧಿಯಲ್ಲಿ ಡೆಲ್ಲಿ ಮಿಂಚಿನ ಆಟಪ್ರದರ್ಶಿಸಿತು. ಕೊನೆಯ ನಿಮಿಷದಲ್ಲಿ ಅಂಕವನ್ನು 29-29ಕ್ಕೆ ತಂದು ಸಮ ಮಾಡಿಕೊಂಡಿತ್ತು.
Related Articles
Advertisement
ದಿಗ್ಗಜರಿದ್ದರೂ ಸೋತ ತಲೈವಾಸ್ತಮಿಳ್ ತಲೈವಾಸ್ ತಂಡದಲ್ಲಿ ರಾಹುಲ್ ಚೌಧರಿ, ಅಜಯ್ ಠಾಕೂರ್ ಹಾಗೂ ಮಂಜಿತ್ ಚಿಲ್ಲರ್ ಅವರಂತಹ ಖ್ಯಾತನಾಮರಿದ್ದರೂ ಗೆಲುವು ಸಿಗಲಿಲ್ಲ. ರಾಹುಲ್ ಚೌಧರಿ ಒಟ್ಟು 7 ಅಂಕಕ್ಕೆ ಸೀಮಿತರಾದರು. 13 ಸಲ ರೈಡ್ ಮಾಡಿದ ಅವರು 6 ಸಲ ಬರಿಗೈನಿಂದಲೇ ವಾಪಸ್ ಆಗಿದ್ದರು. ಅಜಯ್ ಠಾಕೂರ್ 16 ಸಲ ರೈಡಿಂಗ್ ಮಾಡಿ ಗಳಿಸಿದ್ದು ಕೇವಲ 5 ಅಂಕ ಮಾತ್ರ. ಮಂಜಿತ್ ಚಿಲ್ಲರ್ 5 ಅಂಕವನ್ನು ಟ್ಯಾಕಲ್‌ನಿಂದ ಗಳಿಸಿದರು. ಆದರೆ ಆಲ್‌ರೌಂಡರ್ ಆಗಿರುವ ಅವರು ಸಂಪೂರ್ಣವಾಗಿ ರೈಡಿಂಗ್‌ನಲ್ಲಿ ವಿಫಲರಾದರು. ಉಳಿದಂತೆ ಅಜಿತ್ (2 ಅಂಕ), ಮೋಹಿತ್ ಚಿಲ್ಲರ್ (2 ಅಂಕ) ಹಾಗೂ ರಾಣ್ ಸಿಂಗ್ (1 ಅಂಕ) ಅವರಿಂದ ಪವಾಡ ಸಾಧ್ಯವಾಗಲಿಲ್ಲ.